AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax: 75,000 ರೂಗೆ ಟ್ಯಾಕ್ಸ್ ಡಿಡಕ್ಷನ್; 13.70 ಲಕ್ಷ ರೂವರೆಗೂ ತೆರಿಗೆ ಇಲ್ಲ; ಯಾರಿಗಿದೆ ಈ ಅವಕಾಶ? ಇಲ್ಲಿದೆ ಡೀಟೇಲ್ಸ್

Income tax and standard deduction: ವರ್ಷಕ್ಕೆ 12 ಲಕ್ಷ ರೂ ಆದಾಯಕ್ಕೆ ತೆರಿಗೆ ಇರಲ್ಲ ಎಂದು ಫೆ. 1ರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಸಂಬಳದ ಆದಾಯ ಹೊಂದಿರುವವರಿಗೆ ಇನ್ನೂ ಹೆಚ್ಚುವರಿ ಟ್ಯಾಕ್ಸ್ ಲಾಭಗಳು ಸಿಗುತ್ತವೆ. 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಸಿಗುತ್ತದೆ. ಜೊತೆಗೆ, ಎನ್​ಪಿಎಸ್ ಅಕೌಂಟ್ ಹೊಂದಿದ್ದರೆ ಕಂಪನಿಯ ಕೊಡುಗೆಯ ಹಣಕ್ಕೂ ಟ್ಯಾಕ್ಸ್ ಡಿಡಕ್ಷನ್ ಸಿಗುತ್ತದೆ. ಒಟ್ಟಾರೆ 13.70 ಲಕ್ಷ ರೂ ಸಂಬಳ ಪಡೆಯುತ್ತಿರುವವರಿಗೆ ತೆರಿಗೆ ಬಾಧ್ಯತೆಯೇ ಇರುವುದಿಲ್ಲ.

Income Tax: 75,000 ರೂಗೆ ಟ್ಯಾಕ್ಸ್ ಡಿಡಕ್ಷನ್; 13.70 ಲಕ್ಷ ರೂವರೆಗೂ ತೆರಿಗೆ ಇಲ್ಲ; ಯಾರಿಗಿದೆ ಈ ಅವಕಾಶ? ಇಲ್ಲಿದೆ ಡೀಟೇಲ್ಸ್
ಆದಾಯ ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 04, 2025 | 11:28 AM

Share

ಫೆಬ್ರುವರಿ 1ರ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 12 ಲಕ್ಷ ರೂವರೆಗಿನ ಆದಾಯ ಹೊಂದಿರುವವರು ತೆರಿಗೆ ಪಾವತಿಸಬೇಕಿಲ್ಲ ಎಂದು ಘೋಷಿಸಿದ್ದರು. ಟ್ಯಾಕ್ಸ್ ರಿಬೇಟ್ ಅನ್ನು 25,000 ರೂನಿಂದ 60,000 ರೂಗೆ ಏರಿಸಲಾಗಿದೆ. ಹೀಗಾಗಿ, 12 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಸಿಗುತ್ತೆ. ಇದರಿಂದ 12,00,000 ರೂ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಈ ಮಧ್ಯೆ 12,75,000 ರೂ ಆದಾಯ ಇರುವವರೂ ಟ್ಯಾಕ್ಸ್ ಕಟ್ಟಬೇಕಿಲ್ಲ ಎನ್ನುವ ಸುದ್ದಿಗಳಿವೆ. ಇದು ಕೆಲವರಿಗೆ ಗೊಂದಲ ತಂದಿರಬಹುದು. ಇಲ್ಲಿ ಹೇಳಿರುವ 12.75 ಲಕ್ಷ ರೂ ಆದಾಯದ ಸಂಗತಿ ಎಲ್ಲರಿಗೂ ಅನ್ವಯಿಸುವುದಿಲ್ಲ. ಸಂಬಳದ ಆದಾಯ ಪಡೆಯುತ್ತಿರುವವರಿಗೆ ಅನ್ವಯ ಆಗುವಂಥದ್ದು.

ಹೊಸ ಟ್ಯಾಕ್ಸ್ ರಿಜೈಮ್​ನಲ್ಲಿ ಬಹಳ ಸೀಮಿತ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಸದ್ಯ 75,000 ರೂನಷ್ಟಿದೆ. ಇದು ಸಂಬಳದಾರರಿಗೆ ಮಾತ್ರ ಲಭ್ಯ ಇರುವ ಅವಕಾಶ. ಪಿಂಚಣಿಯ ಆದಾಯ ಇರುವವರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ 25,000 ರೂ ಇದೆ.

ಇದನ್ನೂ ಓದಿ: ನಿಮ್ಮ ವಾರ್ಷಿಕ ಆದಾಯ 12 ಲಕ್ಷ ರೂಗಿಂತ ತುಸು ಹೆಚ್ಚಿದ್ದರೆ ಏನಾಗುತ್ತೆ? ಮಾರ್ಜಿನಲ್ ರಿಲೀಫ್ ಲೆಕ್ಕಾಚಾರ

75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಎಂದರೆ, ಅಷ್ಟು ಮೊತ್ತದ ಆದಾಯವು ತೆರಿಗೆಯ ವ್ಯಾಪ್ತಿಯಿಂದ ಹೊರಗಿರುತ್ತದೆ. ನಿಮ್ಮ ವಾರ್ಷಿಕ ಸಂಬಳ 12,75,000 ರೂ ಆಗಿದ್ದರೆ, ಇದರಲ್ಲಿ 75 ಸಾವಿರ ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ತೆಗೆದುಹಾಕಿದರೆ, ಉಳಿಯುವ ಟ್ಯಾಕ್ಸಬಲ್ ಇನ್ಕಮ್ 12,00,000 ರೂ ಮಾತ್ರ. ಈ ಮೊತ್ತಕ್ಕೆ ಟ್ಯಾಕ್ಸ್ ರಿಬೇಟ್ ಸಿಗುತ್ತದೆ. ನಿಮ್ಮ ತೆರಿಗೆ ಬಾಧ್ಯತೆ ಶೂನ್ಯ ಇರುತ್ತದೆ.

ಇದಕ್ಕಿಂತ ತುಸು ಹೆಚ್ಚಿದ್ದರೆ ತೆರಿಗೆ ಲೆಕ್ಕಾಚಾರ ಶುರುವಾಗುತ್ತದೆ. ಈ ಹಂತದಲ್ಲಿ ಸಂಬಳದಾರರಿಗೆ ಎನ್​ಪಿಎಸ್ ಎನ್ನುವ ಮತ್ತೊಂದು ಅನುಕೂಲ ಇದೆ. ಉದ್ಯೋಗಿಯು ಎನ್​ಪಿಎಸ್ ಸ್ಕೀಮ್ ಹೊಂದಿದ್ದರೆ, ಅದಕ್ಕೆ ಕಂಪನಿ ವತಿಯಿಂದ ಆ ಅಕೌಂಟ್​ಗೆ ನೀಡುವ ಹಣಕ್ಕೆ ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯ ಇರುತ್ತದೆ. ನಿಮ್ಮ ಮೂಲವೇತನದ ಶೇ. 14ರಷ್ಟು ಹಣವನ್ನು ಕಂಪನಿ ವತಿಯಿಂದ ಹಾಕಲು ಅವಕಾಶ ಇದೆ.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಹೂಡಿಕೆ; ಯುಪಿಐ ಪಾವತಿ ಮಿತಿ 2 ಲಕ್ಷದಿಂದ 5 ಲಕ್ಷ ರೂಗೆ ಏರಿಕೆ

ಈ ಲೆಕ್ಕಾಚಾರದ ಪ್ರಕಾರ, ನಿಮ್ಮ ಬಳಿ ಎನ್​ಪಿಎಸ್ ಅಕೌಂಟ್ ತೆರೆಯಲಾಗಿದ್ದು, ಕಂಪನಿ ಶೇ. 14ರಷ್ಟು ಕೊಡುಗೆ ನೀಡುತ್ತಿದ್ದರೆ, ಆಗ ನಿಮ್ಮ ವಾರ್ಷಿಕ ಸಂಬಳ 13,70,000 ರೂಗಿಂತ ಒಳಗಿದ್ದಲ್ಲಿ ತೆರಿಗೆ ಅನ್ವಯ ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ