Gold Price Today: 11 ತಿಂಗಳಲ್ಲೇ ಅತಿ ಕಡಿಮೆಯಾದ ಚಿನ್ನದ ಬೆಲೆ; ಬೆಳ್ಳಿ ದರ 1,600 ರೂ. ಏರಿಕೆ

Silver Price Today: ಬೆಳ್ಳಿ ಬೆಲೆ ಇಂದು ಭಾರೀ ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 55,000 ರೂ. ಇದ್ದುದು ಇಂದು 56,600 ರೂ. ಆಗಿದೆ.

Gold Price Today: 11 ತಿಂಗಳಲ್ಲೇ ಅತಿ ಕಡಿಮೆಯಾದ ಚಿನ್ನದ ಬೆಲೆ; ಬೆಳ್ಳಿ ದರ 1,600 ರೂ. ಏರಿಕೆ
ಚಿನ್ನದ ಬೆಲೆ
Edited By:

Updated on: Jul 17, 2022 | 5:55 AM

ಬೆಂಗಳೂರು: ಭಾರತದಲ್ಲಿ ನಿನ್ನೆ ಏರಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಇಂದು ಭಾರೀ ಹೆಚ್ಚಳವಾಗಿದೆ. ಇಂದು 10 ಗ್ರಾಂ ಚಿನ್ನದ ದರ 110 ರೂ. ಏರಿಕೆಯಾಗಿದೆ. ಆದರೆ, ಕಳೆದ 11 ತಿಂಗಳಿಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಮುಖವಾಗಿದೆ. ಬೆಳ್ಳಿಯ ಬೆಲೆ (Silver Price) ನಿನ್ನೆ 2,000 ರೂ. ಇಳಿಕೆಯಾಗಿತ್ತು. ಆದರೆ, ಇಂದು ಬೆಳ್ಳಿ ದರ 1 ಕೆಜಿಗೆ ಬರೋಬ್ಬರಿ 1,600 ರೂ. ಏರಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,500 ರೂ. ಇದ್ದುದು 46,600 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,730 ರೂ. ಇದ್ದುದು 50,840 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,270 ರೂ. ಮುಂಬೈ- 46,600 ರೂ, ದೆಹಲಿ- 46,600 ರೂ, ಕೊಲ್ಕತ್ತಾ- 46,600 ರೂ, ಬೆಂಗಳೂರು- 46,700 ರೂ, ಹೈದರಾಬಾದ್- 46,600 ರೂ, ಕೇರಳ- 46,600 ರೂ, ಪುಣೆ- 46,630 ರೂ, ಮಂಗಳೂರು- 46,700 ರೂ, ಮೈಸೂರು- 46,700 ರೂ. ಇದೆ.

ಇದನ್ನೂ ಓದಿ: Gold Price Today: 2 ದಿನಗಳ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರವೂ ಕೊಂಚ ಹೆಚ್ಚಳ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 50,480 ರೂ, ಮುಂಬೈ- 50,840 ರೂ, ದೆಹಲಿ- 50,840 ರೂ, ಕೊಲ್ಕತ್ತಾ- 50,840 ರೂ, ಬೆಂಗಳೂರು- 50,940 ರೂ, ಹೈದರಾಬಾದ್- 50,840 ರೂ, ಕೇರಳ- 50,840 ರೂ, ಪುಣೆ- 50,870 ರೂ, ಮಂಗಳೂರು- 50,940 ರೂ, ಮೈಸೂರು- 50,940 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು ಭಾರೀ ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 55,000 ರೂ. ಇದ್ದುದು ಇಂದು 56,600 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,700 ರೂ, ಮೈಸೂರು- 60,700 ರೂ., ಮಂಗಳೂರು- 60,700 ರೂ., ಮುಂಬೈ- 56,600 ರೂ, ಚೆನ್ನೈ- 60,700 ರೂ, ದೆಹಲಿ- 56,600 ರೂ, ಹೈದರಾಬಾದ್- 60,700 ರೂ, ಕೊಲ್ಕತ್ತಾ- 56,600 ರೂ. ಆಗಿದೆ.

TV9 Web

TV9 Kannada

Read More
Loading...
Unable to load recommendations.
Follow Us