Gold Silver Price on 22 December: ಚಿನ್ನಕ್ಕೆ ಭರ್ಜರಿ ಬೆಲೆ; ಬೆಳ್ಳಿಯೂ ತುಸು ದುಬಾರಿ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2023, December 22nd: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,000 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 79.20 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 57,750 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,620 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 22 December: ಚಿನ್ನಕ್ಕೆ ಭರ್ಜರಿ ಬೆಲೆ; ಬೆಳ್ಳಿಯೂ ತುಸು ದುಬಾರಿ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Edited By:

Updated on: Dec 22, 2023 | 5:00 AM

ಬೆಂಗಳೂರು, ಡಿಸೆಂಬರ್ 22: ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಮತ್ತೆ ಯದ್ವಾತದ್ವ ಏರಿಕೆಗೆ ತೊಡಗಿದೆ. ವಿದೇಶಗಳಲ್ಲಿ ಬಹುತೇಕ ಕಡೆ ಚಿನ್ನದ ಬೆಲೆ ಶೇ. 5ಕ್ಕಿಂತಲೂ ಹೆಚ್ಚಾಗಿದೆ. ಭಾರತದಲ್ಲಿ ಇಂದು ಚಿನ್ನ ತೀರಾ ತುಟ್ಟಿಯಾಗುವ ನಿರೀಕ್ಷೆ ಇದೆ. 22 ಗ್ರಾಮ್ ಚಿನ್ನದ ಬೆಲೆ 60 ಸಾವಿರ ರೂ ಆಸುಪಾಸಿಗೆ ಹೋಗುವ ಸಾಧ್ಯತೆ ಇದೆ. ಬೆಳ್ಳೆಯೂ ತುಸು ದುಬಾರಿಯಾಗಿದೆ. ಅಮೆರಿಕದಲ್ಲಿ ಮುಂಬರುವ ಕೆಲ ತಿಂಗಳು ಬಡ್ಡಿದರ ಹೆಚ್ಚಳವಾಗುವ ಸುಳಿವು ಸಿಕ್ಕ ಬಳಿಕ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗತೊಡಗಿದೆ. ಪರಿಣಾಮವಾಗಿ ಬೆಲೆ ಏರುತ್ತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,920 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,620 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 22ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,000 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 792 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,000 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 762 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 57,750 ರೂ
  • ಚೆನ್ನೈ: 58,250 ರೂ
  • ಮುಂಬೈ: 57,750 ರೂ
  • ದೆಹಲಿ: 57,900 ರೂ
  • ಕೋಲ್ಕತಾ: 57,750 ರೂ
  • ಕೇರಳ: 57,750 ರೂ
  • ಅಹ್ಮದಾಬಾದ್: 57,800 ರೂ
  • ಜೈಪುರ್: 57,900 ರೂ
  • ಲಕ್ನೋ: 57,900 ರೂ
  • ಭುವನೇಶ್ವರ್: 57,750 ರೂ

ಇದನ್ನೂ ಓದಿ: ಆಧಾರ್ ಅಪ್​ಡೇಟ್​ನಿಂದ ಹಿಡಿದು ನಿಷ್ಕ್ರಿಯ ಯುಪಿಐ ಐಡಿವರೆಗೂ ಡಿಸೆಂಬರ್ 31ಕ್ಕೆ ಡೆಡ್​ಲೈನ್ ಇರುವ ಕಾರ್ಯಗಳಿವು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 3,150 ರಿಂಗಿಟ್ (56,357 ರುಪಾಯಿ)
  • ದುಬೈ: 2,465 ಡಿರಾಮ್ (55,892 ರುಪಾಯಿ)
  • ಅಮೆರಿಕ: 675 ಡಾಲರ್ (56,210 ರುಪಾಯಿ)
  • ಸಿಂಗಾಪುರ: 936 ಸಿಂಗಾಪುರ್ ಡಾಲರ್ (58,592 ರುಪಾಯಿ)
  • ಕತಾರ್: 2,490 ಕತಾರಿ ರಿಯಾಲ್ (56,941 ರೂ)
  • ಸೌದಿ ಅರೇಬಿಯಾ: 2,530 ಸೌದಿ ರಿಯಾಲ್ (56,164 ರುಪಾಯಿ)
  • ಓಮನ್: 260 ಒಮಾನಿ ರಿಯಾಲ್ (56,274 ರುಪಾಯಿ)
  • ಕುವೇತ್: 206 ಕುವೇತಿ ದಿನಾರ್ (55,784 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,620 ರೂ
  • ಚೆನ್ನೈ: 8,070 ರೂ
  • ಮುಂಬೈ: 7,920 ರೂ
  • ದೆಹಲಿ: 7,920 ರೂ
  • ಕೋಲ್ಕತಾ: 7,920 ರೂ
  • ಕೇರಳ: 8,070 ರೂ
  • ಅಹ್ಮದಾಬಾದ್: 7,920 ರೂ
  • ಜೈಪುರ್: 7,920 ರೂ
  • ಲಕ್ನೋ: 7,920 ರೂ
  • ಭುವನೇಶ್ವರ್: 8,070 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us