AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದೃಷ್ಟ ಮತ್ತು ಅಂಡಾಶಯದ ಲಾಟರಿ; ತಮ್ಮ ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ವಾರನ್ ಬಫೆಟ್

Warren Buffett reveals Ovarian Lottery and Luck factors in his success: ವಿಶ್ವದ ಹತ್ತು ಅತಿ ಶ್ರೀಮಂತರಲ್ಲಿ ಒಬ್ಬರಾದ ವಾರನ್ ಬಫೆಟ್ ಅವರು ತಮ್ಮ ಯಶಸ್ಸಿನ ರಹಸ್ಯಗಳನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. 800 ಕೋಟಿ ಜನರ ಪೈಕಿ 10 ಅತಿ ಅದೃಷ್ಟಶಾಲಿಗಳಲ್ಲಿ ತಾವೂ ಒಬ್ಬರು ಎಂದಿದ್ದಾರೆ. ತಮ್ಮ ಯಶಸ್ಸಿಗೆ ಪರಿಶ್ರಮಕ್ಕಿಂತ ಹೆಚ್ಚಾಗಿ ಲಕ್ ಕಾರಣ ಎನ್ನುತ್ತಾರೆ. ಹಾಗೆಯೇ, ಅಂಡಾಶಯದ ಲಾಟರಿ ಸಿದ್ಧಾಂತವನ್ನು ಪುನರುಚ್ಚರಿಸಿದ್ದಾರೆ.

ಅದೃಷ್ಟ ಮತ್ತು ಅಂಡಾಶಯದ ಲಾಟರಿ; ತಮ್ಮ ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ವಾರನ್ ಬಫೆಟ್
ವಾರನ್ ಬಫೆಟ್Image Credit source: Ankit Agrawal/Mint via Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 21, 2026 | 7:14 PM

Share

ಮುಖ್ಯಾಂಶಗಳು

  • 800 ಕೋಟಿ ಜನರ ಪೈಕಿ 10 ಅತಿ ಅದೃಷ್ಟಶಾಲಿಗಳಲ್ಲಿ ತಾವೂ ಒಬ್ಬರು ಎಂದಿದ್ದಾರೆ.
  • ತಮ್ಮ ಯಶಸ್ಸಿಗೆ ಪರಿಶ್ರಮಕ್ಕಿಂತ ಹೆಚ್ಚಾಗಿ ಲಕ್ ಕಾರಣ ಎನ್ನುತ್ತಾರೆ.
  • ಹಾಗೆಯೇ, ಅಂಡಾಶಯದ ಲಾಟರಿ ಸಿದ್ಧಾಂತವನ್ನು ಪುನರುಚ್ಚರಿಸಿದ್ದಾರೆ.

ವಿಶ್ವದ ಅತ್ಯಂತ ಯಶಸ್ವಿ ಹಾಗೂ ಪ್ರಸಿದ್ಧ ಹೂಡಿಕೆದಾರರಲ್ಲಿ ಒಬ್ಬರಾದ ವಾರನ್ ಬಫೆಟ್ (Warren Buffett), ತಮ್ಮ ಅಪಾರ ಯಶಸ್ಸಿನ ಹಿಂದಿರುವ ಮುಖ್ಯ ರಹಸ್ಯ “ಅದೃಷ್ಟ” ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ವಿಶ್ವದ ಟಾಪ್-10 ಶ್ರೀಮಂತರಲ್ಲಿ ಒಬ್ಬರಾದ ಅವರು, ಜಗತ್ತಿನ 800 ಕೋಟಿ ಜನಸಂಖ್ಯೆಯಲ್ಲಿ ತಾವು ಅತ್ಯಂತ ಅದೃಷ್ಟಶಾಲಿ 10 ಜನರಲ್ಲಿ ಒಬ್ಬರಿರಬಹುದು ಎಂದಿದ್ದಾರೆ. ತಮ್ಮ ಜೀವನದ ಯಶಸ್ಸಿಗೆ ‘ಅಂಡಾಶಯದ ಲಾಟರಿ’ಯೂ (Ovarian Lottery) ಕಾರಣವಿರಬಹುದು ಎಂದಿದ್ದಾರೆ ಅಮೆರಿಕದ ಈ ಹಿರಿಯ ಹೂಡಿಕೆದಾರ.

‘ಅಂಡಾಶಯದ ಲಾಟರಿ’ ಎಂದರೇನು?

ವಾರನ್ ಬಫೆಟ್ ಅವರು ತಮ್ಮ ಜೀವನದ ಯಶಸ್ಸನ್ನು ವಿವರಿಸಲು ‘ಅಂಡಾಶಯದ ಲಾಟರಿ’ (Ovarian Lottery) ಎಂಬ ಪರಿಕಲ್ಪನೆಯನ್ನು ಬಳಸುತ್ತಾರೆ. ಒಬ್ಬ ವ್ಯಕ್ತಿ ಯಾವ ದೇಶದಲ್ಲಿ, ಯಾವ ಕಾಲಘಟ್ಟದಲ್ಲಿ, ಯಾವ ಲಿಂಗದಲ್ಲಿ ಮತ್ತು ಎಂತಹ ಕುಟುಂಬದಲ್ಲಿ ಜನಿಸುತ್ತಾನೆ ಎಂಬುದು ಆತನ ನಿಯಂತ್ರಣದಲ್ಲಿರುವುದಿಲ್ಲ. ಇದು ಪೂರ್ಣವಾಗಿ ಲಾಟರಿ ಎತ್ತಿದಂತೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಖರೀದಿಸುವ ಮುನ್ನ, ಈ 5 ಅಂಶಗಳು ಗಮನದಲ್ಲಿರಲಿ…

ಬಫೆಟ್ ಅವರು 1930ರಲ್ಲಿ ಅಮೆರಿಕದಲ್ಲಿ ಪುರುಷನಾಗಿ ಜನಿಸಿದ್ದನ್ನೇ ದೊಡ್ಡ ಅದೃಷ್ಟ ಎಂದು ಕರೆಯುತ್ತಾರೆ. “ಅಮೆರಿಕದಲ್ಲಿ ಜನಿಸುವ ಸಾಧ್ಯತೆ 30ರಲ್ಲಿ 1 ರಷ್ಟಿತ್ತು (30-to-1 against). ನಾನು ಆ ಲಾಟರಿಯನ್ನು ಗೆದ್ದೆ” ಎಂದು ಅವರು ಹೇಳುತ್ತಾರೆ. ನಿರ್ದಿಷ್ಟ ಕಾಲ, ನಿರ್ದಿಷ್ಟ ಪ್ರದೇಶ, ನಿರ್ದಿಷ್ಟ ಕುಟುಂಬದಲ್ಲಿ ಜನಿಸುವುದು ಅದೃಷ್ಟ. ಯಶಸ್ಸಿಗೆ ಬೇಕಾದ ವಾತಾವರಣ, ನೆರವು, ಪೋಷಣೆ ಎಲ್ಲವೂ ಸಿಗುತ್ತದೆ ಎಂಬುದು ಅವರ ಅನಿಸಿಕೆ.

ತಮ್ಮಲ್ಲಿರುವ ವ್ಯಾಪಾರ ಮತ್ತು ಹೂಡಿಕೆ ಮೌಲ್ಯಮಾಪನ ಮಾಡುವ ಕೌಶಲ್ಯವು ಅಮೆರಿಕದ ಬಂಡವಾಳಶಾಹಿ (Capitalist) ವ್ಯವಸ್ಥೆಯಲ್ಲಿ ಅಪಾರ ಯಶಸ್ಸು ನೀಡಿತು. ಅದೇ ತಾವು ಬೇರೆ ಯಾವುದಾದರೂ ದೇಶದಲ್ಲಿ ಅಥವಾ ಬೇರೆ ಕಾಲಘಟ್ಟದಲ್ಲಿ ಹುಟ್ಟಿದ್ದರೆ ಈ ಕೌಶಲ್ಯಕ್ಕೆ ಯಾವುದೇ ಮೌಲ್ಯವಿರುತ್ತಿರಲಿಲ್ಲ ಎಂದು ಬಫೆಟ್ ತಮ್ಮ ಅನಿಸಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ತಂದೆ ಪ್ಲಂಬರ್ ಆಗಿದ್ದರೆ ಸಾಧ್ಯವಿತ್ತೆ?

ಪ್ರತಿಯೊಬ್ಬರಿಗೂ ಹುಟ್ಟಿನಿಂದಲೇ ಸಮಾನ ಅವಕಾಶಗಳು ಸಿಗುವುದಿಲ್ಲ. ತಮ್ಮ ತಂದೆ ಸ್ಟಾಕ್ ಬ್ರೋಕರ್ ಆಗಿದ್ದರಿಂದ ಚಿಕ್ಕ ವಯಸ್ಸಲ್ಲೇ ಷೇರು ಪ್ರಪಂಚಕ್ಕೆ ಕಾಲಿಟ್ಟು ಈಜಿದೆ. ಅದೇ ತಮ್ಮ ತಂದೆ ಪ್ಲಂಬರ್ ಆಗಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದು ಬರ್ಕ್​ಶೈರ್ ಹಾಥವೇ ಉದ್ಯಮ ಸಾಮ್ರಾಜ್ಯದ ಅಧಿಪತಿಯಾದ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

ಕೆರೆಯ ನೀರನ್ನು ಕೆರೆಗೆ ಚೆಲ್ಲಿ…

ಹುಟ್ಟಿನ ಲಾಟರಿಯಲ್ಲಿ “ತಪ್ಪಾದ ಟಿಕೆಟ್” ಪಡೆದವರಿಗೆ (ಅಂದರೆ ಬಡತನ ಅಥವಾ ಕಷ್ಟದ ಪರಿಸ್ಥಿತಿಯಲ್ಲಿ ಹುಟ್ಟಿದವರಿಗೆ) ಸಮಾಜ ಮತ್ತು ಸರ್ಕಾರ ನೆರವಾಗಬೇಕು. ಶ್ರೀಮಂತರು ತಮಗಿರುವ ಸೌಲಭ್ಯ ಮತ್ತು ಅದೃಷ್ಟಕ್ಕೆ ಅನುಗುಣವಾಗಿ ಹೆಚ್ಚಿನ ತೆರಿಗೆ ಪಾವತಿಸಬೇಕು ಮತ್ತು ಸಮಾಜಕ್ಕೆ ಮರಳಿ ನೀಡಬೇಕು ಎಂದು ಬಫೆಟ್ ಪ್ರತಿಪಾದಿಸುತ್ತಾರೆ.

ಬಫೆಟ್ ಅವರ ಪ್ರಸಿದ್ಧ ಮಾತು

“ನನ್ನ ಕೌಶಲ್ಯವನ್ನು ಈ ಸಮಾಜವು ವಿಪರೀತವಾಗಿ ಪುರಸ್ಕರಿಸಿದೆ. ಆದರೆ, ದೇಶದ ಗಡಿಯಲ್ಲಿ ಹೋರಾಡುವ ಯೋಧ, ಶಿಕ್ಷಕ ಅಥವಾ ವೈದ್ಯರಿಗಿಂತ ನಾನೇನೂ ಹೆಚ್ಚು ಅರ್ಹನೆಂದಲ್ಲ, ನಾನು ಕೇವಲ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಜನಿಸಿದ ಅದೃಷ್ಟಶಾಲಿ ಅಷ್ಟೇ” ಎಂದು ವಾರನ್ ಬಫೆಟ್ ವಿನಮ್ರವಾಗಿ ಹೇಳಿಕೊಳ್ಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:09 pm, Tue, 21 July 26

Follow Us
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಫುಟ್​ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ
ಫುಟ್​ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ
ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಣ ವೇಳೆ ಗರುಡ ಪ್ರತ್ಯಕ್ಷ
ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಣ ವೇಳೆ ಗರುಡ ಪ್ರತ್ಯಕ್ಷ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ