Gold Rate Today Bangalore: ಚಿನ್ನದ ಬೆಲೆ 2 ದಿನದಲ್ಲಿ 155 ರೂ ಕುಸಿತ; ಇಲ್ಲಿದೆ ದರಪಟ್ಟಿ

Bullion Market 2025 November 5th: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಇಳಿಕೆಯ ಹಾದಿಯಲ್ಲಿವೆ. ಈ ಅಮೂಲ್ಯ ಲೋಹಗಳ ಬೆಲೆ ಬುಧವಾರ ತಗ್ಗಿದೆ. ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 90 ರೂ ತಗ್ಗಿ 11,135 ರೂ ಮುಟ್ಟಿದೆ. ಅಪರಂಜಿ ಚಿನ್ನದ ಬೆಲೆ 12,148 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 151 ರೂ ಇದ್ದದ್ದು 50 ಪೈಸೆ ಕಡಿಮೆಗೊಂಡು 150.50 ರೂ ಮುಟ್ಟಿದೆ.

Gold Rate Today Bangalore: ಚಿನ್ನದ ಬೆಲೆ 2 ದಿನದಲ್ಲಿ 155 ರೂ ಕುಸಿತ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Nov 05, 2025 | 2:02 PM

ಬೆಂಗಳೂರು, ನವೆಂಬರ್ 5: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇವತ್ತೂ ಇಳಿಕೆಗೊಂಡಿವೆ. ಈ ಎರಡೂ ಬೆಲೆಗಳು ಸತತ ಎರಡನೇ ದಿನ ಕುಸಿತ ಕಂಡಂತಾಗಿದೆ. ಚಿನ್ನದ ಬೆಲೆ (Gold rate) ಗ್ರಾಮ್​ಗೆ 90 ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 50 ಪೈಸೆಯಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,11,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,21,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,050 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,11,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 15,050 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 5ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,148 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,135 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,111 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 150.50 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,148 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,135 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 150.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,135 ರೂ
  • ಚೆನ್ನೈ: 11,180 ರೂ
  • ಮುಂಬೈ: 11,135 ರೂ
  • ದೆಹಲಿ: 11,150 ರೂ
  • ಕೋಲ್ಕತಾ: 11,135 ರೂ
  • ಕೇರಳ: 11,135 ರೂ
  • ಅಹ್ಮದಾಬಾದ್: 11,140 ರೂ
  • ಜೈಪುರ್: 11,150 ರೂ
  • ಲಕ್ನೋ: 11,150 ರೂ
  • ಭುವನೇಶ್ವರ್: 11,135 ರೂ

ಇದನ್ನೂ ಓದಿ: ಅಮೆರಿಕ, ಸಿಂಗಾಪುರ್ ಮಾದರಿಯಲ್ಲಿ ಭಾರತದಲ್ಲಿ ಶಾಲಾ ಮಕ್ಕಳ ಸುರಕ್ಷತೆಗೆ ಆರ್​ಎಫ್​ಐಡಿ ಟ್ರ್ಯಾಕಿಂಗ್ ಸಿಸ್ಟಂ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 520 ರಿಂಗಿಟ್ (11,009 ರುಪಾಯಿ)
  • ದುಬೈ: 443.50 ಡಿರಾಮ್ (10,718 ರುಪಾಯಿ)
  • ಅಮೆರಿಕ: 123.50 ಡಾಲರ್ (10,963 ರುಪಾಯಿ)
  • ಸಿಂಗಾಪುರ: 160.60 ಸಿಂಗಾಪುರ್ ಡಾಲರ್ (10,907 ರುಪಾಯಿ)
  • ಕತಾರ್: 440 ಕತಾರಿ ರಿಯಾಲ್ (10,715 ರೂ)
  • ಸೌದಿ ಅರೇಬಿಯಾ: 450 ಸೌದಿ ರಿಯಾಲ್ (10,651 ರುಪಾಯಿ)
  • ಓಮನ್: 46.60 ಒಮಾನಿ ರಿಯಾಲ್ (10,744 ರುಪಾಯಿ)
  • ಕುವೇತ್: 36.16 ಕುವೇತಿ ದಿನಾರ್ (10,447 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 150.50 ರೂ
  • ಚೆನ್ನೈ: 163 ರೂ
  • ಮುಂಬೈ: 150.50 ರೂ
  • ದೆಹಲಿ: 150.50 ರೂ
  • ಕೋಲ್ಕತಾ: 150.50 ರೂ
  • ಕೇರಳ: 163 ರೂ
  • ಅಹ್ಮದಾಬಾದ್: 150.50 ರೂ
  • ಜೈಪುರ್: 150.50 ರೂ
  • ಲಕ್ನೋ: 150.50 ರೂ
  • ಭುವನೇಶ್ವರ್: 163 ರೂ
  • ಪುಣೆ: 150.50

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us