AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gautam Adani: ಯು.ಕೆ. ಪ್ರಧಾನಿಯನ್ನು ಭೇಟಿ ಮಾಡಿದ ಗೌತಮ್ ಅದಾನಿ; 7000 ಕೋಟಿ ಯುಎಸ್​ಡಿ ಹೂಡಿಕೆ ಭರವಸೆ

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಯುನೈಟೆಡ್​ ಕಿಂಗ್​ಡಮ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರನ್ನು ಮಂಗಳವಾರ ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಭೇಟಿಯಾದರು. ಮತ್ತು ಅದಾನಿ ಸಮೂಹವು ಸೌರ ಮತ್ತು ಇತರ ಮಾರ್ಗದ ಮೂಲಕ ಶಕ್ತಿಯ ಪರಿವರ್ತನೆಗೆ 70 ಶತಕೋಟಿ ಅಮೆರಿಕನ್ ಡಾಲರ್ ಹೂಡುವುದಾಗಿ ಹೇಳಿದ್ದಾರೆ. ಜಾನ್ಸನ್ ಅವರನ್ನು ಭೇಟಿ ಮಾಡಿದ ನಂತರ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಅದಾನಿ, “ಯುಕೆ ಪಿಎಂ ಬೋರಿಸ್ ಜಾನ್ಸನ್ ಅವರನ್ನು ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಭೇಟಿಯಾಗಲು ಗೌರವ ಎನಿಸಿದೆ,” ಎಂದು ಹೇಳಿದ್ದಾರೆ. […]

Gautam Adani: ಯು.ಕೆ. ಪ್ರಧಾನಿಯನ್ನು ಭೇಟಿ ಮಾಡಿದ ಗೌತಮ್ ಅದಾನಿ; 7000 ಕೋಟಿ ಯುಎಸ್​ಡಿ ಹೂಡಿಕೆ ಭರವಸೆ
ಗೌತಮ್ ಅದಾನಿ ಹಾಗೂ ಯು.ಕೆ. ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿ
TV9 Web
| Edited By: |

Updated on: Oct 20, 2021 | 12:18 PM

Share

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಯುನೈಟೆಡ್​ ಕಿಂಗ್​ಡಮ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರನ್ನು ಮಂಗಳವಾರ ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಭೇಟಿಯಾದರು. ಮತ್ತು ಅದಾನಿ ಸಮೂಹವು ಸೌರ ಮತ್ತು ಇತರ ಮಾರ್ಗದ ಮೂಲಕ ಶಕ್ತಿಯ ಪರಿವರ್ತನೆಗೆ 70 ಶತಕೋಟಿ ಅಮೆರಿಕನ್ ಡಾಲರ್ ಹೂಡುವುದಾಗಿ ಹೇಳಿದ್ದಾರೆ. ಜಾನ್ಸನ್ ಅವರನ್ನು ಭೇಟಿ ಮಾಡಿದ ನಂತರ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಅದಾನಿ, “ಯುಕೆ ಪಿಎಂ ಬೋರಿಸ್ ಜಾನ್ಸನ್ ಅವರನ್ನು ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಭೇಟಿಯಾಗಲು ಗೌರವ ಎನಿಸಿದೆ,” ಎಂದು ಹೇಳಿದ್ದಾರೆ.

ಜಾಗತಿಕ ಹವಾಮಾನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹೊಂದಾಣಿಕೆ ಮಾಡುವಲ್ಲಿ ನಾಯಕತ್ವವು ಸ್ಫೂರ್ತಿದಾಯಕ ಎಂದು ಕರೆದ ಅವರು, ಅದಾನಿ ಸಮೂಹವು ಸೌರ, ಗಾಳಿ ಮತ್ತು ಎಚ್2 ಮೂಲಕ ಶಕ್ತಿಯ ಪರಿವರ್ತನೆಗೆ 70 ಬಿಲಿಯನ್ ಯುಎಸ್ ಡಾಲರ್ ಹೂಡುವುದಾಗಿ ಹೇಳಿದ್ದಾರೆ. ಮತ್ತು ಇದಕ್ಕೆ ಅವಕಾಶ ನೀಡಿದ್ದಕ್ಕೆ ಯುನೈಟೆಡ್ ಕಿಂಗ್​ಡಮ್ ಸರ್ಕಾರ ಮತ್ತು ಯುಕೆ ಸರ್ಕಾರದ ವಾಣಿಜ್ಯ ಇಲಾಖೆಗೆ ಧನ್ಯವಾದಗಳು ಎಂದು ಅದಾನಿ ಟ್ವೀಟ್​ ಮಾಡಿದ್ದಾರೆ.

“ಅಧ್ಯಕ್ಷ ಗೌತಮ್ ಅದಾನಿ ಅವರು ಹವಾಮಾನ ಬದಲಾವಣೆಯ ವಿರುದ್ಧ ಸಮಾನ ಮತ್ತು ಪ್ರಾಯೋಗಿಕ ನೀತಿಗಳೊಂದಿಗೆ ಹೋರಾಡಬೇಕು ಎಂದು ಹೇಳುತ್ತಾರೆ. ಲಂಡನ್‌ನಲ್ಲಿ ಯುಕೆ ಸರ್ಕಾರದ ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಮಾತನಾಡುತ್ತಾ, ಹವಾಮಾನ ಬಿಕ್ಕಟ್ಟನ್ನು ಜಯಿಸಲು ಪ್ರಾಯೋಗಿಕ ಗುರಿಗಳನ್ನು ಮತ್ತು ಕಾರ್ಯಸೂಚಿಗಳನ್ನು ನಿಗದಿ ಪಡಿಸಲು ಕರೆ ನೀಡಿದರು,” ಎಂದು ಅದಾನಿ ಸಮೂಹ ಮಂಗಳವಾರದ ಟ್ವೀಟ್ ನಲ್ಲಿ ಹೇಳಿದೆ. (ANI)

ಇದನ್ನೂ ಓದಿ: Top 10 Richest Indian 2021: ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ