
ಬೆಂಗಳೂರು, ಫೆಬ್ರುವರಿ 3: ಚಿನ್ನದ ಬೆಲೆ ಈ ವಾರ ಇಳಿಕೆಯೊಂದಿಗೆ ಆರಂಭಗೊಂಡಿದೆ. ಆಭರಣ ಚಿನ್ನದ ಬೆಲೆ ಗ್ರಾಮ್ಗೆ 40 ರೂನಷ್ಟು ಕಡಿಮೆ ಆಗಿದೆ. 7,745 ರೂ ಇದ್ದ ಅದರ ಬೆಲೆ 7,705 ರೂಗೆ ಇಳಿದೆ. ಅಪರಂಜಿ ಚಿನ್ನದ ಬೆಲೆ 8,405 ರೂ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,304 ರೂಗೆ ಕುಸಿದಿದೆ. ವಿದೇಶಗಳಲ್ಲಿ ಬೆಲೆ ವ್ಯತ್ಯಯವಾಗಿಲ್ಲ. ಭಾರತದಲ್ಲಿ ಮಾತ್ರವೇ ಹಳದಿ ಲೋಹದ ಬೆಲೆ ತಗ್ಗಿರುವುದು. ಬಜೆಟ್ನಲ್ಲಿ ಆಭರಣ ಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡಿರುವುದರ ಪರಿಣಾಮ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗುವ ನಿರೀಕ್ಷೆ ಇತ್ತು. ಇದೇ ವೇಳೆ, ಬೆಳ್ಳಿ ಬೆಲೆ ಮತ್ತೆ ತನ್ನ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 77,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 84,050 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,950 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 77,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,950 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ಅತಿಯಾಗಿದೆಯಾ? ಬೇರೆ ಪ್ರಮುಖ ದೇಶಗಳಲ್ಲಿ ಎಷ್ಟಿದೆ ಆದಾಯ ತೆರಿಗೆ? ಇಲ್ಲಿದೆ ಡೀಟೇಲ್ಸ್
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:20 am, Mon, 3 February 25