ಮಾರುಕಟ್ಟೆಯಲ್ಲಿ ಹೂಡಿಕೆ; ಯುಪಿಐ ಪಾವತಿ ಮಿತಿ 2 ಲಕ್ಷದಿಂದ 5 ಲಕ್ಷ ರೂಗೆ ಏರಿಕೆ
UPI daily transaction limit for stock market: ಷೇರು ಮಾರುಕಟ್ಟೆಯಲ್ಲಿ ಯುಪಿಐ ಮೂಲಕ ವಹಿವಾಟು ನಡೆಸುವಾಗ ಗರಿಷ್ಠ ಮಿತಿಯನ್ನು 2 ಲಕ್ಷ ರೂನಿಂದ 5 ಲಕ್ಷ ರೂಗೆ ಏರಿಸಲಾಗಿದೆ. ಸೆಬಿ ಸದ್ಯ ಪ್ರಾಯೋಗಿಕವಾಗಿ ಈ ಕ್ರಮ ತೆಗೆದುಕೊಂಡಿದೆ. ಷೇರುಗಳನ್ನು ಖರೀದಿಸಲು ಸಾಕಷ್ಟು ಜನರು ಯುಪಿಐ ಬಳಕೆ ಮಾಡುತ್ತಿದ್ದಾರೆ. ಅವರಿಗೆ ಅನುಕೂಲವಾಗಿಸಲು ಸೆಬಿ ಈ ನಿರ್ಧಾರ ತೆಗೆದುಕೊಂಡಿದೆ.

ನವದೆಹಲಿ, ಫೆಬ್ರುವರಿ 3: ಷೇರುಗಳ ವಹಿವಾಟಿನಲ್ಲಿ ಯುಪಿಐ ಮೂಲಕ ಹಣ ಪಾವತಿಸಲು ನಿತ್ಯದ ಮಿತಿಯನ್ನು ಏರಿಸಲಾಗಿದೆ. ಸದ್ಯ ಎರಡು ಲಕ್ಷ ರೂ ಇರುವ ಟ್ರಾನ್ಸಾಕ್ಷನ್ ಲಿಮಿಟ್ ಅನ್ನು ಐದು ಲಕ್ಷ ರೂವರೆಗೆ ಏರಿಸಲು ಸೆಬಿ (SEBI) ನಿರ್ಧರಿಸಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಯುಪಿಐ ಬಳಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಜನರಿಗೆ ಅನುಕೂಲವಾಗಲೆಂದು ಸೆಬಿ ಈ ಕ್ರಮ ಕೈಗೊಂಡಿದೆ. ಆದರೆ, ಈ ಕ್ರಮ ಅಂತಿಮವಲ್ಲ. ಸೆಬಿ ಈ ಬಗ್ಗೆ ಇನ್ನೂ ಸಮಾಲೋಚನೆ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಪರಿಷ್ಕರಿಸುವ ಸಂಭಾವ್ಯತೆಯೂ ಇದೆ.
ವಿವಿಧ ಬ್ರೋಕರ್ಗಳಿಂದ ಪಡೆದ ದತ್ತಾಂಶಗಳು ಮತ್ತು ಸೆಬಿ ನಿರ್ಧಾರ
ಯುಪಿಐನ ಒಂದು ದಿನದ ವಹಿವಾಟು ಮಿತಿ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸೆಬಿ ವಿವಿಧ ದತ್ತಾಂಶಗಳನ್ನು ಪರಿಶೀಲಿಸಿದೆ. ಪ್ರಮುಖ ಬ್ರೋಕರ್ ಕಂಪನಿಗಳಿಂದ ಪಡೆದ ಕೆಲ ಮಾಹಿತಿ ಆಧಾರವಾಗಿ ಸೆಬಿ ನಿರ್ಧಾರ ತೆಗೆದುಕೊಂಡಿದೆ. ಈ ಮಾಹಿತಿ ಪ್ರಕಾರ, ಷೇರು ವಹಿವಾಟುಗಳಲ್ಲಿ ಯುಪಿಐ ಮೂಲಕ ಹಣ ಪಾವತಿಸುವವರಲ್ಲಿ ಒಂದು ಟ್ರಾನ್ಸಾಕ್ಷನ್ನಲ್ಲಿ ಒಂದು ಲಕ್ಷ ರೂಗಿಂತ ಕಡಿಮೆ ಮೊತ್ತವನ್ನು ಪಾವತಿಸುವವರ ಪ್ರಮಾಣ ಶೇ 92.9 ಇದೆ.
ಇದನ್ನೂ ಓದಿ: ಇನ್ಷೂರೆನ್ಸ್ ಪ್ರೀಮಿಯಮ್ಗೆ ತೆರಿಗೆಯೇ ಇಲ್ಲದಿದ್ದರೆ ಏನಾಗುತ್ತೆ? ಊಹಿಸಲೂ ಕಷ್ಟವಾದ ಸೋಜಿಗದ ಸಂಗತಿ
ಒಂದು ಲಕ್ಷ ರೂನಿಂದ 2 ಲಕ್ಷ ರೂವರೆಗೆ ಒಂದು ಟ್ರಾನ್ಸಾಕ್ಷನ್ ಮಾಡುವವರ ಪ್ರಮಾಣ ಶೇ. 3.9 ಇದೆ. ಹಾಗೆಯೇ, ಎರಡರಿಂದ ಮೂರು ಲಕ್ಷ ರೂ ವಹಿವಾಟು ಮಾಡುವವರು ಶೇ. 1.3ರಷ್ಟಿದ್ದಾರೆ.
ಇಡೀ ದಿನಕ್ಕೆ ತೆಗೆದುಕೊಂಡರೆ, ಒಂದು ದಿನದಲ್ಲಿ ಒಂದು ಲಕ್ಷ ರೂಗಿಂತ ಕಡಿಮೆ ಮೊತ್ತದ ವಹಿವಾಟು ಮಾಡುವವರು ಶೇ. 91.5ರಷ್ಟಿದ್ದಾರೆ. ಒಂದರಿಂದ ಎರಡು ಲಕ್ಷ ರೂ ವಹಿವಾಟು ಶೇ. 4.6, ಹಾಗೂ 2-3 ಲಕ್ಷ ರೂ ವಹಿವಾಟು ಮಾಡುವವರು ಶೇ. 1.6ರಷ್ಟಿದ್ದಾರೆ. ಪ್ರಮುಖ ಬ್ರೋಕರ್ ಸಂಸ್ಥೆಗಳ ಬಳಕೆದಾರರ ಮಾಹಿತಿ ಇದಾಗಿದೆ. ಇದರ ಆಧಾರದ ಮೇಲೆ ಸೆಬಿ ದಿನಕ್ಕೆ 5 ಲಕ್ಷ ರೂ ವಹಿವಾಟಿನ ಮೇಲ್ಮಿತಿಯನ್ನು ನಿಗದಿ ಮಾಡಲು ನಿರ್ಧರಿಸಿದೆ.
ಗಮನಿಸಿ, ಈ ಮೇಲಿನದ್ದು ಷೇರು ಮಾರುಕಟ್ಟೆಯಲ್ಲಿ ನೀವು ಯುಪಿಐ ಮೂಲಕ ಮಾಡುವ ವಹಿವಾಟಿಗೆ ಇರುವ ನಿತ್ಯದ ಮಿತಿ. ಆದಾಯ ತೆರಿಗೆ ಪಾವತಿಸಲು ನೀವು ಯುಪಿಐ ಬಳಸುತ್ತಿದ್ದರೆ ದಿನಕ್ಕೆ 5 ಲಕ್ಷ ರೂವರೆಗೆ ಮಿತಿ ಇರುತ್ತದೆ.
ಇದನ್ನೂ ಓದಿ: ಎಸ್ಬಿಐ ಹೊಸ ಆರ್ಡಿ ಸ್ಕೀಮ್ ಹರ್ ಘರ್ ಲಖಪತಿ; ಎಫ್ಡಿಯಷ್ಟೇ ಸಿಗುತ್ತೆ ರಿಟರ್ನ್ಸ್
ಇವನ್ನು ಹೊರತುಪಡಿಸಿದರೆ ಮಾಮೂಲಿಯಾಗಿ ನೀವು ಅಂಗಡಿಗೋ ಅಥವಾ ಬೇರೆ ವ್ಯಕ್ತಿಗಳಿಗೂ ಹಣ ಪಾವತಿಸುತ್ತಿದ್ದರೆ ಆಗ ನಿತ್ಯದ ಟ್ರಾನ್ಸಾಕ್ಷನ್ ಮಿತಿ ಒಂದು ಲಕ್ಷ ರೂ ಮಾತ್ರವೇ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ