AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ

Rashtriya Gokul Mission, govt initiative to conserve indigenous bovine breeds: ಕೇಂದ್ರ ಸರ್ಕಾರದ ರಾಷ್ಟ್ರೀಯ ಗೋಕುಲ್ ಮಿಷನ್ ಭಾರತೀಯ ರೈತರಿಗೆ ಉತ್ತಮ ಆದಾಯ ಕಲ್ಪಿಸುತ್ತಿದೆ. ದೇಶೀಯ ತಳಿ ದನಗಳ ಸಂರಕ್ಷಣೆ, ಹಾಗೂ ಕೃಷಿಕರಿಗೆ ಉತ್ತಮ ಆದಾಯ ಎರಡೂ ಗುರಿ ಈಡೇರಲು ನೆರವಾಗುತ್ತದೆ. ಗೋಕುಲ್ ಮಿಷನ್ ಅಡಿಯಲ್ಲಿ ಸಬ್ಸಿಡಿ ಹಾಗೂ ಇತರ ಆರ್ಥಿಕ ಸೌಲಭ್ಯಗಳ ವಿವರ ಇಲ್ಲಿದೆ.

ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ
ಹಸುವಿನ ಮೈ ತೊಳೆಯುತ್ತಿರುವ ಸಾಂದರ್ಭಿಕ ಚಿತ್ರImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 05, 2026 | 3:00 PM

Share

ಮುಖ್ಯಾಂಶಗಳು

  • ರಾಷ್ಟ್ರೀಯ ಗೋಕುಲ್ ಮಿಷನ್ ಭಾರತೀಯ ರೈತರಿಗೆ ಉತ್ತಮ ಆದಾಯ ಕಲ್ಪಿಸುತ್ತಿದೆ.
  • ದೇಶೀಯ ತಳಿ ದನಗಳ ಸಂರಕ್ಷಣೆ, ಹಾಗೂ ಕೃಷಿಕರಿಗೆ ಆದಾಯdದಗುರಿ ಈಡೇರಲು ನೆರವಾಗುತ್ತದೆ.
  • ಗೋಕುಲ್ ಮಿಷನ್ ಅಡಿಯಲ್ಲಿ ಸಬ್ಸಿಡಿ ಹಾಗೂ ಇತರ ಆರ್ಥಿಕ ಸೌಲಭ್ಯಗಳ ವಿವರ ಇಲ್ಲಿದೆ.

ರಾಷ್ಟ್ರೀಯ ಗೋಕುಲ್ ಮಿಷನ್ (Rashtriya Gokul Mission – RGM), ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ದೇಶಿ ತಳಿಯ ಹಸು ಹಾಗೂ ಎಮ್ಮೆಗಳ ಸಂರಕ್ಷಣೆ, ಹಾಲಿನ ಉತ್ಪಾದನೆ ಹೆಚ್ಚಳ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯಡಿ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಹಾಗೂ ಉದ್ಯಮಿಗಳಿಗೆ ಬಂಪರ್ ಸಬ್ಸಿಡಿ ಮತ್ತು ಪ್ರೋತ್ಸಾಹಧನಗಳನ್ನು ನೀಡಲಾಗುತ್ತಿದೆ.

ಗೋಕುಲ್ ಮಿಷನ್ ಅಡಿಯಲ್ಲಿ ಸಿಗುವ ಸಬ್ಸಿಡಿಗಳು ಮತ್ತು ಆರ್ಥಿಕ ಸೌಲಭ್ಯಗಳು

ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಮುಖ್ಯವಾಗಿ 3 ರೀತಿಯ ದೊಡ್ಡ ಮಟ್ಟದ ಆರ್ಥಿಕ ಪ್ರಯೋಜನಗಳು ಲಭ್ಯವಿವೆ. ಬ್ರೀಡ್ ಮಲ್ಟಿಪ್ಲಿಕೇಶನ್ ಫಾರ್ಮ್​ಗಳಿಗೆ ಸಬ್ಸಿಡಿ, ಐವಿಎಫ್ ತಂತ್ರಜ್ಞಾನಕ್ಕೆ ಪ್ರೋತ್ಸಾಹಧನ, ಲಿಂಗ ಆಧಾರಿತ ವೀರ್ಯಾಣು ಬಳಕೆಗೆ ಸಹಾಯಧನ ಸಿಗುತ್ತದೆ.

ತಳಿ ಫಾರ್ಮ್‌ಗಳಿಗೆ 2 ಕೋಟಿ ರೂ.ವರೆಗೆ ಸಬ್ಸಿಡಿ

ನೀವು ಕನಿಷ್ಠ 200 ಹಸು ಅಥವಾ ಎಮ್ಮೆಗಳ ಅತ್ಯಾಧುನಿಕ ಡೇರಿ ಫಾರ್ಮ್ (Breed Multiplication Farms) ಸ್ಥಾಪಿಸಲು ಬಯಸಿದರೆ, ಕೇಂದ್ರ ಸರ್ಕಾರದಿಂದ ಭಾರಿ ಹಣಕಾಸಿನ ನೆರವು ಸಿಗುತ್ತದೆ. ಒಟ್ಟು ಯೋಜನಾ ವೆಚ್ಚದ (Project Cost) 50% ಕ್ಯಾಪಿಟಲ್ ಸಬ್ಸಿಡಿ ಸಿಗುತ್ತದೆ.

ಒಬ್ಬ ಉದ್ಯಮಿಗೆ ಗರಿಷ್ಠ 2 ಕೋಟಿ ರೂಪಾಯಿವರೆಗೆ ಸಬ್ಸಿಡಿ ಲಭ್ಯವಿದೆ. ಉಳಿದ 50% ಹಣಕ್ಕೆ ಬ್ಯಾಂಕ್ ಲೋನ್ ಪಡೆದರೆ, AHIDF ಯೋಜನೆಯಡಿ 3% ಬಡ್ಡಿ ರಿಯಾಯಿತಿ (Interest Subvention) ಕೂಡ ಸಿಗುತ್ತದೆ.

ಇದನ್ನೂ ಓದಿ: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಕಲ್ಪನೆಗಳು; ಸರ್ಕಾರ ಒಂದೊಂದಕ್ಕೂ ನೀಡಿದ ಉತ್ತರ ಇಲ್ಲಿದೆ

ಐವಿಎಫ್ (IVF) ತಂತ್ರಜ್ಞಾನಕ್ಕೆ ಪ್ರೋತ್ಸಾಹಧನ

ಹೆಚ್ಚು ಹಾಲು ಕೊಡುವ ತಳಿಗಳನ್ನು ಉತ್ಪಾದಿಸಲು ಐವಿಎಫ್ (In-Vitro Fertilization) ತಂತ್ರಜ್ಞಾನ ಬಳಸುವ ರೈತರಿಗೆ ಸರ್ಕಾರ ಸಹಾಯ ಮಾಡುತ್ತದೆ.

ಐವಿಎಫ್ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ಕರು ಜನಿಸಿದರೆ, ಪ್ರತಿ ಗರ್ಭಧಾರಣೆಗೆ (Assured Pregnancy) ರೈತರಿಗೆ 5,000 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.

ಲಿಂಗ ಆಧಾರಿತ ವೀರ್ಯಾಣು ಬಳಕೆಗೆ ಸಹಾಯಧನ

ಕೇವಲ ಹೆಣ್ಣು ಕರುಗಳೇ (ಆಕಳು) ಜನಿಸುವಂತೆ ಮಾಡುವ ಅತ್ಯಾಧುನಿಕ ‘ಸೆಕ್ಸ್ ಸಾರ್ಟೆಡ್ ಸೆಮೆನ್’ (Sex-Sorted Semen) ತಂತ್ರಜ್ಞಾನಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ.

ಈ ವೀರ್ಯಾಣು ಬಳಕೆಯ ವೆಚ್ಚದ ಮೇಲೆ ರೈತರಿಗೆ 50% ವರೆಗೆ ಸಬ್ಸಿಡಿ ಸಿಗುತ್ತದೆ. ಇದರಿಂದ ಡೈರಿ ಫಾರ್ಮ್‌ಗಳಲ್ಲಿ ಗಂಡು ಕರುಗಳ ಸಂಖ್ಯೆ ಕಡಿಮೆಯಾಗಿ, ಹಾಲಿನ ಉತ್ಪಾದನೆ ಹೆಚ್ಚುತ್ತದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

  • ವೈಯಕ್ತಿಕ ರೈತರು ಮತ್ತು ಹೈನುಗಾರರು.
  • ಸ್ವಸಹಾಯ ಸಂಘಗಳು (SHGs) ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳು (JLGs).
  • ರೈತ ಉತ್ಪಾದಕ ಸಂಸ್ಥೆಗಳು (FPOs / FPCs).
  • ಸೆಕ್ಷನ್ 8 ಕಂಪನಿಗಳು ಮತ್ತು ಖಾಸಗಿ ಉದ್ಯಮಿಗಳು.

ದೊಡ್ಡ ಮಟ್ಟದ ತಳಿ ಗುಣಾಕಾರ ಫಾರ್ಮ್ (200 ದನಗಳ ಫಾರ್ಮ್) ಮಾಡಲು ಕನಿಷ್ಠ 5 ಎಕರೆ ಸ್ವಂತ ಅಥವಾ ಲೀಸ್ ಭೂಮಿ ಹೊಂದಿರಬೇಕು ಹಾಗೂ ಮೇವಿನ ವ್ಯವಸ್ಥೆ ಇರಬೇಕು.

ಇದನ್ನೂ ಓದಿ: ನಿಮ್ಮ ಮನೆಗೆ ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರದ ಯಾವ ಯೋಜನೆ ಬೆಸ್ಟ್​? ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಬ್ರೀಡಿಂಗ್ ಫಾರ್ಮ್ ಮತ್ತು ದೊಡ್ಡ ಸಬ್ಸಿಡಿಗಾಗಿ ನೀವು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

  • ಹಂತ 1: ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (NDDB) ಅಧಿಕೃತ ಇಒಐ ಪೋರ್ಟಲ್ eoi.nddb.coop/ ಅಥವಾ eoi.nddb.coop/ ಗೆ ಭೇಟಿ ನೀಡಿ ನೋಂದಣಿ (Sign Up) ಮಾಡಿಕೊಳ್ಳಿ.
  • ಹಂತ 2: ಯೋಜನಾ ವರದಿ (Project Report) ಸಿದ್ಧಪಡಿಸುವುದು. ನಿಮ್ಮ ಫಾರ್ಮ್‌ಗೆ ಸಂಬಂಧಿಸಿದಂತೆ ಬ್ಯಾಂಕ್ ಒಪ್ಪುವಂತಹ ಸಮಗ್ರ ಯೋಜನಾ ವರದಿಯನ್ನು (Bankable Project Proposal) ಸಿದ್ಧಪಡಿಸಿ, ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.
  • ಹಂತ 3: ಬ್ಯಾಂಕ್ ಲೋನ್ ಮಂಜೂರಾತಿ. NDDB ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಅರ್ಹವಾಗಿದ್ದರೆ ಬ್ಯಾಂಕ್‌ಗೆ ಶಿಫಾರಸು ಮಾಡುತ್ತದೆ. ಯೋಜನೆಯ 50% ವೆಚ್ಚಕ್ಕೆ ಬ್ಯಾಂಕ್‌ನಿಂದ ಲೋನ್ ಮಂಜೂರಾತಿ ಪತ್ರವನ್ನು (Sanction Letter) ಪಡೆಯಬೇಕು.
  • ಹಂತ 4: ಸಬ್ಸಿಡಿ ಬಿಡುಗಡೆ. ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕ ತಕ್ಷಣ, ಮೊದಲ ಕಂತಿನ ಸಬ್ಸಿಡಿ (50%) ನೇರವಾಗಿ ನಿಮ್ಮ ಲೋನ್ ಖಾತೆಗೆ ಜಮೆಯಾಗುತ್ತದೆ. ಫಾರ್ಮ್ ಸಿದ್ಧವಾದ ನಂತರ ಉಳಿದ ಹಣ ಹಂತ-ಹಂತವಾಗಿ ಬಿಡುಗಡೆಯಾಗುತ್ತದೆ.

ಸಣ್ಣ ಮಟ್ಟದ ಐವಿಎಫ್ (IVF) ಸೌಲಭ್ಯ ಅಥವಾ ಕೃತಕ ಗರ್ಭಧಾರಣೆ ಸಬ್ಸಿಡಿಗಳ ಪ್ರಯೋಜನ ಪಡೆಯಲು ರೈತರು ತಮ್ಮ ಹತ್ತಿರದ ಸರ್ಕಾರಿ ಪಶು ಆಸ್ಪತ್ರೆ, ಸ್ಥಳೀಯ ಹಾಲಿನ ಒಕ್ಕೂಟ (KMF/ಬಮುಲ್/ಕೆಮುಲ್ ಇತ್ಯಾದಿ) ಅಥವಾ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ‘ಚೆನ್ನಮ್ಮ‘
ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ‘ಚೆನ್ನಮ್ಮ‘
ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ
ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ
ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು
ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು
ಪ್ರೀತಿಯ ಚುಂಬನ: ಪುತ್ರ ರೇವಣ್ಣರಿಂದ ತಾಯಿಗೆ ಅಂತಿನ ನಮನ
ಪ್ರೀತಿಯ ಚುಂಬನ: ಪುತ್ರ ರೇವಣ್ಣರಿಂದ ತಾಯಿಗೆ ಅಂತಿನ ನಮನ
ತಾಯಿ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಹೆಚ್​​​​.ಡಿ ಕುಮಾರಸ್ವಾಮಿ
ತಾಯಿ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಹೆಚ್​​​​.ಡಿ ಕುಮಾರಸ್ವಾಮಿ
ಚೆನ್ನಮ್ಮರ ಅಂತಿಮ ವಿಧಿವಿಧಾನ ಕಾರ್ಯ ನೆರವೇರಿಸುವವರು ಇವರೇ
ಚೆನ್ನಮ್ಮರ ಅಂತಿಮ ವಿಧಿವಿಧಾನ ಕಾರ್ಯ ನೆರವೇರಿಸುವವರು ಇವರೇ
ಚನ್ನಮ್ಮ ಪಾರ್ಥಿವ ಶರೀರ ಹೊತ್ತು ತರಲು ಹೂವಿನ ಪಲ್ಲಕಿ ಹೇಗಿದೆ ನೋಡಿ
ಚನ್ನಮ್ಮ ಪಾರ್ಥಿವ ಶರೀರ ಹೊತ್ತು ತರಲು ಹೂವಿನ ಪಲ್ಲಕಿ ಹೇಗಿದೆ ನೋಡಿ
ಸೇತುವೆ ಸರಳು ಕಟ್: ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌
ಸೇತುವೆ ಸರಳು ಕಟ್: ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌