AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ಅತಿಯಾಗಿದೆಯಾ? ಬೇರೆ ಪ್ರಮುಖ ದೇಶಗಳಲ್ಲಿ ಎಷ್ಟಿದೆ ಆದಾಯ ತೆರಿಗೆ? ಇಲ್ಲಿದೆ ಡೀಟೇಲ್ಸ್

Income tax comparison: ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ಅತಿಯಾಯಿತು. ಕಡಿಮೆ ಮಾಡಬೇಕು ಎನ್ನುವ ಕೂಗು ಸಾಕಷ್ಟು ಕೇಳಿಬರುತ್ತದೆ. ಈ ಬಜೆಟ್​ನಲ್ಲಿ ಈ ಕೂಗಿಗೆ ಒಂದಷ್ಟು ಸ್ಪಂದನೆ ಕೂಡ ಸಿಕ್ಕಿದೆ. ಇದೇ ವೇಳೆ, ಬೇರೆ ದೇಶಗಳಲ್ಲಿ ಆದಾಯ ತೆರಿಗೆ ಎಷ್ಟಿದೆ, ಭಾರತಕ್ಕೆ ಹೋಲಿಸಿದರೆ ಹೇಗಿದೆ ಎನ್ನುವ ಕುತೂಹಲ ಇರಬಹುದು. ಪ್ರಮುಖ ಆರ್ಥಿಕತೆಗಳಿರುವ ಜಿ20 ಗುಂಪಿನ ದೇಶಗಳಲ್ಲಿ ಹೆಚ್ಚಿನವರು ಭಾರತದಕ್ಕಿಂತ ಹೆಚ್ಚು ತೆರಿಗೆ ಹೊಂದಿವೆ.

ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ಅತಿಯಾಗಿದೆಯಾ? ಬೇರೆ ಪ್ರಮುಖ ದೇಶಗಳಲ್ಲಿ ಎಷ್ಟಿದೆ ಆದಾಯ ತೆರಿಗೆ? ಇಲ್ಲಿದೆ ಡೀಟೇಲ್ಸ್
ಆದಾಯ ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 02, 2025 | 6:16 PM

Share

ನವದೆಹಲಿ, ಫೆಬ್ರುವರಿ 2: ಭಾರತದಲ್ಲಿ ಆದಾಯ ತೆರಿಗೆ ಅತಿಯಾಯಿತು ಎಂಬುದು ಹಲವರ ಆರೋಪ. ಆದಾಯ ತೆರಿಗೆಯೇ ಇಲ್ಲದ ಅಥವಾ ಬಹಳ ಕಡಿಮೆ ಆದಾಯ ತೆರಿಗೆ ಇರುವ ದೇಶಗಳನ್ನು ನಿದರ್ಶನವಾಗಿಟ್ಟುಕೊಂಡು, ಭಾರತದಲ್ಲಿ ಆದಾಯ ತೆರಿಗೆ ಅಧಿಕ ಮಟ್ಟದಲ್ಲಿದೆ ಎಂದು ಹೇಳುವುದುಂಟು. ವಾಸ್ತವದಲ್ಲಿ, ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಹೆಚ್ಚಿನ ದೇಶಗಳಲ್ಲಿ ಭಾರತದಕ್ಕಿಂತ ಹೆಚ್ಚಿನ ಆದಾಯ ತೆರಿಗೆ ದರಗಳಿವೆ. ಟ್ಯಾಕ್ಸ್ ಕನ್ಸಲ್ಟಿಂಗ್ ಸಂಸ್ಥೆಯಾದ ಆರ್​ಎಸ್​ಎಂ ಇಂಡಿಯಾದ ಇತ್ತೀಚಿನ ದತ್ತಾಂಶದ ಪ್ರಕಾರ ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಜಪಾನ್ ಇತ್ಯಾದಿ ದೊಡ್ಡ ಆರ್ಥಿಕತೆಯ ದೇಶಗಳಲ್ಲಿ ಭಾರತಕ್ಕಿಂತ ಹೆಚ್ಚು ಆದಾಯ ತೆರಿಗೆ ಇದೆ.

ಭಾರತದ ಇತ್ತೀಚಿನ ಹೊಸ ಟ್ಯಾಕ್ಸ್ ರಿಜೈಮ್​ನ ದರಗಳನ್ನು ಪರಿಗಣಿಸಿದರೆ ಗರಿಷ್ಠ ತೆರಿಗೆ ಶೇ. 39 ಇದೆ. ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ ಗರಿಷ್ಠ ತೆರಿಗೆ ಶೇ. 30 ಎಂದಿದೆ. ಹೆಚ್ಚಿನ ಆದಾಯ ಇರುವವರಿಗೆ ವಿಧಿಸಲಾಗುವ ಸರ್​ಚಾರ್ಜ್ ಇತ್ಯಾದಿಯನ್ನೂ ಸೇರಿಸಿದರೆ ಶೇ. 39ರಷ್ಟು ತೆರಿಗೆ ಆಗುತ್ತದೆ. ಗಮನಿಸಿ, ಇದು ಗರಿಷ್ಠ ತೆರಿಗೆ ದರ.

ಇದನ್ನೂ ಓದಿ: Tariff war: ಅಮೆರಿಕ ವರ್ಸಸ್ ಕೆನಡಾ, ಮೆಕ್ಸಿಕೋ ಚೀನಾ ತೆರಿಗೆ ಯುದ್ಧ; ಭಾರತಕ್ಕಿದೆ ಲಾಭ

ವಿಶ್ವ ಆರ್ಥಿಕತೆಯ ಬಹುಪಾಲು ಇರುವ ಜಿ-20 ಗುಂಪಿನ ದೇಶಗಳಲ್ಲಿರುವ ಆದಾಯ ತೆರಿಗೆ ಗಮನಿಸಿದರೆ, ಹೆಚ್ಚಿನ ರಾಷ್ಟ್ರಗಳಲ್ಲಿ ಅಧಿಕ ಆದಾಯ ತೆರಿಗೆ ಇದೆ. ಬ್ರಿಟನ್​ನಲ್ಲಿ ಶೇ. 62ರಷ್ಟು ತೆರಿಗೆ ಇದೆ. ಜಪಾನ್​ನಲ್ಲಿ ಶೇ. 55.95, ಕೆನಡಾದಲ್ಲಿ ಶೇ. 54.8ರಷ್ಟು ಗರಿಷ್ಠ ಆದಾಯ ತೆರಿಗೆ ಇದೆ. ಫ್ರಾನ್ಸ್, ಚೀನಾ ಮತ್ತು ಜರ್ಮನಿಯಲ್ಲಿ ತಲಾ ಶೇ. 45ರಷ್ಟು ಆದಾಯ ತೆರಿಗೆ ಇದೆ. ಅಮೆರಿಕದಲ್ಲಿ ಗರಿಷ್ಠ ಟ್ಯಾಕ್ಸ್ ಸ್ಲಾಬ್ ದರವಾಗಿ ಶೇ. 37 ಇದೆ. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಅದು ಶೇ. 45ಕ್ಕಿಂತಲೂ ಹೆಚ್ಚಿದೆ. ಹೀಗಾಗಿ, ಭಾರತದಲ್ಲಿ ಇರುವ ಶೇ. 39 ತೆರಿಗೆ ತೀರಾ ಹೆಚ್ಚೆನಿಸುವುದಿಲ್ಲ.

ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸೌತ್ ಕೊರಿಯಾ, ಸೌತ್ ಆಫ್ರಿಕಾ ದೇಶಗಳಲ್ಲಿ ಭಾರತಕ್ಕಿಂತ ಹೆಚ್ಚು ಇನ್ಕಮ್ ಟ್ಯಾಕ್ಸ್ ರೇಟ್ ಇದೆ. ಅರ್ಜೆಂಟೀನಾ, ಇಂಡೋನೇಷ್ಯಾ, ಮೆಕ್ಸಿಕೋ, ಅಮೆರಿಕ ಮೊದಲಾದ ಕೆಲ ದೇಶಗಳಲ್ಲಿ ಭಾರತಕ್ಕೆ ಹತ್ತಿರ ಹತ್ತಿರದಷ್ಟು ತೆರಿಗೆ ಪ್ರಮಾಣ ಇದೆ. ಸೌದಿ ಅರೇಬಿಯಾದಲ್ಲಿ ಶೂನ್ಯ ತೆರಿಗೆ ಇದೆ. ರಷ್ಯಾದಲ್ಲಿ ಶೇ. 22ರಷ್ಟು ಮಾತ್ರವೇ ತೆರಿಗೆ ಇರುವುದು.

ಇದನ್ನೂ ಓದಿ: ಬಜೆಟ್​ನಿಂದ ಅನುಭೋಗ ಆರ್ಥಿಕತೆಗೆ ಹೇಗೆ ಪುಷ್ಟಿ ಸಿಗುತ್ತೆ? ಇಲ್ಲಿದೆ ಸರಳ ವಿವರಣೆ

ಸ್ಲೊವೇನಿಯಾದಿಂದ ಹಿಡಿದು ಯುಕೆವರೆಗೆ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ಗರಿಷ್ಠ ಆದಾಯ ತೆರಿಗೆ ಶೇ. 50ಕ್ಕಿಂತ ಹೆಚ್ಚು ಇದೆ. ಮಾಲ್ಡೀವ್ಸ್, ಬಹಾಮಾಸ್ ಇತ್ಯಾದಿ ಪ್ರವಾಸೋದ್ಯಮ ಅಧಿಕ ಇರುವ ದೇಶಗಳಲ್ಲಿ ಶೂನ್ಯ ತೆರಿಗೆ ಅಥವಾ ಕಡಿಮೆ ತೆರಿಗೆ ಸಿಸ್ಟಂ ಇದೆ. ಕತಾರ್, ಓಮನ್, ಸೌದಿಯಂತಹ ಕೆಲ ಅರಬ್ ದೇಶಗಳಲ್ಲೂ ಆದಾಯ ತೆರಿಗೆ ಶೂನ್ಯ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Sun, 2 February 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!