Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ
Bullion Market 2025 August 21st: ನಿನ್ನೆ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಗುರುವಾರ ಏರಿವೆ. 22 ಕ್ಯಾರಟ್ ಚಿನ್ನದ ಬೆಲೆ 9,180 ರೂನಿಂದ 9,230 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 10,075 ರೂಗೆ ಏರಿದೆ. ಬೆಳ್ಳಿ ಬೆಲೆ ಕರ್ನಾಟಕ, ಮಹಾರಾಷ್ಟ್ರ ಮುಂತಾದ ಹೆಚ್ಚಿನ ಕಡೆ ಒಂದು ರೂ ಏರಿ 116 ರೂ ಮುಟ್ಟಿದೆ. ತಮಿಳುನಾಡು ಸೇರಿ ಕೆಲವೆಡೆ ಬೆಲೆ 126 ರೂಗೆ ಏರಿದೆ.

ಬೆಂಗಳೂರು, ಆಗಸ್ಟ್ 21: ಚಿನ್ನದ ಬೆಲೆ ಆಗಸ್ಟ್ 8ರ ನಂತರ ಮೊದಲ ಬಾರಿಗೆ ಇಂದು ಏರಿಕೆ ಕಂಡಿದೆ. 12 ದಿನದಲ್ಲಿ 290 ರೂನಷ್ಟು ಇಳಿದಿದ್ದ ಇದರ ಬೆಲೆ (gold rate) ಗ್ರಾಮ್ಗೆ 50 ರೂ ಏರಿದೆ. ಆಭರಣ ಚಿನ್ನದ ಬೆಲೆ ಮತ್ತೆ 9,200 ರೂ ಗಡಿ ದಾಟಿದೆ. ವಿದೇಶಗಳಲ್ಲೂ ಕೆಲವೆಡೆ ಬೆಲೆ ಏರಿಕೆಯಾಗಿದೆ. ಇನ್ನೂ ಕೆಲವೆಡೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆಯಲ್ಲಿ ಒಂದು ರೂ ಹೆಚ್ಚಳ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 92,300 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,00,750 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 92,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,600 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 12,600 ರೂ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 21ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,750 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,520 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,160 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,750 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,160 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 92,300 ರೂ
- ಚೆನ್ನೈ: 92,300 ರೂ
- ಮುಂಬೈ: 92,300 ರೂ
- ದೆಹಲಿ: 92,450 ರೂ
- ಕೋಲ್ಕತಾ: 92,300 ರೂ
- ಕೇರಳ: 92,300 ರೂ
- ಅಹ್ಮದಾಬಾದ್: 92,350 ರೂ
- ಜೈಪುರ್: 92,450 ರೂ
- ಲಕ್ನೋ: 92,450 ರೂ
- ಭುವನೇಶ್ವರ್: 92,300 ರೂ
ಇದನ್ನೂ ಓದಿ: ಎರಡೂವರೆ ಲಕ್ಷ ಪೋಸ್ಟ್ಮ್ಯಾನ್ಗಳಿಗೆ ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಗಳಾಗಲು ಸಿಗಲಿದೆ ತರಬೇತಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 4,370 ರಿಂಗಿಟ್ (90,020 ರುಪಾಯಿ)
- ದುಬೈ: 3,735 ಡಿರಾಮ್ (88,440 ರುಪಾಯಿ)
- ಅಮೆರಿಕ: 1,035 ಡಾಲರ್ (90,030 ರುಪಾಯಿ)
- ಸಿಂಗಾಪುರ: 1,328 ಸಿಂಗಾಪುರ್ ಡಾಲರ್ (89,810 ರುಪಾಯಿ)
- ಕತಾರ್: 3,760 ಕತಾರಿ ರಿಯಾಲ್ (89,730 ರೂ)
- ಸೌದಿ ಅರೇಬಿಯಾ: 3,810 ಸೌದಿ ರಿಯಾಲ್ (88,310 ರುಪಾಯಿ)
- ಓಮನ್: 395 ಒಮಾನಿ ರಿಯಾಲ್ (89,300 ರುಪಾಯಿ)
- ಕುವೇತ್: 304 ಕುವೇತಿ ದಿನಾರ್ (86,520 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 11,600 ರೂ
- ಚೆನ್ನೈ: 12,600 ರೂ
- ಮುಂಬೈ: 11,600 ರೂ
- ದೆಹಲಿ: 11,600 ರೂ
- ಕೋಲ್ಕತಾ: 11,600 ರೂ
- ಕೇರಳ: 12,600 ರೂ
- ಅಹ್ಮದಾಬಾದ್: 11,600 ರೂ
- ಜೈಪುರ್: 11,600 ರೂ
- ಲಕ್ನೋ: 11,600 ರೂ
- ಭುವನೇಶ್ವರ್: 12,600 ರೂ
- ಪುಣೆ: 11,600
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








