Gold Price Today: ಚಿನ್ನದ ಬೆಲೆ 530 ರೂ. ಏರಿಕೆ; ಬೆಳ್ಳಿ ದರ ಒಂದೇ ದಿನದಲ್ಲಿ 1,200 ರೂ. ಕುಸಿತ

| Updated By: ಸುಷ್ಮಾ ಚಕ್ರೆ

Updated on: Sep 24, 2022 | 5:42 AM

Silver Price Today: ಬೆಳ್ಳಿ ಬೆಲೆ ಇಂದು 1,200 ರೂ. ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 58,000 ರೂ. ಇದ್ದುದು ಇಂದು 56,800 ರೂ. ಆಗಿದೆ.

Gold Price Today: ಚಿನ್ನದ ಬೆಲೆ 530 ರೂ. ಏರಿಕೆ; ಬೆಳ್ಳಿ ದರ ಒಂದೇ ದಿನದಲ್ಲಿ 1,200 ರೂ. ಕುಸಿತ
ಚಿನ್ನದ ಬೆಲೆ
Image Credit source: Live Mint
Follow us on

Gold Price on 24th September 2022 | ಬೆಂಗಳೂರು: ಭಾರತದಲ್ಲಿ ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rate) 2 ದಿನಗಳಿಂದ ಏರಿಕೆಯಾಗುತ್ತಿದೆ. ಚಿನ್ನದ ದರ ಇಂದು ಬರೋಬ್ಬರಿ 530 ರೂ. ಹೆಚ್ಚಳವಾಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿಯ ಬೆಲೆ (Silver Price) ಇಂದು ಒಂದೇ ದಿನದಲ್ಲಿ 1,200 ರೂ. ಕುಸಿತವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,000 ರೂ. ಇದ್ದುದು 46,500 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,200 ರೂ. ಇದ್ದುದು 50,730 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,700 ರೂ. ಮುಂಬೈ- 46,500 ರೂ, ದೆಹಲಿ- 46,650 ರೂ, ಕೊಲ್ಕತ್ತಾ- 46,500 ರೂ, ಬೆಂಗಳೂರು- 46,550 ರೂ, ಹೈದರಾಬಾದ್- 46,500 ರೂ, ಕೇರಳ- 46,500 ರೂ, ಪುಣೆ- 46,530 ರೂ, ಮಂಗಳೂರು- 46,550 ರೂ, ಮೈಸೂರು- 46,550 ರೂ. ಇದೆ.

ಇದನ್ನೂ ಓದಿ: Gold Price Today: ಭಾರತದಲ್ಲಿ ಇಂದು ಚಿನ್ನದ ಬೆಲೆ 240 ರೂ. ಏರಿಕೆ; ಬೆಳ್ಳಿ ಬೆಲೆಯಲ್ಲಿ 600 ರೂ. ಹೆಚ್ಚಳ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 50,950 ರೂ, ಮುಂಬೈ- 50,730 ರೂ, ದೆಹಲಿ- 50,890 ರೂ, ಕೊಲ್ಕತ್ತಾ- 50,730 ರೂ, ಬೆಂಗಳೂರು- 50,780 ರೂ, ಹೈದರಾಬಾದ್- 50,730 ರೂ, ಕೇರಳ- 50,730 ರೂ, ಪುಣೆ- 50,760 ರೂ, ಮಂಗಳೂರು- 50,780 ರೂ, ಮೈಸೂರು- 50,780 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು 1,200 ರೂ. ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 58,000 ರೂ. ಇದ್ದುದು ಇಂದು 56,800 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,500 ರೂ, ಮೈಸೂರು- 62,500 ರೂ., ಮಂಗಳೂರು- 62,500 ರೂ., ಮುಂಬೈ- 56,800 ರೂ, ಚೆನ್ನೈ- 62,500 ರೂ, ದೆಹಲಿ- 56,800 ರೂ, ಹೈದರಾಬಾದ್- 62,500 ರೂ, ಕೊಲ್ಕತ್ತಾ- 56,800 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ