Gold Silver Price on 31st December: ಚಿನ್ನ, ಬೆಳ್ಳಿ ಎರಡೂ ಬೆಲೆ ಇಳಿಕೆ; ಇಲ್ಲಿದೆ ದರಪಟ್ಟಿ

Bullion Market 2024 December 31st: ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಮಂಗಳವಾರ ತಗ್ಗಿವೆ. ಚಿನ್ನದ ಬೆಲೆ ಗ್ರಾಮ್​ಗೆ 40 ರೂ ಕಡಿಮೆ ಆದರೆ, ಬೆಳ್ಳಿ ಬೆಲೆ 2 ರೂ ಇಳಿಕೆ ಕಂಡಿದೆ. ಅಪರಂಜಿ ಚಿನ್ನದ ಬೆಲೆ 7,800 ರೂ ಇದ್ದದ್ದು 7,756 ರೂಗೆ ಇಳಿದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 7,110 ರೂ ಆಗಿದೆ. ಬೆಳ್ಳಿ ಬೆಲೆ ಸತತ ಎರಡನೇ ಬಾರಿ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ 92.40 ರೂ ಇದ್ದ ಬೆಳ್ಳಿ ಬೆಲೆ 90.50 ರೂಗೆ ಇಳಿದಿದೆ.

Gold Silver Price on 31st December: ಚಿನ್ನ, ಬೆಳ್ಳಿ ಎರಡೂ ಬೆಲೆ ಇಳಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Dec 31, 2024 | 10:53 AM

ಬೆಂಗಳೂರು, ಡಿಸೆಂಬರ್ 31: ನಿನ್ನೆ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಗ್ರಾಮ್​ಗೆ 40 ರೂನಷ್ಟು ಕಡಿಮೆ ಆಗಿದೆ. ಕಳೆದ ಮೂರು ವಾರಗಳಂತೆ ಈ ವಾರವೂ ಚಿನ್ನದ ಬೆಲೆಯ ಏರಿಳಿತ ಮುಂದುವರಿಯುವಂತೆ ತೋರುತ್ತಿದೆ. 22 ಕ್ಯಾರಟ್ ಚಿನ್ನದ ಬೆಲೆ 7,150 ರೂ ಇದ್ದದ್ದು 7,110 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಸತತ ಎರಡನೇ ಬಾರಿ ಇಳಿಕೆ ಆಗಿದೆ. ಇಂದು ಮಂಗಳವಾರ ಬೆಳ್ಳಿ ಬೆಲೆ ಗ್ರಾಮ್​ಗೆ 2 ರೂನಷ್ಟು ಕಡಿಮೆ ಆಗಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಬೆಳ್ಳಿ ಬೆಲೆ 90.50 ರೂ ಆಗಿದೆ. ಚೆನ್ನೈ, ಕೇರಳ ಇತ್ಯಾದಿ ಕಡೆ 98 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,560 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,050 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 71,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,050 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 31ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,560 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,180 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 905 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,560 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 905 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 71,100 ರೂ
  • ಚೆನ್ನೈ: 71,100 ರೂ
  • ಮುಂಬೈ: 71,100 ರೂ
  • ದೆಹಲಿ: 71,250 ರೂ
  • ಕೋಲ್ಕತಾ: 71,100 ರೂ
  • ಕೇರಳ: 71,100 ರೂ
  • ಅಹ್ಮದಾಬಾದ್: 71,150 ರೂ
  • ಜೈಪುರ್: 71,250 ರೂ
  • ಲಕ್ನೋ: 71,250 ರೂ
  • ಭುವನೇಶ್ವರ್: 71,100 ರೂ

ಇದನ್ನೂ ಓದಿ: Petrol Diesel Price on December 31: ಬಿಹಾರದಲ್ಲಿ ಪೆಟ್ರೋಲ್ ಬೆಲೆ ಏರಿಕೆ, ಉತ್ತರ ಪ್ರದೇಶದಲ್ಲಿ ಇಳಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (69,540 ರುಪಾಯಿ)
  • ದುಬೈ: 2,922.50 ಡಿರಾಮ್ (68,100 ರುಪಾಯಿ)
  • ಅಮೆರಿಕ: 780 ಡಾಲರ್ (66,760 ರುಪಾಯಿ)
  • ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (68,330 ರುಪಾಯಿ)
  • ಕತಾರ್: 2,960 ಕತಾರಿ ರಿಯಾಲ್ (69,500 ರೂ)
  • ಸೌದಿ ಅರೇಬಿಯಾ: 3,000 ಸೌದಿ ರಿಯಾಲ್ (68,340 ರುಪಾಯಿ)
  • ಓಮನ್: 312.50 ಒಮಾನಿ ರಿಯಾಲ್ (69,470 ರುಪಾಯಿ)
  • ಕುವೇತ್: 240.80 ಕುವೇತಿ ದಿನಾರ್ (66,920 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,050 ರೂ
  • ಚೆನ್ನೈ: 9,800 ರೂ
  • ಮುಂಬೈ: 9,050 ರೂ
  • ದೆಹಲಿ: 9,050 ರೂ
  • ಕೋಲ್ಕತಾ: 9,050 ರೂ
  • ಕೇರಳ: 9,800 ರೂ
  • ಅಹ್ಮದಾಬಾದ್: 9,050 ರೂ
  • ಜೈಪುರ್: 9,050 ರೂ
  • ಲಕ್ನೋ: 9,050 ರೂ
  • ಭುವನೇಶ್ವರ್: 9,800 ರೂ
  • ಪುಣೆ: 9,050

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us