Sign In

By signing in or creating an account, you agree with Associated Broadcasting Company's Terms & Conditions and Privacy Policy.

Income tax: ಉದ್ಯೋಗಿಗಳಿಗೆ ಫಾರ್ಮ್ 16 ವಿತರಣೆಗೆ ಜುಲೈ 31ರ ತನಕ ಅವಧಿ ವಿಸ್ತರಣೆ

2020-21ನೇ ಸಾಲಿನ ಹನಕಾಸು ವರ್ಷಕ್ಕೆ ಫಾರ್ಮ್ 16 ಸಲ್ಲಿಸುವುದಕ್ಕೆ ಜುಲೈ 31, 2021ರ ತನಕ ಅವಧಿ ವಿಸ್ತರಣೆ ಮಾಡಲಾಗಿದೆ. ಆ ಬಗೆಗಿನ ವಿವರಗಳು ಈ ಲೇಖನದಲ್ಲಿವೆ.

Income tax: ಉದ್ಯೋಗಿಗಳಿಗೆ ಫಾರ್ಮ್ 16 ವಿತರಣೆಗೆ ಜುಲೈ 31ರ ತನಕ ಅವಧಿ ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 06, 2021 | 12:03 AM

2020-21ರ ಹಣಕಾಸು ವರ್ಷಕ್ಕೆ (ಫೈನಾನ್ಷಿಯಲ್ ಇಯರ್) ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಕೊನೆ ದಿನಾಂಕವನ್ನು ಸೆಪ್ಟೆಂಬರ್ 30, 2021ರ ವರೆಗೆ ವಿಸ್ತರಿಸಲಾಗಿದೆ. ಐಟಿಆರ್ ಸಲ್ಲಿಸುವ ಕೊನೆಯ ದಿನಾಂಕ ಸಾಮಾನ್ಯವಾಗಿ ಜುಲೈ 31 ಆಗಿರುತ್ತದೆ. ಆಯಾ ಅಸೆಸ್​ಮೆಂಟ್​ ವರ್ಷಕ್ಕೆ ಆಗ ರಿಟರ್ನ್ಸ್ ಸಲ್ಲಿಸಬಹುದು. “ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ವೈಯಕ್ತಿಕ ತೆರಿಗೆದಾರರ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅಂತಿಮ ದಿನಾಂಕ ಜುಲೈ 31 ಆಗಿದೆ. FY20-21ಕ್ಕೆ, ಸಿಬಿಡಿಟಿ ವೈಯಕ್ತಿಕ ತೆರಿಗೆದಾರರ ಆದಾಯ ತೆರಿಗೆ ರಿಟರ್ನ್ ಅನ್ನು ಸೆಪ್ಟೆಂಬರ್ 30, 2021ಕ್ಕೆ ಸಲ್ಲಿಸಲು ನಿಗದಿತ ದಿನಾಂಕವನ್ನು ವಿಸ್ತರಿಸಿದೆ ಮತ್ತು ಈಗ ವೈಯಕ್ತಿಕ ತೆರಿಗೆ ಪಾವತಿದಾರನು ಆದಾಯ ತೆರಿಗೆ ರಿಟರ್ನ್ ಅನ್ನು ಸೆಪ್ಟೆಂಬರ್ 30ರ ವರೆಗೆ ಸಲ್ಲಿಸಬಹುದು,” ಎಂದು ತಜ್ಞರು ಹೇಳಿದ್ದಾರೆ.

ಸಂಬಳ ಪಡೆಯುವ ನೌಕರರು ತಮ್ಮ ಉದ್ಯೋಗದಾತರಿಂದ ಫಾರ್ಮ್ 16 ಅನ್ನು ಪಡೆಯುತ್ತಾರೆ, ಅದು ಐಟಿಆರ್ ಸಲ್ಲಿಸಲು ಸಹಾಯ ಮಾಡುತ್ತದೆ. ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಫಾರ್ಮ್ 16 ಅನ್ನು ಒದಗಿಸುವ ಕೊನೆಯ ದಿನಾಂಕವನ್ನು ಸಹ ವಿಸ್ತರಿಸಲಾಗಿದೆ. “ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಉದ್ಯೋಗದಾತರು ಹಣಕಾಸು ವರ್ಷ ಮುಗಿದ ನಂತರ ಪ್ರತಿ ವರ್ಷ ಜೂನ್ 15ರ ಮೊದಲು ಉದ್ಯೋಗಿಗೆ ಫಾರ್ಮ್- 16 ನೀಡಬೇಕು. FY20-21ಕ್ಕೆ, ಸಿಬಿಡಿಟಿ ಫಾರ್ಮ್ 16ರ ದಿನಾಂಕವನ್ನು ವಿಸ್ತರಿಸಿದೆ. ಉದ್ಯೋಗದಾತನು ಉದ್ಯೋಗಿಗೆ ಫಾರ್ಮ್ 16 ಅನ್ನು ನೀಡಲು ಹೊಸ ಗಡುವು ಜುಲೈ 31, 2021 ಆಗಿದೆ.” ತಿಂಗಳ ವೇತನವು ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೊದಲೇ ಮೂಲದಲ್ಲಿ ತೆರಿಗೆಯನ್ನು ಉದ್ಯೋಗದಾತರು ಕಡಿತಗೊಳಿಸುತ್ತಾರೆ. ಫಾರ್ಮ್ 16 ಎಂಬುದು ಪಾವತಿಸಿದ ಒಟ್ಟು ಮೊತ್ತದ ಮಾಹಿತಿ ಆಗಿರುತ್ತದೆ ಮತ್ತು ಇದು ಮೂಲತಃ ಉದ್ಯೋಗಿಗೆ ಟಿಡಿಎಸ್ ಪ್ರಮಾಣಪತ್ರ ಆಗಿದೆ. ಫಾರ್ಮ್ 16 ರಲ್ಲಿ ‘ಸಂಬಳ’ ಎಂಬ ಶೀರ್ಷಿಕೆಯಡಿ ಆದಾಯ ಎಂದು ಗಣನೆಗೆ ತೆಗೆದುಕೊಳ್ಳುವ ಪ್ರಸ್ತಾವ ಮಾಡಲಾಗುವುದು. ಅದರಲ್ಲಿ ಉದ್ಯೋಗಿ ವರದಿ ಮಾಡಿದ ಯಾವುದೇ ಆದಾಯ, ಸೆಕ್ಷನ್ 80ಸಿ, ಸೆಕ್ಷನ್ 80ಡಿ ಮುಂತಾದ ಚಾಪ್ಟರ್ VI-A ಅಡಿಯಲ್ಲಿ ವಿವಿಧ ಕಡಿತಗಳು ಒಳಗೊಂಡಿರುತ್ತವೆ.

ಆದರೆ, ಯಾರಾದರೂ ಫಾರ್ಮ್ 16 ಅನ್ನು ಸ್ವೀಕರಿಸದೆ 2021-22ರ ಅಸೆಸ್​ಮೆಂಟ್ ವರ್ಷಕ್ಕೆ ಐಟಿಆರ್ ಸಲ್ಲಿಸಲು ಬಯಸಿದರೆ ಏನು? “ಉದ್ಯೋಗದಾತನು ಉದ್ಯೋಗಿಗೆ ಫಾರ್ಮ್ 16 ಅನ್ನು ನೀಡಲು ವಿಫಲವಾದರೆ ಮತ್ತು ಉದ್ಯೋಗಿ ತನ್ನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಬಯಸಿದರೆ, ತೆರಿಗೆದಾರನು ಮಾಸಿಕ ಪೇಸ್ಲಿಪ್ ಅನ್ನು ಹಣಕಾಸಿನ ವರ್ಷದ ವೇತನ ಆದಾಯವನ್ನು ಲೆಕ್ಕ ಹಾಕಲು ಬಳಸಬಹುದು. ತೆರಿಗೆದಾರರು ತಮ್ಮ ಸಂಬಳ ಆದಾಯದ ಲೆಕ್ಕಾಚಾರಕ್ಕೆ ಎಲ್ಲ 12 ತಿಂಗಳ ಸಂಬಳ ಸ್ಲಿಪ್ ಅನ್ನು ಆಧಾರವಾಗಿ ತೆಗೆದುಕೊಳ್ಳಬಹುದು. ಅಲ್ಲದೆ, ಅನೇಕ ತೆರಿಗೆದಾರರು, ವಿಶೇಷವಾಗಿ ಟಿಡಿಎಸ್ ಹೊಂದಿರುವವರು ಮತ್ತು ಇತರ ಆದಾಯವಿಲ್ಲ ಎಂದು ತೋರಿಸಲು ಐಟಿಆರ್ ಅನ್ನು ಸಲ್ಲಿಸಲು ಬಯಸುತ್ತಾರೆ.

ನಿಮ್ಮ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೆ, ಅಂದರೆ ಅದು 2.5 ಲಕ್ಷ ರೂಪಾಯಿ ಒಳಗಿದ್ದಲ್ಲಿ ಮತ್ತು ಟಿಡಿಎಸ್ ಕಡಿತ ಮಾಡಲಾಗಿದ್ದಲ್ಲಿ ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು. ಐಟಿಆರ್ ಸಲ್ಲಿಸುವುದರಿಂದ ಟಿಡಿಎಸ್ ಮರುಪಾವತಿ ಆಗುತ್ತದೆ. ನೆನಪಿಡಿ, ಐಟಿಆರ್ ಸಲ್ಲಿಸಲು ಫಾರ್ಮ್ 16 ಕಡ್ಡಾಯವಲ್ಲ. ನಿಮ್ಮ ಟಿಡಿಎಸ್ ವಿವರಗಳನ್ನು 26 ಎಎಸ್‌ನಲ್ಲಿ ಕಾಣಬಹುದು. ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿ, ಟಿಡಿಎಸ್ ವಿವರಗಳು ಡ್ಯಾಶ್‌ಬೋರ್ಡ್‌ನಲ್ಲಿ ಸುಲಭವಾಗಿ ಲಭ್ಯವಿವೆ.

ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳಲು ಅಥವಾ ಹಳೆಯ ತೆರಿಗೆ ಪದ್ಧತಿಯೊಂದಿಗೆ ಮುಂದುವರಿಯುವ ವಿಚಾರ ಬಂದಾಗ, ಫಾರ್ಮ್ 16 ಆಯ್ಕೆಯನ್ನು ತೋರಿಸುತ್ತದೆ. ಫಾರ್ಮ್ 16 ರ ಸ್ವರೂಪದಲ್ಲಿ ಬದಲಾವಣೆಯನ್ನು ತರುವ ಮೂಲಕ ಇದನ್ನು ಒದಗಿಸಲಾಗಿದೆ. “ಅಧಿಸೂಚನೆಯ ಪ್ರಕಾರ ಫಾರ್ಮ್ 16ರಲ್ಲಿ ಒಂದು ಬದಲಾವಣೆಯನ್ನು ಮಾತ್ರ ಸೂಚಿಸಲಾಗುತ್ತದೆ, ಅದು ಫಾರ್ಮ್ 16ರ ಭಾಗ ಬಿಯಲ್ಲಿದೆ. ಹೊಸ ಬದಲಾವಣೆಯ ಪ್ರಕಾರ, ಉದ್ಯೋಗಿ ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಂಡಿದ್ದಾರೆ ಎಂದು ಉದ್ಯೋಗದಾತರು ವರದಿ ಮಾಡಬೇಕಾಗುತ್ತದೆ,” ಎಂದು ಬಂಗಾರ್ ತಿಳಿಸುತ್ತಾರೆ.

ಇದನ್ನೂ ಓದಿ: Income Tax Exemptions: ಕೊವಿಡ್​ ವೆಚ್ಚಕ್ಕೆ ಆದಾಯ ತೆರಿಗೆ ವಿನಾಯಿತಿ ಅಂದರೇನು? ಇಲ್ಲಿದೆ ಮಾಹಿತಿ

(Form 16 issuing date by employers to employees extended till July 31st 2021. Here is the details to follow)

Published On - 12:00 am, Tue, 6 July 21