Gold Rates: ಆಭರಣ ಚಿನ್ನದ ಬೆಲೆ 15,000 ರೂ; ಇಲ್ಲಿದೆ ದರಪಟ್ಟಿ

Bullion Market 2026 March 8th: ಈ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳ ಆಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿಸಿದೆ. ಆಭರಣ ಚಿನ್ನದ ಬೆಲೆ 15,000 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 16,364 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 285 ರೂ ಹೊಂದಿದೆ. ಚೆನ್ನೈ ಮೊದಲಾದೆಡೆ ಬೆಲೆ 290 ರೂ ಇದೆ.

Gold Rates: ಆಭರಣ ಚಿನ್ನದ ಬೆಲೆ 15,000 ರೂ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Mar 08, 2026 | 11:15 AM

ಬೆಂಗಳೂರು, ಮಾರ್ಚ್ 8: ಚಿನ್ನದ ಬೆಲೆಯಲ್ಲಿ (Gold Rates) ತುಸು ಏರಿಳಿತವಾಗುತ್ತಿದೆ. ಈ ವಾರ ಮೊದಲ ಐದು ದಿನ ಸತತವಾಗಿ ಇಳಿಕೆಯಾಗಿದ್ದ ಚಿನ್ನದ ಬೆಲೆ ವಾರಾಂತ್ಯದಲ್ಲಿ 230 ರೂಗಳಷ್ಟು ಜಿಗಿದಿದೆ. ಆಭರಣ ಚಿನ್ನದ ಬೆಲೆ 15,000 ರೂ ಮುಟ್ಟಿದೆ. ವಿದೇಶಗಳಲ್ಲೂ ಇದೇ ರೀತಿ ಚಿನ್ನದ ಬೆಲೆಯಲ್ಲಿ ಏರಿಳಿತಗಳಾಗಿವೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿಸಿದೆ. ಇಸ್ರೇಲ್ ಇರಾನ್ ಯುದ್ಧ, ತೈಲ ಬಿಕ್ಕಟ್ಟು ಚಿನ್ನ, ಬೆಳ್ಳಿ ಬೆಲೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿದಂತೆ ತೋರುತ್ತಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,50,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,63,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,50,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 8ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,364 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,000 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,273 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,364 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,000 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 15,000 ರೂ
  • ಚೆನ್ನೈ: 15,050 ರೂ
  • ಮುಂಬೈ: 15,000 ರೂ
  • ದೆಹಲಿ: 15,015 ರೂ
  • ಕೋಲ್ಕತಾ: 15,000 ರೂ
  • ಕೇರಳ: 15,000 ರೂ
  • ಅಹ್ಮದಾಬಾದ್: 15,005 ರೂ
  • ಜೈಪುರ್: 15,015 ರೂ
  • ಲಕ್ನೋ: 15,015 ರೂ
  • ಭುವನೇಶ್ವರ್: 15,000 ರೂ

ಇದನ್ನೂ ಓದಿ: ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಆಗುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 616 ರಿಂಗಿಟ್ (14,326 ರುಪಾಯಿ)
  • ದುಬೈ: 577.25 ಡಿರಾಮ್ (14,448 ರುಪಾಯಿ)
  • ಅಮೆರಿಕ: 161.50 ಡಾಲರ್ (14,848 ರುಪಾಯಿ)
  • ಸಿಂಗಾಪುರ: 205.60 ಸಿಂಗಾಪುರ್ ಡಾಲರ್ (14,776 ರುಪಾಯಿ)
  • ಕತಾರ್: 572 ಕತಾರಿ ರಿಯಾಲ್ (14,423 ರೂ)
  • ಸೌದಿ ಅರೇಬಿಯಾ: 585 ಸೌದಿ ರಿಯಾಲ್ (14,330 ರುಪಾಯಿ)
  • ಓಮನ್: 61.25 ಒಮಾನಿ ರಿಯಾಲ್ (14,625 ರುಪಾಯಿ)
  • ಕುವೇತ್: 47.13 ಕುವೇತಿ ದಿನಾರ್ (14,151 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 290 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 290 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:03 am, Sun, 8 March 26

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us