Gold Silver Price on 4th February: ಸಖತ್ ಏರಿಕೆಯಾದ ಚಿನ್ನದ ಬೆಲೆ; ಬೆಳ್ಳಿ ಕಡಿಮೆ

Bullion Market 2024 February 4th: ಇಂದು ಮಂಗಳವಾರ ಚಿನ್ನದ ಬೆಲೆ ಏರಿಕೆಯಾದರೆ, ಬೆಳ್ಳಿ ಬೆಲೆ ಇಳಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 105 ರೂನಷ್ಟು ಏರಿದೆ. ಆಭರಣ ಚಿನ್ನದ ಬೆಲೆ 7,810 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 8,520 ರೂ ಆಗಿದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ ಒಂದು ರೂ ಕಡಿಮೆ ಆಗಿದೆ. 98.50 ರೂ ಮತ್ತು 106 ರೂ ಬೆಲೆಯಾಗಿದೆ.

Gold Silver Price on 4th February: ಸಖತ್ ಏರಿಕೆಯಾದ ಚಿನ್ನದ ಬೆಲೆ; ಬೆಳ್ಳಿ ಕಡಿಮೆ
ಚಿನ್ನ

Updated on: Feb 04, 2025 | 10:26 AM

ಬೆಂಗಳೂರು, ಫೆಬ್ರುವರಿ 4: ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು ಸಖತ್ ಏರಿದೆ. ಮಂಗಳವಾರ ಚಿನ್ನದ ಬೆಲೆ ಗ್ರಾಮ್​ಗೆ ನೂರು ರೂಗೂ ಹೆಚ್ಚಿನ ಮೊತ್ತದಷ್ಟು ಹೆಚ್ಚಳವಾಗಿದೆ. ಆಭರಣ ಚಿನ್ನದ ಬೆಲೆ 7,800 ರೂ ಗಡಿಗಿಂತ ಮೇಲೆ ಹೋಗಿದೆ. ಅಪರಂಜಿ ಚಿನ್ನದ ಬೆಲೆಯೂ 8,500 ರೂ ಗಡಿ ದಾಟಿದೆ. ವಿಶ್ವದ ಹಲವು ಕಡೆಯೂ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಮಂಗಳವಾರ ತಗ್ಗಿದೆ. ಗ್ರಾಮ್​ಗೆ ಒಂದು ರೂನಷ್ಟು ಬೆಲೆ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ 99.50 ರೂ ಇದ್ದ ಬೆಳ್ಳಿ ಬೆಲೆ 98.50 ರೂಗೆ ಇಳಿದಿದೆ. ಚೆನ್ನೈ ಮೊದಲಾದೆಡೆ ಬೆಲೆ 107 ರೂನಿಂದ 106 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 78,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 85,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,850 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 78,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,850 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 4ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 78,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 85,200 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,900 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 985 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 78,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 85,200 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 985 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 78,100 ರೂ
  • ಚೆನ್ನೈ: 78,100 ರೂ
  • ಮುಂಬೈ: 78,100 ರೂ
  • ದೆಹಲಿ: 78,250 ರೂ
  • ಕೋಲ್ಕತಾ: 78,100 ರೂ
  • ಕೇರಳ: 78,100 ರೂ
  • ಅಹ್ಮದಾಬಾದ್: 78,150 ರೂ
  • ಜೈಪುರ್: 78,250 ರೂ
  • ಲಕ್ನೋ: 78,250 ರೂ
  • ಭುವನೇಶ್ವರ್: 78,100 ರೂ

ಇದನ್ನೂ ಓದಿ: ನಿಮ್ಮ ವಾರ್ಷಿಕ ಆದಾಯ 12 ಲಕ್ಷ ರೂಗಿಂತ ತುಸು ಹೆಚ್ಚಿದ್ದರೆ ಏನಾಗುತ್ತೆ? ಮಾರ್ಜಿನಲ್ ರಿಲೀಫ್ ಲೆಕ್ಕಾಚಾರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (70,880 ರುಪಾಯಿ)
  • ದುಬೈ: 3,152.50 ಡಿರಾಮ್ (74,710 ರುಪಾಯಿ)
  • ಅಮೆರಿಕ: 780 ಡಾಲರ್ (67,890 ರುಪಾಯಿ)
  • ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (69,530 ರುಪಾಯಿ)
  • ಕತಾರ್: 3,185 ಕತಾರಿ ರಿಯಾಲ್ (76,040 ರೂ)
  • ಸೌದಿ ಅರೇಬಿಯಾ: 3,220 ಸೌದಿ ರಿಯಾಲ್ (74,720 ರುಪಾಯಿ)
  • ಓಮನ್: 333.50 ಒಮಾನಿ ರಿಯಾಲ್ (75,390 ರುಪಾಯಿ)
  • ಕುವೇತ್: 259.10 ಕುವೇತಿ ದಿನಾರ್ (73,000 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,850 ರೂ
  • ಚೆನ್ನೈ: 10,600 ರೂ
  • ಮುಂಬೈ: 9,850 ರೂ
  • ದೆಹಲಿ: 9,850 ರೂ
  • ಕೋಲ್ಕತಾ: 9,850 ರೂ
  • ಕೇರಳ: 10,600 ರೂ
  • ಅಹ್ಮದಾಬಾದ್: 9,850 ರೂ
  • ಜೈಪುರ್: 9,850 ರೂ
  • ಲಕ್ನೋ: 9,850 ರೂ
  • ಭುವನೇಶ್ವರ್: 10,600 ರೂ
  • ಪುಣೆ: 9,850

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us