Gold Price Today: ಭಾರತದಲ್ಲಿ ಇಂದು ಚಿನ್ನದ ಬೆಲೆ 240 ರೂ. ಏರಿಕೆ; ಬೆಳ್ಳಿ ಬೆಲೆಯಲ್ಲಿ 600 ರೂ. ಹೆಚ್ಚಳ

Silver Price Today: ಬೆಳ್ಳಿ ಬೆಲೆ ಇಂದು 600 ರೂ. ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 57,400 ರೂ. ಇದ್ದುದು ಇಂದು 58,000 ರೂ. ಆಗಿದೆ.

Gold Price Today: ಭಾರತದಲ್ಲಿ ಇಂದು ಚಿನ್ನದ ಬೆಲೆ 240 ರೂ. ಏರಿಕೆ; ಬೆಳ್ಳಿ ಬೆಲೆಯಲ್ಲಿ 600 ರೂ. ಹೆಚ್ಚಳ
ಚಿನ್ನದ ಬೆಲೆ
Image Credit source: Financial Express
Edited By:

Updated on: Sep 23, 2022 | 6:30 AM

Gold Price on 23rd September 2022 | ಬೆಂಗಳೂರು: ಭಾರತದಲ್ಲಿ ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಇಂದು ಮತ್ತೆ ಏರಿಕೆಯಾಗಿದೆ. ಚಿನ್ನದ ದರ ಇಂದು 240 ರೂ. ಹೆಚ್ಚಳವಾಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿಯ ಬೆಲೆ (Silver Price) ಇಂದು 600 ರೂ. ಹೆಚ್ಚಳವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 45,800 ರೂ. ಇದ್ದುದು 46,000 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 49,960 ರೂ. ಇದ್ದುದು 50,200 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,750 ರೂ. ಮುಂಬೈ- 46,000 ರೂ, ದೆಹಲಿ- 46,150 ರೂ, ಕೊಲ್ಕತ್ತಾ- 46,000 ರೂ, ಬೆಂಗಳೂರು- 46,050 ರೂ, ಹೈದರಾಬಾದ್- 46,000 ರೂ, ಕೇರಳ- 46,000 ರೂ, ಪುಣೆ- 46,030 ರೂ, ಮಂಗಳೂರು- 46,050 ರೂ, ಮೈಸೂರು- 46,050 ರೂ. ಇದೆ.

ಇದನ್ನೂ ಓದಿ: Gold Price Today: ಕುಸಿತವಾಗಿದ್ದ ಚಿನ್ನದ ಬೆಲೆ ಮತ್ತೆ ಕೊಂಚ ಏರಿಕೆ; ಬೆಳ್ಳಿ ದರ 500 ರೂ. ಹೆಚ್ಚಳ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,000 ರೂ, ಮುಂಬೈ- 50,200 ರೂ, ದೆಹಲಿ- 50,350 ರೂ, ಕೊಲ್ಕತ್ತಾ- 50,200 ರೂ, ಬೆಂಗಳೂರು- 50,240 ರೂ, ಹೈದರಾಬಾದ್- 50,200 ರೂ, ಕೇರಳ- 50,200 ರೂ, ಪುಣೆ- 50,230 ರೂ, ಮಂಗಳೂರು- 50,240 ರೂ, ಮೈಸೂರು- 50,240 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು 600 ರೂ. ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 57,400 ರೂ. ಇದ್ದುದು ಇಂದು 58,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,000 ರೂ, ಮೈಸೂರು- 63,000 ರೂ., ಮಂಗಳೂರು- 63,000 ರೂ., ಮುಂಬೈ- 58,000 ರೂ, ಚೆನ್ನೈ- 63,000 ರೂ, ದೆಹಲಿ- 58,000 ರೂ, ಹೈದರಾಬಾದ್- 63,000 ರೂ, ಕೊಲ್ಕತ್ತಾ- 58,000 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us