ಟ್ರಂಪ್ ಆಯ್ತು, ಈಗ ಚೀನೀ ಎಫೆಕ್ಟ್; ರುಪಾಯಿ ಮೌಲ್ಯ ಮತ್ತೆ ಕುಸಿತ; ಯಾರಿಗೆ ಲಾಭ, ಯಾರಿಗೆ ನಷ್ಟ?

China vs USA tax war effect on Rupee currency: ಡಾಲರ್ ಎದುರು ರುಪಾಯಿ ಮೌಲ್ಯ ಕಡಿಮೆ ಆಗುವುದು ಮುಂದುವರಿಯುತ್ತಲೇ ಇದೆ. ನಿನ್ನೆಯ ಟ್ರೇಡಿಂಗ್​ನಲ್ಲಿ 87.27ರವರೆಗೆ ಕುಸಿದಿದ್ದ ರುಪಾಯಿ, ದಿನಾಂತ್ಯದಲ್ಲಿ 87ಕ್ಕಿಂತ ಒಳಗೆ ಬರುವಲ್ಲಿ ಯಶಸ್ವಿಯಾಗಿತ್ತು. ಇವತ್ತು ಮತ್ತೊಮ್ಮೆ 87ರ ಗಡಿ ದಾಟಿ ಹೋಗಿದೆ. ಅಮೆರಿಕದ ಸರಕುಗಳ ಮೇಲೆ ತೆರಿಗೆ ಹಾಕುವುದಾಗಿ ಚೀನಾ ಹೇಳಿರುವುದು ರುಪಾಯಿ ಹಿನ್ನಡೆಗೆ ಹೊಸ ಪ್ರಭಾವ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಟ್ರಂಪ್ ಆಯ್ತು, ಈಗ ಚೀನೀ ಎಫೆಕ್ಟ್; ರುಪಾಯಿ ಮೌಲ್ಯ ಮತ್ತೆ ಕುಸಿತ; ಯಾರಿಗೆ ಲಾಭ, ಯಾರಿಗೆ ನಷ್ಟ?
ಡಾಲರ್ ವರ್ಸಸ್ ರುಪಾಯಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 04, 2025 | 12:36 PM

ನವದೆಹಲಿ, ಫೆಬ್ರುವರಿ 4: ರುಪಾಯಿ ಮೌಲ್ಯ ಕುಸಿತ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಸಾಗಿದೆ. ಡಾಲರ್ ಎದುರು 82-83ರಲ್ಲಿ ಸುತ್ತಾಡುತ್ತಿದ್ದ ರುಪಾಯಿ ಮೌಲ್ಯ ಇದೀಗ 87 ದಾಟಿದೆ. ಸದ್ಯ ಒಂದು ಡಾಲರ್​ಗೆ 87.1125 ರೂಪಾಯಿ ಬೆಲೆ ಇದೆ. ಒಂದಕ್ಕಿಂತ ಹೆಚ್ಚು ಕಾರಣಗಳಿಂದ ಈ ಕುಸಿತ ಸಂಭವಿಸುತ್ತಿದೆ. ಷೇರು ಮಾರುಕಟ್ಟೆಯಿಂದ ವಿದೇಶೀ ಹೂಡಿಕೆಗಳು ಹೊರಹೋಗುತ್ತಿರುವುದು, ಅಂತಾರಾಷ್ಟ್ರೀಯ ಅನಿಶ್ಚಿತ ಪರಿಸ್ಥಿತಿ, ಡೊನಾಲ್ಡ್ ಟ್ರಂಪ್ ತೆರಿಗೆ ನಿರ್ಧಾರಗಳು ಇತ್ಯಾದಿ ಕಾರಣಗಳು ಡಾಲರ್ ಎದುರು ರುಪಾಯಿ ಯನ್ನು ಮಂಕಾಗಿಸಿರಬಹುದು. ಹಾಗೆಯೇ, ಹೊಸ ಆರ್​ಬಿಐ ಗವರ್ನರ್ ಅವರು ರುಪಾಯಿ ರಕ್ಷಣೆಗೆ ನಿಲ್ಲುವ ಬದಲು ಮಾರುಕಟ್ಟೆ ಪ್ರಭಾವಕ್ಕೆ ಅವಕಾಶ ಕೊಟ್ಟಿರುವುದೂ ಕೂಡ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿರಬಹುದು.

ಸದ್ಯ ಕೆಲ ದಿನಗಳಿಂದ ರುಪಾಯಿ ಮೌಲ್ಯ ಹೆಚ್ಚಿನ ಮಟ್ಟದಲ್ಲಿ ಇಳಿಯಲು ಡೊನಾಲ್ಡ್ ಟ್ರಂಪ್ ಅವರ ಕೆಲ ನಿರ್ಧಾರಗಳೇ ಪ್ರಭಾವ ಬೀರಿವೆ. ಕೆನಡಾ, ಮೆಕ್ಸಿಕೋ ಮತ್ತು ಚೀನಾ ದೇಶಗಳ ಸರಕುಗಳ ಮೇಲೆ ಆಮದು ಸುಂಕ ವಿಧಿಸುವುದಾಗಿ ಅವರು ಹೇಳಿದ್ದು ಜಾಗತಿಕ ಮಾರುಕಟ್ಟೆಯನ್ನು ತಲ್ಲಣಗೊಳಿಸಿತು. ಈ ರೀತಿ ವಿಕ್ಷಿಪ್ತ ಸಂದರ್ಭಗಳಲ್ಲಿ ಜನರು (ಟ್ರೇಡರ್) ಡಾಲರ್​ಗೆ ಜೋತುಬೀಳುವುದುಂಟು.

ಇದನ್ನೂ ಓದಿ: Income Tax: 75,000 ರೂಗೆ ಟ್ಯಾಕ್ಸ್ ಡಿಡಕ್ಷನ್; 13.70 ಲಕ್ಷ ರೂವರೆಗೂ ತೆರಿಗೆ ಇಲ್ಲ; ಯಾರಿಗಿದೆ ಈ ಅವಕಾಶ? ಇಲ್ಲಿದೆ ಡೀಟೇಲ್ಸ್

ಕೆನಡಾ ದೇಶ ತಾನೂ ಕೂಡ ಅಮೆರಿಕದ ಉತ್ಪನ್ನಗಳ ಮೇಲೆ ಟ್ಯಾಕ್ಸ್ ಹಾಕುವುದಾಗಿ ಹೇಳಿತು. ಮೆಕ್ಸಿಕೋ ಕೂಡ ಅದೇ ನಡೆ ಇಡತೊಡಗಿತು. ಈ ಮಧ್ಯೆ ಡೊನಾಲ್ಡ್ ಟ್ರಂಪ್ ಕೆನಡಾ ಮೇಲೆ ಆಮದು ಸುಂಕ ಹೇರುವ ನಿರ್ಧಾರವನ್ನು 30 ದಿನಗಳಿಗೆ ಸ್ಥಗಿತಗೊಳಿಸಿದರು. ಕೆನಡಾ ಕೂಡ ತನ್ನ ಹೆಜ್ಜೆ ಹಿಂದಿಕ್ಕಿತು. ಪರಿಸ್ಥಿತಿ ತಿಳಿಯಾಯಿತು. ರುಪಾಯಿ ಚೇತರಿಸಿಕೊಂಡಿತು. ನಿನ್ನೆ (ಫೆ. 3) ದಿನಾಂತ್ಯದಲ್ಲಿ ರುಪಾಯಿ ಮೌಲ್ಯ 87ರ ಮಟ್ಟಕ್ಕಿಂತ ಕಡಿಮೆಗೆ ಬಂದಿತು. ಅಂದರೆ ಚೇತರಿಸಿಕೊಂಡಿತು.

ಇವತ್ತು ಚೀನಾ ದೇಶವು ಅಮೆರಿಕದ ಸರಕುಗಳಿಗೆ ತೆರಿಗೆ ಹಾಕುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಇವತ್ತು ಟ್ರೇಡಿಂಗ್​ನಲ್ಲಿ ರುಪಾಯಿ ಮತ್ತೆ ಹೊಯ್ದಾಡತೊಡಗಿದೆ. ನಿನ್ನೆಯ ಗರಿಷ್ಠವಾದ 87.27 ಮಟ್ಟವನ್ನು ರುಪಾಯಿ ಮತ್ತೆ ಮುಟ್ಟಿ, ಅದನ್ನು ದಾಟಿದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ಪನಾಮ ಕಾಲುವೆ ಮರುವಶಕ್ಕೂ ಸಿದ್ಧ ಎಂದ ಟ್ರಂಪ್; ಚೀನಾ ಒಪ್ಪಂದದಿಂದ ಹೊರಬಿದ್ದ ಪನಾಮ; ಈ ಪನಾಮ ಕೆನಾಲ್​ನದ್ದು ರೋಚಕ ಇತಿಹಾಸ

ಇದೆಲ್ಲದರ ಮಧ್ಯೆ ರುಪಾಯಿ ಮೌಲ್ಯ ಕುಸಿತಕ್ಕೆ ಷೇರು ಮಾರುಕಟ್ಟೆಗಳಿಂದ ಎಫ್​ಐಐಗಳ ನಿರ್ಗಮನ ನಿರಂತರವಾಗಿ ಆಗುತ್ತಿರುವುದೂ ಕಾರಣವಾಗಿದೆ. ಭಾರತದಿಂತ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವವರು ಡಾಲರ್ ಕರೆನ್ಸಿಯಲ್ಲಿ ವಹಿವಾಟಿಗೆ ಮುಂದಾಗುತ್ತಿದ್ದಾರೆ. ಇದರಿಂದ ಡಾಲರ್ ಬಲಗೊಂಡು ರುಪಾಯಿ ಮೌಲ್ಯ ಕಳೆದುಕೊಳ್ಳುವುದು ಅನಿವಾರ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಮಹಾಕುಂಭ ಮೇಳ: ಹರಿಹರಾನಂದ ಸ್ವಾಮೀಜಿ ಇದ್ದ ಟೆಂಟ್​ನಲ್ಲಿ ಅಗ್ನಿ ಅವಘಡ
ಮಹಾಕುಂಭ ಮೇಳ: ಹರಿಹರಾನಂದ ಸ್ವಾಮೀಜಿ ಇದ್ದ ಟೆಂಟ್​ನಲ್ಲಿ ಅಗ್ನಿ ಅವಘಡ
ಅರ್ಜಿ ವಜಾಗೊಂಡರೂ ಸಿದ್ದರಾಮಯ್ಯ ವಿರುದ್ಧದ ಪಟ್ಟು ಸಡಿಲಿಸದ ಸ್ನೇಹಮಯಿ ಕೃಷ್ಣ
ಅರ್ಜಿ ವಜಾಗೊಂಡರೂ ಸಿದ್ದರಾಮಯ್ಯ ವಿರುದ್ಧದ ಪಟ್ಟು ಸಡಿಲಿಸದ ಸ್ನೇಹಮಯಿ ಕೃಷ್ಣ
ಕುಟುಂಬದ ಮನೆಯನ್ನು ಸೀಜ್ ಮಾಡಿರುವ ಎಎಮ್​ಒಎಮ್ ಫೈನಾನ್ಸ್ ಸಂಸ್ಥೆ
ಕುಟುಂಬದ ಮನೆಯನ್ನು ಸೀಜ್ ಮಾಡಿರುವ ಎಎಮ್​ಒಎಮ್ ಫೈನಾನ್ಸ್ ಸಂಸ್ಥೆ
ಸಿದ್ದರಾಮಯ್ಯ ರಾಜೀನಾಮೆ: ಕೋರ್ಟ್​ ತೀರ್ಪು ಮೊದಲೇ ಸ್ನೇಹಮಯಿ ಕೃಷ್ಣ ಭವಿಷ್ಯ
ಸಿದ್ದರಾಮಯ್ಯ ರಾಜೀನಾಮೆ: ಕೋರ್ಟ್​ ತೀರ್ಪು ಮೊದಲೇ ಸ್ನೇಹಮಯಿ ಕೃಷ್ಣ ಭವಿಷ್ಯ
‘ಮಜಾ ಟಾಕೀಸ್’ಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಮಂದಿ; ಮಸ್ತ್ ಮಜಾ
‘ಮಜಾ ಟಾಕೀಸ್’ಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಮಂದಿ; ಮಸ್ತ್ ಮಜಾ