Credit Score: ಹಣಕಾಸು ಆರೋಗ್ಯಕ್ಕೆ ಬೇಕು ಕ್ರೆಡಿಟ್ ಸ್ಕೋರ್; ಇದನ್ನು ಹೆಚ್ಚಿಸುವ ಉಪಾಯ ಏನು?
Finance Tips: ಕ್ರೆಡಿಟ್ ಸ್ಕೋರ್ ಎಂಬುದು ನಮ್ಮ ಸಾಲ ತೀರಿಸುವಿಕೆಯ ಶಕ್ತಿಯ ಮಾಪಕ. ನಮ್ಮ ಎಲ್ಲಾ ಸಾಲದ ಇತಿಹಾಸವನ್ನು ಪರಿಗಣಿಸಿ ನೀಡಲಾಗುವ ಸ್ಕೋರ್. ಸಾಲ ತೀರಿಸುವಿಕೆಯಲ್ಲಿ ತಪ್ಪೆಸಗಿದ್ದರೆ ಸ್ಕೋರ್ ಕಡಿಮೆ ಆಗುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಇರುವವರಿಗೆ ಸಾಲ ಸಿಗುವುದು ಕಷ್ಟ. ಕ್ರೆಡಿಟ್ ಸ್ಕೋರ್ 300ರಿಂದ 900 ಅಂಕಗಳವರೆಗೆ ಇರುತ್ತದೆ. 300 ಬಂದರೆ ಕಳಪೆ, 900 ಇದ್ದರೆ ಅತ್ಯುತ್ತಮ.
ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ ಎನಿಸುತ್ತದೆ. ಸಾಲ ಪಡೆಯಲು ಮಾತ್ರವಲ್ಲ, ಕಡಿಮೆ ಬಡ್ಡಿದರಕ್ಕೆ ಸಾಲ ಸಿಗಲು ಇದು ಕಾರಣವಾಗುತ್ತದೆ. ಅಂತೆಯೇ, ಕ್ರೆಡಿಟ್ ಸ್ಕೋರ್ (credit score) ಬಹಳ ಮುಖ್ಯ. ಏನಿದು ಕ್ರೆಡಿಟ್ ಸ್ಕೋರ್? ಇದು ನಮ್ಮ ಸಾಲ ತೀರಿಸುವಿಕೆ ಶಕ್ತಿಯ ಮಾಪಕ. ನಮ್ಮ ಎಲ್ಲಾ ಸಾಲದ ಇತಿಹಾಸವನ್ನು ಪರಿಗಣಿಸಿ ನೀಡಲಾಗುವ ಸ್ಕೋರ್. ಸಾಲ ತೀರಿಸುವಿಕೆಯಲ್ಲಿ ತಪ್ಪೆಸಗಿದ್ದರೆ ಸ್ಕೋರ್ ಕಡಿಮೆ ಆಗುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಇರುವವರಿಗೆ ಬ್ಯಾಂಕುಗಳು ಸಾಲ ಕೊಡಲು ಹಿಂದೇಟು ಹಾಕುತ್ತವೆ. ಅಡಮಾನ ಸಾಲ ಕೂಡ ಸಿಗುವುದು ಅನುಮಾನಾಸ್ಪದವಾಗಿರುತ್ತದೆ.
ಕ್ರೆಡಿಟ್ ಸ್ಕೋರ್ 300 ಅಂಕಗಳಿಂದ 900 ಅಂಕಗಳವರೆಗೆ ಇರುತ್ತದೆ. 300 ಅಂಕ ಎನ್ನುವುದು ಕನಿಷ್ಠ. ಈ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿ ಸಾಲ ಪಡೆಯಲು ಅರ್ಹ ಇರುವುದಿಲ್ಲ ಎಂದೇ ಭಾವಿಸಲಾಗುತ್ತದೆ. 700ಕ್ಕೂ ಹೆಚ್ಚು ಕ್ರೆಡಿಟ್ ಸ್ಕೋರ್ ಇರುವ ವ್ಯಕ್ತಿಗಳಿಗೆ ಸುಲಭವಾಗಿ ಸಾಲ ಸಿಗುತ್ತದೆ. ಕಡಿಮೆ ಬಡ್ಡಿದರದಲ್ಲೇ ಸಾಲ ಪ್ರಾಪ್ತವಾಗುತ್ತದೆ.
ಇದನ್ನೂ ಓದಿ: FD Rates: ಎಸ್ಬಿಐ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆ; ವಿವಿಧ ಎಫ್ಡಿ ದರಗಳ ಹೆಚ್ಚಳ
ಕ್ರೆಡಿಟ್ ಸ್ಕೋರ್ ಹೆಚ್ಚಿಸುವ ಉಪಾಯಗಳು
- ಲೋನ್ ಇಎಂಐಗಳನ್ನು ನಿಗದಿತ ದಿನಾಂಕದೊಳಗೆಯೇ ಪಾವತಿಸಬೇಕು. ಕ್ರೆಡಿಟ್ ಕಾರ್ಡ್ ಬಿಲ್ಗಳನ್ನೂ ಬಾಕಿ ಉಳಿಸಿಕೊಳ್ಳಬಾರದು.
- ಒಂದಕ್ಕಿಂತ ಹೆಚ್ಚು ಬಾರಿ ಸಾಲ ಪಡೆಯುತ್ತಿರುವುದಾದರೆ, ಅಡಮಾನ ಸಾಲ, ಅಡಮಾನ ರಹಿತ ಸಾಲ ಹೀಗೆ ಎಲ್ಲ ರೀತಿಯ ಸಾಲಗಳಿರಲಿ. ಇದರಿಂದ ನಿಮ್ಮ ವಿಶ್ವಾಸಾರ್ಹತೆ ಹೆಚ್ಚುತ್ತದೆ.
- ಪದೇ ಪದೇ ಸಾಲ ಪಡೆಯಬೇಡಿ. ಅಗತ್ಯ ಇದ್ದರಷ್ಟೇ ಸಾಲ ಮಾಡಿ. ಅಗತ್ಯ ಬಿದ್ದರಷ್ಟೇ ಹೊಸ ಕ್ರೆಡಿಟ್ ಕಾರ್ಡ್ ಪಡೆಯಿರಿ.
- ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ಆಗಾಗ್ಗೆ ಪರಿಶೀಲಿಸಿ. ನಿಮ್ಮ ಕ್ರೆಡಿಟ್ ವರ್ತನೆಯಲ್ಲಿ ಲೋಪ ಇದ್ದರೆ ಪತ್ತೆ ಮಾಡಿ ಸರಿಪಡಿಸಲು ಯತ್ನಿಸಬಹುದು.
ಒಟ್ಟಾರೆ, ಹಣಕಾಸು ಸಂಸ್ಥೆಗಳು ನೀವು ಸಾಲ ಪಡೆಯಲು ಅರ್ಹರಿದ್ದೀರೋ ಇಲ್ಲವೋ, ನಿಮ್ಮನ್ನು ಎಷ್ಟು ನಂಬಬಹುದು ಇವೆಲ್ಲವನ್ನೂ ಪರಿಶೀಲಿಸುತ್ತವೆ. ಅದಕ್ಕೆ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಅನ್ನು ಬ್ಯಾಂಕುಗಳು ಪರಿಶೀಲನೆ ಮಾಡಿಯೇ ನಿಮಗೆ ಲೋನ್ ಸ್ಯಾಂಕ್ಷನ್ ಮಾಡುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ