Gold Silver Price on 30th December: ಚಿನ್ನದ ಬೆಲೆಯಲ್ಲಿ ಏರಿಕೆ; ಬೆಳ್ಳಿ ಬೆಲೆ ಇಳಿಕೆ

Bullion Market 2024 December 30th: ಕಳೆದ ಮೂರ್ನಾಲ್ಕು ವಾರಗಳಿಂದ ಹೊಯ್ದಾಡುತ್ತಿರುವ ಚಿನ್ನದ ಬೆಲೆ ಈ ವಾರದ ಆರಂಭದಲ್ಲಿ ಹೆಚ್ಚಳ ಕಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 7,135 ರೂ ಇದ್ದದ್ದು 7,150 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 7,800 ರೂಗೆ ಏರಿದೆ. ಮುಂಬೈ ಮೊದಲಾದ ಕೆಲವೆಡೆ ಬೆಳ್ಳಿ ಬೆಲೆ 10 ಪೈಸೆಯಷ್ಟು ಕಡಿಮೆ ಆಗಿದೆ. ಬೆಂಗಳೂರು, ಚೆನ್ನೈ ಇತ್ಯಾದಿ ಹೆಚ್ಚಿನ ಕಡೆ ಬೆಳ್ಳಿ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ.

Gold Silver Price on 30th December: ಚಿನ್ನದ ಬೆಲೆಯಲ್ಲಿ ಏರಿಕೆ; ಬೆಳ್ಳಿ ಬೆಲೆ ಇಳಿಕೆ
ಚಿನ್ನ

Updated on: Dec 30, 2024 | 10:32 AM

ಬೆಂಗಳೂರು, ಡಿಸೆಂಬರ್ 30: ಇಂದು ಸೋಮವಾರ ಚಿನ್ನದ ಬೆಲೆ ಏರಿಕೆ ಆದರೆ, ಬೆಳ್ಳಿ ಬೆಲೆಯಲ್ಲಿ ತುಸು ಇಳಿಕೆ ಇದೆ. ಚಿನ್ನದ ಬೆಲೆ ಗ್ರಾಮ್​ಗೆ 15 ರೂನಷ್ಟು ಹೆಚ್ಚಳ ಕಂಡಿದೆ. ಕೆಲ ವಿದೇಶಗಳ ಮಾರುಕಟ್ಟೆಗಳಲ್ಲೂ ಬೆಲೆಯಲ್ಲಿ ವ್ಯತ್ಯಯ ಆಗಿದೆ. ಅಪರಂಜಿ ಚಿನ್ನದ ಬೆಲೆ 7,800 ರೂ ಗಡಿಯಲ್ಲಿದೆ. ಬೆಳ್ಳಿ ಬೆಲೆಯಲ್ಲಿ ಗ್ರಾಮ್​ಗೆ 10 ಪೈಸೆ ಕಡಿಮೆ ಆಗಿದೆ. ಬೆಂಗಳೂರು, ಚೆನ್ನೈ ಮೊದಲಾದ ಹೆಚ್ಚಿನ ಕಡೆ ಯಥಾಸ್ಥಿತಿ ಇದೆ. ಮುಂಬೈ, ಪುಣೆ ಮೊದಲಾದೆಡೆ ಮಾತ್ರ ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 78,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,250 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 71,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,240 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 30ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,500 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 78,000 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,500 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 925 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,500 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 78,000 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 924 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 71,500 ರೂ
  • ಚೆನ್ನೈ: 71,500 ರೂ
  • ಮುಂಬೈ: 71,500 ರೂ
  • ದೆಹಲಿ: 71,650 ರೂ
  • ಕೋಲ್ಕತಾ: 71,500 ರೂ
  • ಕೇರಳ: 71,500 ರೂ
  • ಅಹ್ಮದಾಬಾದ್: 71,550 ರೂ
  • ಜೈಪುರ್: 71,650 ರೂ
  • ಲಕ್ನೋ: 71,650 ರೂ
  • ಭುವನೇಶ್ವರ್: 71,500 ರೂ

ಇದನ್ನೂ ಓದಿ: Petrol Diesel Price on December 30: ಇಂಧನ ಬೆಲೆ ಸ್ಥಿರ: ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (69,440 ರುಪಾಯಿ)
  • ದುಬೈ: 2,940 ಡಿರಾಮ್ (68,440 ರುಪಾಯಿ)
  • ಅಮೆರಿಕ: 780 ಡಾಲರ್ (66,690 ರುಪಾಯಿ)
  • ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (68,430 ರುಪಾಯಿ)
  • ಕತಾರ್: 2,975 ಕತಾರಿ ರಿಯಾಲ್ (69,790 ರೂ)
  • ಸೌದಿ ಅರೇಬಿಯಾ: 3,000 ಸೌದಿ ರಿಯಾಲ್ (68,300 ರುಪಾಯಿ)
  • ಓಮನ್: 312.50 ಒಮಾನಿ ರಿಯಾಲ್ (69,400 ರುಪಾಯಿ)
  • ಕುವೇತ್: 240.60 ಕುವೇತಿ ದಿನಾರ್ (66,760 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,240 ರೂ
  • ಚೆನ್ನೈ: 9,990 ರೂ
  • ಮುಂಬೈ: 9,250 ರೂ
  • ದೆಹಲಿ: 9,240 ರೂ
  • ಕೋಲ್ಕತಾ: 9,240 ರೂ
  • ಕೇರಳ: 9,990 ರೂ
  • ಅಹ್ಮದಾಬಾದ್: 9,240 ರೂ
  • ಜೈಪುರ್: 9,240 ರೂ
  • ಲಕ್ನೋ: 9,240 ರೂ
  • ಭುವನೇಶ್ವರ್: 9,990 ರೂ
  • ಪುಣೆ: 9,250

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us