Gold Rate Today Bangalore: ಚಿನ್ನದ ಬೆಲೆ 110 ರೂ ಹೆಚ್ಚಳ; ಇಲ್ಲಿದೆ ದರಪಟ್ಟಿ

Bullion Market 2025 November 19th: ಚಿನ್ನ, ಬೆಳ್ಳಿ ಬೆಲೆಗಳೆರಡೂ ಇಂದು ಬುಧವಾರ ಏರಿವೆ. ಚಿನ್ನದ ಬೆಲೆ 110 ರೂ ಏರಿದರೆ, ಬೆಳ್ಳಿ ಬೆಲೆ 3 ರೂ ಹೆಚ್ಚಳ ಕಂಡಿದೆ. ಆಭರಣ ಚಿನ್ನದ ಬೆಲೆ 11,335 ರೂನಿಂದ 11,445 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,486 ರೂಗೆ ಏರಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 165 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 173 ರೂ ಇದೆ.

Gold Rate Today Bangalore: ಚಿನ್ನದ ಬೆಲೆ 110 ರೂ ಹೆಚ್ಚಳ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Nov 19, 2025 | 11:50 AM

ಬೆಂಗಳೂರು, ನವೆಂಬರ್ 19: ಸತತವಾಗಿ ಇಳಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಬುಧವಾರ ಹೆಚ್ಚಳಗೊಂಡಿವೆ. ನಿನ್ನೆ 5 ರೂ ತಗ್ಗಿದ್ದ ಬೆಳ್ಳಿ ಬೆಲೆ ಇವತ್ತು 3 ರೂ ಜಂಪ್ ಪಡೆದಿದೆ. ನಿನ್ನೆ 120 ರೂ ಇಳಿದಿದ್ದ ಆಭರಣ ಚಿನ್ನದ ಬೆಲೆ (gold rate) ಇವತ್ತು 110 ರೂ ಏರಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ದೊಡ್ಡ ಏರುಪೇರಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,14,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,24,860 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 16,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,14,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 16,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 19ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,486 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,445 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,364 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 165 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,486 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,445 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 165 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,445 ರೂ
  • ಚೆನ್ನೈ: 11,500 ರೂ
  • ಮುಂಬೈ: 11,445 ರೂ
  • ದೆಹಲಿ: 11,460 ರೂ
  • ಕೋಲ್ಕತಾ: 11,445 ರೂ
  • ಕೇರಳ: 11,445 ರೂ
  • ಅಹ್ಮದಾಬಾದ್: 11,450 ರೂ
  • ಜೈಪುರ್: 11,460 ರೂ
  • ಲಕ್ನೋ: 11,460 ರೂ
  • ಭುವನೇಶ್ವರ್: 11,445 ರೂ

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಸತತವಾಗಿ ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಕಾರಣ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 529 ರಿಂಗಿಟ್ (11,280 ರುಪಾಯಿ)
  • ದುಬೈ: 453.50 ಡಿರಾಮ್ (10,921 ರುಪಾಯಿ)
  • ಅಮೆರಿಕ: 126 ಡಾಲರ್ (11,145 ರುಪಾಯಿ)
  • ಸಿಂಗಾಪುರ: 163.40 ಸಿಂಗಾಪುರ್ ಡಾಲರ್ (11,097 ರುಪಾಯಿ)
  • ಕತಾರ್: 453 ಕತಾರಿ ರಿಯಾಲ್ (10,992 ರೂ)
  • ಸೌದಿ ಅರೇಬಿಯಾ: 462 ಸೌದಿ ರಿಯಾಲ್ (10,897 ರುಪಾಯಿ)
  • ಓಮನ್: 47.90 ಒಮಾನಿ ರಿಯಾಲ್ (11,005 ರುಪಾಯಿ)
  • ಕುವೇತ್: 37.23 ಕುವೇತಿ ದಿನಾರ್ (10,726 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 165 ರೂ
  • ಚೆನ್ನೈ: 173 ರೂ
  • ಮುಂಬೈ: 165 ರೂ
  • ದೆಹಲಿ: 165 ರೂ
  • ಕೋಲ್ಕತಾ: 165 ರೂ
  • ಕೇರಳ: 173 ರೂ
  • ಅಹ್ಮದಾಬಾದ್: 165 ರೂ
  • ಜೈಪುರ್: 165 ರೂ
  • ಲಕ್ನೋ: 165 ರೂ
  • ಭುವನೇಶ್ವರ್: 173 ರೂ
  • ಪುಣೆ: 165

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us