ಸ್ಥಿರ ಠೇವಣಿ ಮೇಲೆ ಪಡೆಯುವ ಸಾಲ ಹೆಚ್ಚು ಸುರಕ್ಷಿತ, ಕಾರಣ ಇದೇ ನೋಡಿ

ಪ್ರತಿಯೊಬ್ಬ ವ್ಯಕ್ತಿಗೂ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಹೌದು, ತುರ್ತು ಸಂದರ್ಭಗಳಲ್ಲಿ ಸ್ಥಿರ ಠೇವಣಿ ಇಟ್ಟ ಹಣವನ್ನು ತೆಗೆಯುವ ಬದಲು ಅದರ ಮೇಲೆ ಸಾಲ ಪಡೆಯುವುದು ಉತ್ತಮ. ನಿಮ್ಮ ಸಿಬಿಲ್ ಕಡಿಮೆಯಿದ್ರೂ ಬ್ಯಾಂಕುಗಳು ಸುಲಭವಾಗಿ ಸಾಲ ನೀಡುತ್ತವೆ. ಅದರ ಜತೆಗೆ ಎಫ್‌ಡಿ ಮೇಲಿನ ಸಾಲದ ಬಡ್ಡಿದರವೂ ತುಂಬಾ ಕಡಿಮೆ ಇರುತ್ತದೆ.

ಸ್ಥಿರ ಠೇವಣಿ ಮೇಲೆ ಪಡೆಯುವ ಸಾಲ ಹೆಚ್ಚು ಸುರಕ್ಷಿತ, ಕಾರಣ ಇದೇ ನೋಡಿ
ಸಾಂದರ್ಭಿಕ ಚಿತ್ರ
Image Credit source: Deepak Sethi/E+/Getty images

Updated on: Sep 02, 2026 | 6:17 PM

ಮುಖ್ಯಾಂಶಗಳು

  • ಆರ್ಥಿಕ ಸ್ಥಿತಿ ಹದಗೆಟ್ಟಾಗ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಸಹಜ
  • ಎಫ್‌ಡಿ ಮೇಲಿನ ಸಾಲ ಹೆಚ್ಚು ಸುರಕ್ಷಿತವಾಗಿದೆ
  • ಎಫ್‌ಡಿ ಸಾಲದ ಮೇಲೆ ಯಾವುದೇ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ

ಆರ್ಥಿಕ ಸ್ಥಿತಿ ಹದಗೆಟ್ಟಾಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯಲು ಮುಂದಾಗುತ್ತೇವೆ. ಕೆಲವೊಮ್ಮೆ ಸಾಲ ಸಿಗದೇ ಹೋಗಬಹುದು. ಆದರೆ ನಿಮ್ಮ ಹೆಸರಿನಲ್ಲಿ ಸ್ಥಿರ ಠೇವಣಿ (fixed deposit) ಇಟ್ಟಿದ್ದರೆ ಅದರ ಮೇಲೆ ಸಾಲ ಪಡೆಯುವುದು ಉತ್ತಮ. ಬೇರೆ ಸಾಲಗಳಿಗೆ ಹೋಲಿಸಿದ್ರೆ ಇದರ ಮೇಲಿನ ಬಡ್ಡಿದರ ಕಡಿಮೆ ಹಾಗೂ ಇದೊಂದು ಸುರಕ್ಷಿತ ಆಯ್ಕೆಯಾಗಿದೆ. ಈ ಎಫ್ ಡಿ ಮೇಲೆ ಸಾಲ ಪಡೆಯುವುದರಿಂದ ಆಗುವ ಪ್ರಯೋಜನಗಳು ಹೆಚ್ಚು. ಈ ಕುರಿತಾದ ಮಾಹಿತಿ ಇಲ್ಲಿದೆ.

ಎಫ್ ಡಿ ಮೇಲಿನ ಸಾಲ ಎಷ್ಟು ಪ್ರಯೋಜನಕಾರಿ?

  • ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಇಟ್ಟ ಎಫ್‌ಡಿ ಮೌಲ್ಯದ ಮೇಲೆ ಶೇಕಡಾ 80% ರಿಂದ 90% ರಷ್ಟು ಮಾತ್ರ ಸಾಲ ದೊರೆಯುತ್ತದೆ.
  • ಸಾಲ ಪಾವತಿಸಲು ಸಾಧ್ಯವಾಗಿಲ್ಲವೆಂದಾದರೆ ನಿಮ್ಮ ಎಫ್‌ಡಿ ಹಣದಿಂದಲೇ ಸಾಲದ ಮೊತ್ತವನ್ನು ಕಡಿತಗೊಳಿಸುತ್ತದೆ.
  • ಸಾಲ ಪಡೆದಿದ್ರೂ ನಿಮ್ಮ ಹೆಸರಿನಲ್ಲಿರುವ ಫಿಕ್ಸೆಡ್ ಡೆಪಾಸಿಟ್‌ ಮೊತ್ತದ ಮೇಲೆ ಬ್ಯಾಂಕ್ ಬಡ್ಡಿಯನ್ನು ನೀಡುತ್ತದೆ.
  • ಸ್ಥಿರ ಠೇವಣಿ ಇಟ್ಟಿರುವುದರಿಂದ ಎಫ್ ಡಿ ಬಾಂಡ್ ಪೇಪರ್ ಹೊರತು ಪಡಿಸಿ ಇನ್ನಿತರ ಕಾಗದ ಪತ್ರಗಳ ಅವಶ್ಯಕತೆ ಇರುವುದಿಲ್ಲ.
  • ಆನ್ಲೈನ್ ಬ್ಯಾಂಕಿಂಗ್ ಮೂಲಕ ತಕ್ಷಣವೇ ಸಾಲದ ಮೊತ್ತ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ.
  • ನಿಮ್ಮ ಹೆಸರಿನಲ್ಲಿ ಎಫ್ ಡಿ ಇದ್ದರೆ ಸಿಬಿಲ್ ಸ್ಕೋರ್ ಕಡಿಮೆಯಿದ್ರೂ ಬ್ಯಾಂಕುಗಳು ಸುಲಭವಾಗಿ ಸಾಲ ಮಂಜೂರು ಮಾಡುತ್ತವೆ.
  • ಎಫ್‌ಡಿ ಮೇಲಿನ ಸಾಲದ ಮೇಲೆ ಯಾವುದೇ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ.
  • ನೀವು ಪಡೆಯುವ ವೈಯಕ್ತಿಕ ಸಾಲಗಳಿಗೆ ಹೋಲಿಸಿದ್ರೆ ಎಫ್ ಡಿ ಮೇಲಿನ ಬಡ್ಡಿದರ ಕಡಿಮೆ ಇರುತ್ತದೆ.

ಇದನ್ನೂ ಓದಿ: ಸೆಪ್ಟೆಂಬರ್ 1ರಿಂದ ಐಟಿಆರ್, ವಿದೇಶ ಪ್ರಯಾಣ, ಎಫ್​ಡಿ ಇತ್ಯಾದಿ ನಿಯಮ ಬದಲಾವಣೆಗಳಿವೆ, ಗಮನಿಸಿ

  • ಅವಧಿಗೂ ಮುನ್ನ ಸ್ಥಿರ ಠೇವಣಿ ಮೇಲೆ ತೆಗೆದ ಸಾಲ ತೀರಿಸಿದರೆ ಬ್ಯಾಂಕ್ ಯಾವುದೇ ದಂಡವನ್ನು ವಿಧಿಸುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:15 pm, Wed, 2 September 26

Loading...
Unable to load recommendations.
Follow Us