AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಚಿನ್ನ, ಬೆಳ್ಳಿ ದರ ಹೆಚ್ಚಳ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನ, ಬೆಳ್ಳಿ ದರ ಹೆಚ್ಚಳ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ
ಚಿನ್ನದ ಬೆಲೆ Image Credit source: Indian Express
TV9 Web
| Updated By: Ganapathi Sharma|

Updated on: Nov 25, 2022 | 5:30 AM

Share

Gold Silver Price on 25th November 2022 | ಬೆಂಗಳೂರು: ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಸತತ ಮೂರು ದಿನಗಳಿಂದ ಕುಸಿತ ಕಂಡಿದ್ದ ಚಿನ್ನ (Gold Price) ಹಾಗೂ ಬೆಳ್ಳಿ ದರ (Silver Price) ಇಂದು ಮತ್ತೆ ಚೇತರಿಕೆಯಾಗಿದೆ. ಷೇರುಮಾರುಕಟ್ಟೆಗಳ ಚೇತರಿಕೆ, ರೂಪಾಯಿ ಮೌಲ್ಯ ವೃದ್ಧಿ ಇತ್ಯಾದಿ ಅಂಶಗಳು ಚಿನ್ನದ ಮೇಲಿನ ಹೂಡಿಕೆ ಮೇಲೂ ಪರಿಣಾಮ ಬೀರಿದೆ. ಕಳೆದ ಮೂರು ದಿನ ಉಭಯ ಲೋಹಗಳ ದರ ಇಳಿಕೆಯಾಗಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ 300 ರೂ. ಹೆಚ್ಚಳವಾಗಿ 48,550 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 330 ರೂ. ಏರಿಕೆಯಾಗಿ 52,970 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 1200 ರೂ. ಹೆಚ್ಚಳಗೊಂಡು 62,200 ರೂಪಾಯಿ ಆಗಿದೆ.

ಇದನ್ನೂ ಓದಿ: Gold Price Today: ಮತ್ತೆ ಇಳಿಕೆಯಾಯ್ತು ಚಿನ್ನ, ಬೆಳ್ಳಿ ದರ; ಇಲ್ಲಿದೆ ನೋಡಿ ವಿವರ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,310 ರೂ. ಮುಂಬೈ- 48,550 ರೂ, ದೆಹಲಿ- 48,700 ರೂ, ಕೊಲ್ಕತ್ತಾ- 48,550 ರೂ, ಬೆಂಗಳೂರು- 48,600 ರೂ, ಹೈದರಾಬಾದ್- 48,550 ರೂ, ಕೇರಳ- 48,550 ರೂ, ಪುಣೆ- 48,550 ರೂ, ಮಂಗಳೂರು- 48,600 ರೂ, ಮೈಸೂರು- 48,600 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:

ಚೆನ್ನೈ- 53,790 ರೂ, ಮುಂಬೈ- 52,970 ರೂ, ದೆಹಲಿ- 53,120 ರೂ, ಕೊಲ್ಕತ್ತಾ- 52,970 ರೂ, ಬೆಂಗಳೂರು- 53,020 ರೂ, ಹೈದರಾಬಾದ್- 52,970 ರೂ, ಕೇರಳ- 52,970 ರೂ, ಪುಣೆ- 52,970 ರೂ, ಮಂಗಳೂರು- 52,020 ರೂ, ಮೈಸೂರು- 53,020 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 68,200 ರೂ, ಮೈಸೂರು- 68,200 ರೂ., ಮಂಗಳೂರು- 68,200 ರೂ., ಮುಂಬೈ- 62,200 ರೂ, ಚೆನ್ನೈ- 68,200 ರೂ, ದೆಹಲಿ- 62,200 ರೂ, ಹೈದರಾಬಾದ್- 68,200 ರೂ, ಕೊಲ್ಕತ್ತಾ- 62,200 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ