ಅಪರೂಪವಾಗಿ ಮಹತ್ವದ ಅಂಚೆ ಯೋಜನೆಗೆ ನೋಂದಾಯಿಸಿಕೊಂಡ ದೇಶದ ಏಕೈಕ ಐದು ತಲೆಮಾರಿನ ಮಂಗಳೂರು ಕುಟುಂಬ!

Mahila Samman Savings Certificate: ಮಂಗಳೂರು ಸಮೀಪದ ಕಿನ್ನಿಗೋಳಿ ಉಪ ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆಗಳನ್ನು ತೆರೆದ ಭಾರತದ ಏಕೈಕ ಐದು ತಲೆಮಾರಿನ ಕುಟುಂಬ ಇತಿಹಾಸ ನಿರ್ಮಿಸಿದೆ. ಕಿನ್ನಿಗೋಳಿ ಉಪ ಅಂಚೆ ಕಛೇರಿಯ ಸಿಬ್ಬಂದಿ ಈ ಸಾಧನೆಗಾಗಿ ಎಲ್ಲ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಅಪರೂಪವಾಗಿ ಮಹತ್ವದ ಅಂಚೆ ಯೋಜನೆಗೆ ನೋಂದಾಯಿಸಿಕೊಂಡ ದೇಶದ ಏಕೈಕ ಐದು ತಲೆಮಾರಿನ ಮಂಗಳೂರು ಕುಟುಂಬ!
ಅಪರೂಪವಾಗಿ ಮಹತ್ವದ ಅಂಚೆ ಯೋಜನೆಗೆ ನೋಂದಾಯಿಸಿಕೊಂಡ ದೇಶದ ಏಕೈಕ ಐದು ತಲೆಮಾರಿನ ಮಂಗಳೂರು ಕುಟುಂಬ! Image Credit source: TNIE Indian Express
Follow us
ಸಾಧು ಶ್ರೀನಾಥ್​
|

Updated on:Aug 08, 2023 | 10:11 AM

ಮಂಗಳೂರು (Mangaluru) ಮೂಲದ ಈ ಕುಟುಂಬದ ಮುತ್ತಜ್ಜಿಯ ವಯಸ್ಸು 103, ಅವರ ಮರಿಮೊಮ್ಮಗನಿಗೆ ಮೂರು ವರ್ಷ. ಐದು-ಪೀಳಿಗೆಯ ಕುಟುಂಬದ ಇತರ ಸದಸ್ಯರೊಂದಿಗೆ ಅವರನ್ನೆಲ್ಲ ಒಟ್ಟುಗೂಡಿಸಿ, ಕಳೆದ ವಾರ (ಆಗಸ್ಟ್ 3) ಭಾರತೀಯ ಅಂಚೆ ಇಲಾಖೆಯ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಅಡಿ (MSSC) ಖಾತೆಗಳನ್ನು ಆರಂಭಿಸಲಾಗಿದೆ (India Post’s Mahila Samman Savings Certificate -MSSC). ಕುಪ್ಪೆಪದವು (Kuppepadavu) ನಿವಾಸಿ ಸೀತಾ ಪೂಜಾರ್ತಿ (103); ಅವರ ಮಗಳು ಸುಂದರಿ ಪೂಜಾರ್ತಿ (72); ಆಕೆಯ ಮೊಮ್ಮಗಳು ಯಮುನಾ ಪೂರ್ಜಾರ್ತಿ (50); ಅವರ ಮೊಮ್ಮಗಳು ಪವಿತ್ರಾ ವಿ ಅಮೀನ್ (33); ಮತ್ತು ಅವರ ಮರಿ ಮೊಮ್ಮಗಳು ದಿತ್ಯಾ ವಿ ಅಮೀನ್ (3) ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ MSSC ಅಡಿಯಲ್ಲಿ ಉಳಿತಾಯ ಖಾತೆಗಳನ್ನು (savings account) ತೆರೆದಿದ್ದಾರೆ.

ಮಂಗಳೂರು ಅಂಚೆ ವಿಭಾಗದ (Mangaluru Postal Division) ವ್ಯಾಪ್ತಿಯ ಕಿನ್ನಿಗೋಳಿ ಉಪ ಅಂಚೆ ಕಛೇರಿಯ ಸಿಬ್ಬಂದಿ ಈ ಸಾಧನೆಗಾಗಿ ಎಲ್ಲ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಹಿರಿಯ ಮಹಿಳೆಯರ ನಿವಾಸಗಳಿಗೆ ಭೇಟಿ ನೀಡಿದ್ದಲ್ಲದೆ, ಜಿಲ್ಲೆಯ ವಿವಿಧೆಡೆ ನೆಲೆಸಿರುವ ಅವರೆಲ್ಲರನ್ನೂ ಮೊಮ್ಮಗಳು ಪವಿತ್ರಾ ಅವರ ಪತಿ ವಿಜಯ್ ಅಮೀನ್ ಅವರ ಕಾರಿನಲ್ಲಿ ಅಂಚೆ ಕಚೇರಿಗೆ ಕರೆತಂದರು.

ಕುಟುಂಬದ ಅನನ್ಯ ಸಾಧನೆಯನ್ನು ಗೌರವಿಸಲು ಹತ್ತಿರದ ರೆಸ್ಟೋರೆಂಟ್‌ನಲ್ಲಿ ಸತ್ಕಾರದ ಜೊತೆಗೆ ಮಹಿಳೆಯರಿಗೆ ಸೀರೆಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಕಿನ್ನಿಗೋಳಿಯ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮುಖ್ಯಸ್ಥ ಕೆ ರಘುನಾಥ್ ಕಾಮತ್ ಅವರು ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್​​ಗೆ (ಟಿಎನ್‌ಐಇ-TNIE) ತಿಳಿಸಿದರು. 32 ವರ್ಷಗಳ ಹಿಂದೆ ಇಲಾಖೆಗೆ ಸೇರಿದ್ದ ರಘುನಾಥ್ ಅವರು ಮನೆ ಮನೆಗೆ ತೆರಳಿ ಯೋಜನೆ ಪ್ರಚಾರ ಮಾಡುತ್ತಿದ್ದಾರೆ. ಅವರು ಪವಿತ್ರಾ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಯೋಜನೆಯ ಪ್ರಯೋಜನಗಳ ಬಗ್ಗೆ ವಿವರಿಸಿದರು.

ನಾನು ಪವಿತ್ರಾ ಅವರನ್ನು ಕುಟುಂಬದ ಇತರ ಮಹಿಳೆಯರ ಬಗ್ಗೆ ಕೇಳಿದೆ, ಅವಾಗ ಅವರು ನನಗೆ ಎಲ್ಲಾ ವಿವರಗಳನ್ನು ನೀಡಿದರು. ಅವರ ಖಾತೆಗಳನ್ನು ತೆರೆಯಲು ನಾವು ನಿರ್ಧರಿಸಿದೆವು ಎಂದು ರಘುನಾಥ್ ಹೇಳಿದರು.

ಈ ಅಂಚೆ ಯೋಜನೆಯು ಹೆಚ್ಚಿನ ಬಡ್ಡಿ ನೀಡುತ್ತದೆ ಮತ್ತು ಉಳಿತಾಯದ ಈ ಯೋಜನೆಯಲ್ಲಿ ತೊಡಗಿಸಲು ಹೂಡಿಕೆ ಮೊತ್ತವೂ ಹೊಂದಾಣಿಕೆಯಾಗುವಂತಹುದು ಎಂಬುದು ನನ್ನ ಅರಿವಿಗೆ ಬಂತು. ಅದಾದ ನಂತರ, ನನ್ನ ಕುಟುಂಬದ ಎಲ್ಲಾ ಮಹಿಳೆಯರು ಯೋಜನೆಯ ಪ್ರಯೋಜನ ಪಡೆಯಬೇಕೆಂದು ನಾನು ಬಯಸಿದೆ. ಅಂಚೆ ಇಲಾಖೆಯವರು 40 ಕಿಮೀ ದೂರದಲ್ಲಿ ವಾಸಿಸುವ ನನ್ನ ಮುತ್ತಜ್ಜಿಯನ್ನು ಕರೆತರಲು ನಮಗೆ ಸಹಾಯ ಮಾಡಿದರು ಎಂದು ಪವಿತ್ರಾ ಮೆಚ್ಚುಗೆ ವ್ಯಕ್ತಪಡಿಸಿದರು. ರೈತರಾಗಿ ಕೆಲಸ ಮಾಡುತ್ತಿದ್ದ ಸೀತಾ ಈಗ ತಮ್ಮ ಮಗ ಮತ್ತು ಆತನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಸುಧಾಕರ ಮಲ್ಯ ಮಾತನಾಡಿ, “ಎಂಎಸ್‌ಎಸ್‌ಸಿ ಮೂಲಕ ಭಾರತೀಯ ಅಂಚೆ ಒಂದೇ ಬಾರಿಗೆ ಐದು ತಲೆಮಾರುಗಳನ್ನು ತಲುಪಿತು. ಇದರ ಶ್ರೇಯ ರಘುನಾಥ್ ಕಾಮತ್ ಅವರಿಗೆ ಸಲ್ಲುತ್ತದೆ, ಅವರು ಉಳಿತಾಯ ಖಾತೆಗಳನ್ನು ತೆರೆಯಲು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಂತಸಪಟ್ಟರು.

ವೈಯಕ್ತಿಕ ಹಣಕಾಸು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:09 am, Tue, 8 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ