ಬೆಂಗಳೂರು: ಆಧಾರ್ ಕಾರ್ಡ್ (Aadhaar Card) ಭಾರತೀಯರ ಪಾಲಿಗೆ ಪ್ರಮುಖ ದಾಖಲೆಯಾಗಿದೆ. ಇದು ಗುರುತಿನ ಚೀಟಿಯೂ ಹೌದು, ವಿಳಾಸಕ್ಕೆ ಸಾಕ್ಷ್ಯವೂ ಹೌದು, ಹಾಗೆಯೇ, ಸರ್ಕಾರಿ ಸ್ಕೀಮ್ಗಳ ಲಾಭ ರವಾನಿಸುವ ವಾಹಕವೂ ಹೌದು. ಎಲ್ಲದಕ್ಕೂ ಆಧಾರ್ ಕಡ್ಡಾಯ ಮಾಡಬೇಡಿ ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ಆಧಾರ್ ಕಾರ್ಡ್ ಭಾರತೀಯರಿಗೆ ಒಂದು ಪ್ರಮುಖ ಡಾಕ್ಯುಮೆಂಟ್ ಎನ್ನುವುದು ನಿರ್ವಿವಾದ. ಹೀಗಾಗಿ, ಆಧಾರ್ ಕಾರ್ಡ್ ವಿಚಾರದಲ್ಲಿ ಯಾವುದೇ ಬೆಳವಣಿಗೆ ನಡೆದರೂ ಬಹುತೇಕ ಭಾರತೀಯರಿಗೆ ಮುಖ್ಯ ಎನಿಸುತ್ತದೆ. ಇದೀಗ ಯುಐಡಿಎಐ ಸಂಸ್ಥೆ ಆಧಾರ್ ದಾಖಲೆಗಳ ಆನ್ಲೈನ್ ಅಪ್ಡೇಶನ್ ಕಾರ್ಯವನ್ನು ಉಚಿತವಾಗಿ ಮಾಡುವ ಅವಕಾಶ ಜೂನ್ 14ರವರೆಗೂ ಕಲ್ಪಿಸಿದೆ.
ಆಧಾರ್ ಕಾರ್ಡ್ನಲ್ಲಿರುವ ನಮ್ಮ ವಿವರವನ್ನು ಅಪ್ಡೇಟ್ ಮಾಡುವುದಕ್ಕೆ 50 ರೂ ಶುಲ್ಕ ಇರುತ್ತದೆ. ಆದರೆ, ಯುಐಡಿಎಐನ ಅಧಿಕೃತ ವೆಬ್ಸೈಟ್ನಲ್ಲಿ ಜೂನ್ 14ರವರೆಗೂ ಉಚಿತವಾಗಿ ನಮ್ಮ ಆಧಾರ್ನ ಡೆಮೋಗ್ರಾಫಿಕ್ ವಿವರಗಳನ್ನು ಅಪ್ಡೇಟ್ ಮಾಡಬಹುದು. ಡೆಮಾಗ್ರಾಫಿಕ್ ವಿವರ ಎಂದರೆ ನಮ್ಮ ವಿಳಾಸ, ಹೆಸರು, ಜನ್ಮದಿನಾಂಕ ಇತ್ಯಾದಿ. ಆದರೆ, ಈ ಉಚಿತ ಸೇವೆ ಕೇವಲ ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರವೇ.
ಉಳಿದಂತೆ, ಮಾಮೂಲಿಯ ರೀತಿಯಲ್ಲಿ ನೀವು ಆಧಾರ್ ಸೆಂಟರ್ಗೆ ಹೋಗಿ ಆಧಾರ್ ವಿವರ ಅಪ್ಡೇಟ್ ಮಾಡಿಸಬೇಕೆಂದರೆ 50 ರೂ ಶುಲ್ಕ ಪಾವತಿಸಲೇಬೇಕು. ಜೂನ್ 14ರ ನಂತರ ಮೈ ಆಧಾರ್ ಪೋರ್ಟಲ್ನಲ್ಲೂ ನೀವು 50 ರೂ ಶುಲ್ಕ ಪಾವತಿಸಿಯೇ ಆಧಾರ್ ಅಪ್ಡೇಶನ್ ಮಾಡಬೇಕಾಗುತ್ತದೆ.
ನಮ್ಮಲ್ಲಿ ಹೆಚ್ಚಿನ ಜನರು ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಒಮ್ಮೆಯೂ ಅಪ್ಡೇಟ್ ಮಾಡಿಲ್ಲ. 10 ವರ್ಷಗಳಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬೇಕೆಂದು ಸರ್ಕಾರ ಜನಸಾಮಾನ್ಯರಿಗೆ ಸೂಚಿಸಿದೆ. ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಆಧಾರ್ಗೆ ಮತ್ತೊಮ್ಮೆ ಸಲ್ಲಿಸಬೇಕಾಗುತ್ತದೆ. ಇದರಿಂದ ಆಧಾರ್ ಡಾಟಾಬೇಸ್ನಲ್ಲಿ ಸಮರ್ಪಕ ಮಾಹಿತಿ ಸಂಗ್ರಹವಾಗಿರುತ್ತದೆ.
ಇದನ್ನೂ ಓದಿ: Aadhaar: ಆಧಾರ್ ಕಾರ್ಡ್ನಲ್ಲಿ ನಿಮ್ಮ ಫೋಟೋ ಬದಲಿಸಬೇಕಾ? ಇಲ್ಲಿದೆ ವಿಧಾನ
ಕೆಲ ದಿನಗಳ ಬಳಿಕ ಆಧಾರ್ ಕಾರ್ಡ್ನಲ್ಲಿ ನಿಮ್ಮ ಹೊಸ ಮಾಹಿತಿ ಅಪ್ಡೇಟ್ ಆಗಿರುತ್ತದೆ. ಅದನ್ನು ನೀವು ಯುಆರ್ಎನ್ ನಂಬರ್ ಬಳಸಿ ಟ್ರ್ಯಾಕ್ ಮಾಡಬಹುದು. ಅಪ್ಡೇಟ್ ಆದ ಆಧಾರ್ ಕಾರ್ಡ್ನ ಪ್ರಿಂಟೌಟ್ ಪಡೆದು ನಿಮ್ಮ ಬಳಿ ಇಟ್ಟುಕೊಳ್ಳಿ.