Gold Rate Today Bangalore: ವಾರಾಂತ್ಯದಲ್ಲಿ ಚಿನ್ನದ ಬೆಲೆ ಭರ್ಜರಿ ಇಳಿಕೆ; ಇಲ್ಲಿದೆ ದರಪಟ್ಟಿ

Bullion Market 2025 June 8th: ಈ ವಾರದ ಕೊನೆಯಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾದರೆ, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಇದೆ. 22 ಕ್ಯಾರಟ್ ಚಿನ್ನದ ಬೆಲೆ 8,980 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 9,797 ರೂಗೆ ಇಳಿದಿದೆ. ಕಳೆದ ಹತ್ತು ದಿನದಲ್ಲಿ ಚಿನ್ನದ ಬೆಲೆ ಏರಿಕೆ 125 ರೂಗೆ ಸೀಮಿತಗೊಂಡಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ 107 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 118 ರೂಗೆ ಏರಿದೆ.

Gold Rate Today Bangalore: ವಾರಾಂತ್ಯದಲ್ಲಿ ಚಿನ್ನದ ಬೆಲೆ ಭರ್ಜರಿ ಇಳಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Jun 08, 2025 | 10:16 AM

ಬೆಂಗಳೂರು, ಜೂನ್ 8: ಈ ವಾರ ಬಹುತೇಕ ದಿನ ಭರ್ಜರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ (gold rate today) ವಾರಾಂತ್ಯದಲ್ಲಿ ಭರ್ಜರಿ ಇಳಿಕೆಯನ್ನೂ ಕಂಡಿದೆ. ವಾರದ ಕೊನೆಯಲ್ಲಿ ಬರೋಬ್ಬರಿ 130 ರೂನಷ್ಟು ಬೆಲೆ ಇಳಿಕೆ ಕಂಡಿದೆ. ಕಳೆದ ಹತ್ತು ದಿನದಲ್ಲಿ ಚಿನ್ನದ ಬೆಲೆಯ ಏರಿಕೆ 125 ರೂಗೆ ಸೀಮಿತವಾಗಿದೆ. ಇನ್ನು, ಬೆಳ್ಳಿ ಬೆಲೆ ವಾರಾಂತ್ಯದಲ್ಲಿ ಏರಿಕೆ ಕಾಣದಿದ್ದರೂ ಕಳೆದ ಹತ್ತು ದಿನದಲ್ಲಿ ಬರೋಬ್ಬರಿ 7 ರೂಗಳಷ್ಟು ಹೆಚ್ಚಳ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 89,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 97,970 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 89,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,700 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 8ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,800 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 97,970 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,480 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,070 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,800 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 97,970 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,070 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 89,800 ರೂ
  • ಚೆನ್ನೈ: 89,800 ರೂ
  • ಮುಂಬೈ: 89,800 ರೂ
  • ದೆಹಲಿ: 89,950 ರೂ
  • ಕೋಲ್ಕತಾ: 89,800 ರೂ
  • ಕೇರಳ: 89,800 ರೂ
  • ಅಹ್ಮದಾಬಾದ್: 89,850 ರೂ
  • ಜೈಪುರ್: 89,950 ರೂ
  • ಲಕ್ನೋ: 89,950 ರೂ
  • ಭುವನೇಶ್ವರ್: 89,800 ರೂ

ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ

ಇದನ್ನೂ ಓದಿ
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,430 ರಿಂಗಿಟ್ (89,890 ರುಪಾಯಿ)
  • ದುಬೈ: 3,692.50 ಡಿರಾಮ್ (86,240 ರುಪಾಯಿ)
  • ಅಮೆರಿಕ: 1,020 ಡಾಲರ್ (87,500 ರುಪಾಯಿ)
  • ಸಿಂಗಾಪುರ: 1,356 ಸಿಂಗಾಪುರ್ ಡಾಲರ್ (90,210 ರುಪಾಯಿ)
  • ಕತಾರ್: 3,720 ಕತಾರಿ ರಿಯಾಲ್ (87,540 ರೂ)
  • ಸೌದಿ ಅರೇಬಿಯಾ: 3,780 ಸೌದಿ ರಿಯಾಲ್ (86,460 ರುಪಾಯಿ)
  • ಓಮನ್: 392 ಒಮಾನಿ ರಿಯಾಲ್ (87,340 ರುಪಾಯಿ)
  • ಕುವೇತ್: 301.90 ಕುವೇತಿ ದಿನಾರ್ (84,390 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,700 ರೂ
  • ಚೆನ್ನೈ: 11,800 ರೂ
  • ಮುಂಬೈ: 10,700 ರೂ
  • ದೆಹಲಿ: 10,700 ರೂ
  • ಕೋಲ್ಕತಾ: 10,700 ರೂ
  • ಕೇರಳ: 11,800 ರೂ
  • ಅಹ್ಮದಾಬಾದ್: 10,700 ರೂ
  • ಜೈಪುರ್: 10,700 ರೂ
  • ಲಕ್ನೋ: 10,700 ರೂ
  • ಭುವನೇಶ್ವರ್: 11,800 ರೂ
  • ಪುಣೆ: 10,400

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ