ಒಂದು ಫೋನ್ನಿಂದ ಮತ್ತೊಂದು ಫೋನ್‌ಗೆ ಚಾರ್ಜ್ ಮಾಡುವುದು ಹೇಗೆ? ಇಲ್ಲಿದೆ ಕೆಲ ವಿಧಾನಗಳು
How to charge phone from another another one, All you need to know: ಮೊಬೈಲ್ ಫೋನ್ ಚಾರ್ಜ್ ಖಾಲಿಯಾದಾಗ ಬೇರೊಂದು ಫೋನ್‌ನ ಬ್ಯಾಟರಿ ಬಳಸಿ ಚಾರ್ಜಿಂಗ್ ಮಾಡಲು ಅವಕಾಶ ಇರುತ್ತದೆ. ಆದರೆ, ಫೋನ್ ಚಾರ್ಜ್ ನೀಡುವ ಫೋನ್, ಅದಕ್ಕೆ ಸಪೋರ್ಟ್ ಮಾಡುವಂತಿರಬೇಕು. ಯುಎಸ್‌ಬಿ ಕೇಬಲ್ ಮೂಲಕ ಚಾರ್ಜಿಂಗ್, ವೈರ್ಲೆಸ್ ಚಾರ್ಜಿಂಗ್ ಬಳಸಬಹುದು.

ಮುಖ್ಯಾಂಶಗಳು
- ಫೋನ್ ಚಾರ್ಜ್ ಖಾಲಿಯಾದಾಗ ಬೇರೊಂದು ಫೋನ್ ಬಳಸಿ ಚಾರ್ಜಿಂಗ್ ಮಾಡಬಹುದು.
- ಆದರೆ, ಫೋನ್ ಚಾರ್ಜ್ ನೀಡುವ ಫೋನ್, ಅದಕ್ಕೆ ಸಪೋರ್ಟ್ ಮಾಡುವಂತಿರಬೇಕು.
- ಯುಎಸ್‌ಬಿ ಕೇಬಲ್ ಮೂಲಕ ಚಾರ್ಜಿಂಗ್, ವೈರ್ಲೆಸ್ ಚಾರ್ಜಿಂಗ್ ಬಳಸಬಹುದು.
ತುರ್ತು ಸಂದರ್ಭಗಳಲ್ಲಿ ಮೊಬೈಲ್ ಬ್ಯಾಟರಿ ಖಾಲಿಯಾದಾಗ ಪವರ್ ಬ್ಯಾಂಕ್ ಅಥವಾ ಚಾರ್ಜರ್ ಇಲ್ಲದಿದ್ದರೆ ಗಾಬರಿಯಾಗುವುದು ಸಹಜ. ಆದರೆ, ನಿಮ್ಮ ಬಳಿ ಮತ್ತೊಂದು ಸ್ಮಾರ್ಟ್‌ಫೋನ್ ಇದ್ದರೆ, ಅದರ ಬ್ಯಾಟರಿಯಿಂದಲೇ ನಿಮ್ಮ ಫೋನ್ ಅನ್ನು ಸುಲಭವಾಗಿ ಚಾರ್ಜ್ ಮಾಡಬಹುದು. ಇದನ್ನು ಮಾಡಲು ಕೆಲ ಸುಲಭ ವಿಧಾನಗಳಿವೆ. ಆದರೆ, ಚಾರ್ಜಿಂಗ್ ದಾನ ಮಾಡುವ ಫೋನ್, ಅದಕ್ಕೆ ಸಪೋರ್ಟ್ ಮಾಡಬೇಕು. ಒಂದು ಫೋನ್ನಿಂದ ಮತ್ತೊಂದು ಫೋನ್‌ಗೆ ಚಾರ್ಜಿಂಗ್ ಮಾಡುವ ಮೂರು ವಿಧಾನಗಳ ಪರಿಚಯ ಇಲ್ಲಿದೆ, ಗಮನಿಸಿ.
1. ವೈರ್‌ಲೆಸ್ ಪವರ್ ಶೇರಿಂಗ್
ಇತ್ತೀಚಿನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ (ಉದಾಹರಣೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಸರಣಿ, ಗೂಗಲ್ ಪಿಕ್ಸೆಲ್ ಅಥವಾ ಐಫೋನ್) ವೈರ್ಲೆಸ್ ಪವರ್ ಶೇರಿಂಗ್ (Wireless Power Sharing) ತಂತ್ರಜ್ಞಾನ ಲಭ್ಯವಿದೆ. ಇದಕ್ಕೆ ಯಾವುದೇ ಕೇಬಲ್ ಅಗತ್ಯವಿರುವುದಿಲ್ಲ.
- ಮೊದಲು ಚಾರ್ಜ್ ನೀಡುವ ಫೋನ್‌ನ ‘Settings’ ಆಪ್‌ಗೆ ಹೋಗಿ.
- ಅಲ್ಲಿ ‘Battery’ ಅಥವಾ ‘Battery and Device Care’ ಆಯ್ಕೆಯನ್ನು ಕ್ಲಿಕ್ ಮಾಡಿ.
- ‘Wireless Power Sharing’ ಅಥವಾ ‘Battery Share’ ಆಯ್ಕೆಯನ್ನು ಆನ್ ಮಾಡಿ. (ಇದನ್ನು ಕ್ವಿಕ್ ಸೆಟ್ಟಿಂಗ್ಸ್ ಟಾಗಲ್ ಮೂಲಕವೂ ಆನ್ ಮಾಡಬಹುದು).
- ಈಗ ಚಾರ್ಜ್ ಮಾಡಬೇಕಾದ ಫೋನ್ ಅನ್ನು, ಚಾರ್ಜ್ ನೀಡುವ ಫೋನ್‌ನ ಹಿಂಭಾಗದ ಮಧ್ಯಭಾಗದಲ್ಲಿ (Back-to-Back) ಇರಿಸಿ. ತಕ್ಷಣವೇ ಚಾರ್ಜಿಂಗ್ ಆರಂಭವಾಗುತ್ತದೆ.
ಈ ರೀತಿ ವೈರ್ಲೆಸ್ ಚಾರ್ಜಿಂಗ್ ಸೌಲಭ್ಯ ಸಾಮಾನ್ಯವಾಗಿ ಬಜೆಟ್ ಫೋನ್‌ಗಳಲ್ಲಿ ಲಭ್ಯ ಇರುವುದಿಲ್ಲ. ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದು.
ಇದನ್ನೂ ಓದಿ: ಇಪಿಎಫ್ ಪೋರ್ಟಲ್ನಲ್ಲಿ ಆಗಲ್ಲ ಯುಎಎನ್ ಆಕ್ಟಿವೇಶನ್; UMANG ಆಪ್ನಲ್ಲಿ ಮಾತ್ರ ಸಾಧ್ಯ; ಇಲ್ಲಿವೆ ಮಹತ್ವದ ಅಪ್ಡೇಟ್ಸ್
2. ರಿವರ್ಸ್ ವೈರ್ಡ್ ಚಾರ್ಜಿಂಗ್
ನಿಮ್ಮ ಫೋನ್‌ಗಳಲ್ಲಿ ವೈರ್‌ಲೆಸ್ ಸೌಲಭ್ಯವಿಲ್ಲದಿದ್ದರೆ, ಯುಎಸ್‌ಬಿ ಕೇಬಲ್ ಬಳಸಿ ಚಾರ್ಜ್ ಮಾಡಬಹುದು. ಇದಕ್ಕೆ ಎರಡು ಫೋನ್‌ಗಳೂ Type-C ಪೋರ್ಟ್ ಹೊಂದಿರಬೇಕು ಮತ್ತು ಚಾರ್ಜ್ ನೀಡುವ ಫೋನ್ ‘Reverse Charging’ ಫೀಚರ್ ಅನ್ನು ಬೆಂಬಲಿಸಬೇಕು.
ಒಂದು ಉತ್ತಮ ಗುಣಮಟ್ಟದ Type-C to Type-C ಕೇಬಲ್ ತೆಗೆದುಕೊಳ್ಳಿ. ಕೇಬಲ್‌ನ ಒಂದು ತುದಿಯನ್ನು ಚಾರ್ಜ್ ನೀಡುವ ಫೋನ್‌ಗೆ ಮತ್ತು ಮತ್ತೊಂದು ತುದಿಯನ್ನು ಚಾರ್ಜ್ ಆಗಬೇಕಾದ ಫೋನ್‌ಗೆ ಜೋಡಿಸಿ.
ಸಂಪರ್ಕಿಸಿದ ತಕ್ಷಣ ಚಾರ್ಜ್ ವರ್ಗಾವಣೆ ಆರಂಭವಾಗುತ್ತದೆ. ಒಂದು ವೇಳೆ ಚಾರ್ಜಿಂಗ್ ದಿಕ್ಕು ಉಲ್ಟಾವಾದರೆ, ಫೋನ್‌ನ ನೋಟಿಫಿಕೇಶನ್ ಬಾರ್‌ನಲ್ಲಿ ‘USB Settings’ಗೆ ಹೋಗಿ ‘Charge connected device’ ಆಯ್ಕೆಯನ್ನು ಆರಿಸಿಕೊಳ್ಳಿ.
ಈ ಪ್ರಕ್ರಿಯೆಯಲ್ಲಿ ಚಾರ್ಜ್ ನೀಡುವ ಫೋನ್‌ನ ಬ್ಯಾಟರಿ ವೇಗವಾಗಿ ಖಾಲಿಯಾಗುತ್ತದೆ. ಆದ್ದರಿಂದ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಈ ವಿಧಾನವನ್ನು ಬಳಸುವುದು ಸೂಕ್ತ. ಹಾಗೆಯೇ, ಈ ಸೌಲಭ್ಯ ಎಲ್ಲಾ ಫೋನ್ಗಳಲ್ಲೂ ಇರುವುದಿಲ್ಲ. ಪವರ್ ಟ್ರಾನ್ಸ್ಫರ್ಗೆ ಇಂಡಕ್ಷನ್ ಕಾಯಿಲ್ಗಳನ್ನು ಹಾಕಬೇಕಾಗುತ್ತದೆ. ಇದಕ್ಕೆ ವೆಚ್ಚವಾಗುವುದರಿಂದ ಬಜೆಟ್ ಫೋನ್ಗಳಿಗೆ ಈ ಸೌಲಭ್ಯ ಇರುವುದಿಲ್ಲ. ಹೀಗಾಗಿ, ರಿವರ್ಸ್ ಚಾರ್ಜಿಂಗ್ ಮಾಡುವ ಮುನ್ನ ನಿಮ್ಮ ಫೋನ್ ಇದಕ್ಕೆ ಸಪೋರ್ಟ್ ಮಾಡುತ್ತಾ ಎಂದು ಪರಿಶೀಲಿಸಿ.
ಇದನ್ನೂ ಓದಿ: ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ
3. ಯುಎಸ್‌ಬಿ ಮತ್ತು ಒಟಿಜಿ ಕೇಬಲ್ ಬಳಸಿ ಚಾರ್ಜಿಂಗ್
ನಿಮ್ಮದು ಹಳೆಯ ಫೋನ್ ಆಗಿದ್ದು ಅದರಲ್ಲಿ ಮೈಕ್ರೋ ಯುಎಸ್‌ಬಿ ಇದ್ದರೆ ಆಗ ಯುಎಸ್‌ಬಿ ಸಿ ಕೇಬಲ್ ಮತ್ತು ಒಟಿಜಿ ಕೇಬಲ್ ಬಳಸಿ ರಿವರ್ಸ್ ಚಾರ್ಜಿಂಗ್ ಮಾಡಬಹುದು. ಚಾರ್ಜಿಂಗ್ ನೀಡುವ ಫೋನ್‌ಗೆ ಒಟಿಜಿ ಕೇಬಲ್ ಅಳವಡಿಸಬೇಕು. ನಂತರ ಯುಎಸ್‌ಬಿ ಸಿ ಕೇಬಲ್ ಅನ್ನು ಮತ್ತೊಂದು ಫೋನ್ಗೂ ಮತ್ತು ಒಟಿಜಿ ಪೋರ್ಟ್ಗೂ ಕನೆಕ್ಟ್ ಮಾಡಬೇಕು. ಆಗ ಚಾರ್ಜಿಂಗ್ ಆಗುತ್ತದೆ. ಇದನ್ನು ಮಾಡಲೂ ಕೂಡ ನಿಮ್ಮ ಫೋನ್ ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನು ಸಪೋರ್ಟ್ ಮಾಡಬೇಕು.
ಗಮನಿಸಬೇಕಾದ ಸಂಗತಿ ಎಂದರೆ, ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನು ಸಪೋರ್ಟ್ ಮಾಡಬೇಕಿರುವುದು ದಾನಿ ಫೋನ್ ಮಾತ್ರ. ಅಂದರೆ, ಚಾರ್ಜಿಂಗ್ ನೀಡುವ ಫೋನ್ ಸಪೋರ್ಟ್ ಮಾಡಿದರೆ ಸಾಕು. ಚಾರ್ಜಿಂಗ್ ಪಡೆಯುವ ಫೋನ್ ಯಾವುದಿದ್ದರೂ ಪರವಾಗಿಲ್ಲ. ಯುಎಸ್‌ಬಿ ಸಿ ಕೇಬಲ್ ಕನೆಕ್ಟ್ ಮಾಡುವಂತಿರಬೇಕು ಅಷ್ಟೇ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Mon, 6 July 26




