ಪನಾಮ ಕಾಲುವೆ ಮರುವಶಕ್ಕೂ ಸಿದ್ಧ ಎಂದ ಟ್ರಂಪ್; ಚೀನಾ ಒಪ್ಪಂದದಿಂದ ಹೊರಬಿದ್ದ ಪನಾಮ; ಈ ಪನಾಮ ಕೆನಾಲ್​ನದ್ದು ರೋಚಕ ಇತಿಹಾಸ

Panama Canal and USA vs China vs Panama: ಪನಾಮ ಕಾಲುವೆಯನ್ನು ಚೀನಾ ನಿಯಂತ್ರಿಸುತ್ತಿದೆ. ಈ ಕಾಲುವೆಯನ್ನು ನಾವು ಮರುವಶಪಡಿಸಿಕೊಳ್ಳಬೇಕಾದೀತು ಎಂದು ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಇದರ ಬೆನ್ನಲ್ಲೇ ಪನಾಮ ದೇಶ ತತ್ತರಿಸಿದ್ದು, ಚೀನಾ ಜೊತೆಗಿನ ಒಪ್ಪಂದವನ್ನು ಕೈಬಿಟ್ಟು ಅಮೆರಿಕ ಹೇಳಿದಂತೆ ಕೇಳಲು ಸಿದ್ಧವಾಗಿದೆ. ಕೆರಿಬಿಯನ್ ಸಮುದ್ರ ಮತ್ತು ಪೆಸಿಫಿಕ್ ಸಾಗರದ ನಡುವೆ ಕೊಂಡಿಯಾಗಿರುವ ಪನಾಮ ಕಾಲುವೆ ಕೃತಕವಾಗಿ ಸೃಷ್ಟಿಯಾಗಿರುವ ಕಾಲುವೆ. ಇದರ ಹಿಂದೆ ರೋಚಕ ಇತಿಹಾಸ ಇದೆ.

ಪನಾಮ ಕಾಲುವೆ ಮರುವಶಕ್ಕೂ ಸಿದ್ಧ ಎಂದ ಟ್ರಂಪ್; ಚೀನಾ ಒಪ್ಪಂದದಿಂದ ಹೊರಬಿದ್ದ ಪನಾಮ; ಈ ಪನಾಮ ಕೆನಾಲ್​ನದ್ದು ರೋಚಕ ಇತಿಹಾಸ
ಪನಾಮ ಕಾಲುವೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 03, 2025 | 1:26 PM

ವಾಷಿಂಗ್ಟನ್, ಫೆಬ್ರುವರಿ 3: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ವಾಪಸ್ ಬಂದ ಬಳಿಕ ಹಿಂದಿನ ಅವಧಿಗಿಂತಲೂ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಪನಾಮ ಕಾಲುವೆಯನ್ನು (Panama Canal) ವಶಕ್ಕೆ ತೆಗೆದುಕೊಳ್ಳುವುದಾಗಿ ಟ್ರಂಪ್ ಬೆದರಿಕೆ ಹಾಕುತ್ತಿದ್ದಾರೆ. ಇದೇ ಹೊತ್ತಲ್ಲಿ, ಪನಾಮ ದೇಶ ಅಮೆರಿಕದ ಒತ್ತಡಕ್ಕೆ ತಲೆಬಾಗಿ, ಹೇಳಿದಂತೆ ಕೇಳಲು ನಿರ್ಧರಿಸಿದೆ. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ (BRI) ಎನ್ನುವ ಜಾಗತಿಕ ಮಹಾ ಯೋಜನೆಯಿಂದ ಪನಾಮ ಹೊರಬರಲು ನಿರ್ಧರಿಸಿದೆ.

ಪನಾಮ ಲ್ಯಾಟಿನ್ ಅಮೆರಿಕದ ದಕ್ಷಿಣ ತುದಿಯಲ್ಲಿದೆ. ದಕ್ಷಿಣ ಅಮೆರಿಕದ ಖಂಡಕ್ಕೆ ಹೊಂದಿಕೊಂಡಂತಿದೆ. ಇಲ್ಲಿಯೇ 82 ಕಿಮೀ ಉದ್ದದ ಕೃತಕ ಕಾಲುವೆಯೊಂದಿದೆ. ಇದು ಕೆರೆಬಿಯನ್ ಸಮುದ್ರ ಮತ್ತು ಪೆಸಿಫಿಕ್ ಮಹಾಸಾಗರಕ್ಕೆ ಕೊಂಡಿಯಾಗಿ ಈ ಕಾಲುವೆ (Artificial Canal) ಇದೆ. 20ನೇ ಶತಮಾನದ ಆರಂಭದಲ್ಲಿ ಅಮೆರಿಕವೇ ಈ ಕಾಲುವೆ ನಿರ್ಮಿಸಿತ್ತು. ಹಡಗುಗಳ ಸಾಗಾಟಕ್ಕೆಂದು ನಿರ್ಮಿಸಿರುವ ಕಾಲುವೆ ಇದು. 20ನೇ ಶತಮಾನದ ಎಪ್ಪತ್ತರ ದಶಕದವರೆಗೂ ಈ ಕಾಲುವೆಯ ಪೂರ್ಣ ನಿಯಂತ್ರಣ ಅಮೆರಿಕದ ಬಳಿಯೇ ಇತ್ತು. ನಂತರ ಅದನ್ನು ಪನಾಮಕ್ಕೆ ಬಿಟ್ಟುಕೊಡಲಾಯಿತು.

ಪನಾಮ ದೇಶವು 2017ರಲ್ಲಿ ಚೀನಾದ ಬಿಆರ್​ಐ ಯೋಜನೆಗೆ ಕೈ ಜೋಡಿಸಿದೆ. ಇದರ ಬೆನ್ನಲ್ಲೇ ಪನಾಮ ಕಾಲುವೆಯ ನಿಯಂತ್ರಣವನ್ನು ಚೀನಾ ಮಾಡುತ್ತಿದೆ ಎಂಬುದು ಈಗ ಅಮೆರಿಕಕ್ಕೆ ಕಣ್ಣ ಕೆಂಪಾಗಿಸಿರುವ ಸಂಗತಿ. ತನ್ನ ಬುಡಕ್ಕೆ ಶತ್ರು ಬಂದು ಕೂರುವುದನ್ನು ಯಾರು ಸಹಿಸಿಯಾರು? ಅಂತೆಯೇ ಅಮೆರಿಕ ಇದೀಗ ಪನಾಮ ಕೆನಾಲ್ ಅನ್ನು ಮತ್ತೆ ವಶಕ್ಕೆ ಪಡೆಯುವ ಬೆದರಿಕೆ ಹಾಕಿರುವುದು. ಬಲಿಷ್ಠವಾಗಿರುವ ಅಮೆರಿಕವನ್ನು ಎದುರು ಹಾಕಿಕೊಳ್ಳುವಷ್ಟು ಶಕ್ತಿ ಮತ್ತು ಬೆಂಬಲ ಪನಾಮ ದೇಶಕ್ಕೂ ಇಲ್ಲ. ಹೀಗಾಗಿ, ವಿಶ್ವದ ದೊಡ್ಡಣ್ಣ ಹೇಳಿದಂತೆ ಕೇಳುವುದು ಪನಾಮಗೆ ಅನಿವಾರ್ಯವೇ.

ಇದನ್ನೂ ಓದಿ: ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ಅತಿಯಾಗಿದೆಯಾ? ಬೇರೆ ಪ್ರಮುಖ ದೇಶಗಳಲ್ಲಿ ಎಷ್ಟಿದೆ ಆದಾಯ ತೆರಿಗೆ? ಇಲ್ಲಿದೆ ಡೀಟೇಲ್ಸ್

‘ಇವರು (ಪನಾಮ ದೇಶ) ಬಹಳ ಪ್ರಮಾದ ಮಾಡಿದ್ದಾರೆ. ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ಪನಾಮ ಕಾಲವೆಯನ್ನು ಚೀನಾ ನಡೆಸುತ್ತಿದೆ. ನಾವು ಇದನ್ನು ಕೊಟ್ಟಿದ್ದು ಪನಾಮಗೆ ಹೊರತು ಚೀನಾಕ್ಕಲ್ಲ. ಕಾಲುವೆಯನ್ನು ಮೂರ್ಖತನದಿಂದ ಪನಾಮ ದೇಶಕ್ಕೆ ಕೊಟ್ಟೆವು. ಇದನ್ನು ಈಗ ಮತ್ತೆ ಅಮೆರಿಕಕ್ಕೆ ಕೊಡದೇ ಹೋದರೆ ಬಹಳ ದೊಡ್ಡ ಬೆಳವಣಿಗೆ ನಡೆಯಲಿದೆ,’ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು.

ಪನಾಮ ಪೋರ್ಟ್ಸ್ ಕಂಪನಿ ಮೇಲೆ ಅನುಮಾನ…

ಪನಾಮ ಪೋರ್ಟ್ಸ್ ಎನ್ನುವ ಕಂಪನಿಯೊಂದು ಕಾಲುವೆಯಲ್ಲಿ ಎರಡು ಟರ್ಮಿನಲ್​ಗಳನ್ನು ನಿರ್ವಹಿಸುತ್ತಿದೆ. ಈ ಕಂಪನಿಯು ಚೀನಾದ ಸಿ.ಕೆ. ಹಚಿನ್ಸನ್ ಹೋಲ್ಡಿಂಗ್ಸ್​ನ ಅಂಗಸಂಸ್ಥೆಯಾದ ಹಚಿನ್ಸನ್ ಪೋರ್ಟ್ಸ್​ನ ಒಂದು ಭಾಗವಾಗಿದೆ. ಈ ಹಚಿನ್ಸನ್ ಪೋರ್ಟ್ಸ್ ವಿಶ್ವಾದ್ಯಂತ 24 ದೇಶಗಳಲ್ಲಿ 53 ಪೋರ್ಟ್​ಗಳನ್ನು ಆಪರೇಟ್ ಮಾಡುತ್ತದೆ. ಈ ಪನಾಮ ಪೋರ್ಟ್ಸ್ ಬಗ್ಗೆ ಅಮೆರಿಕ ಆಡಿಟಿಂಗ್ ನಡೆಸುತ್ತಿದೆ.

ಮಾಧ್ಯಮ ವರದಿ ಪ್ರಕಾರ ಹಚಿನ್ಸನ್ ಸಂಸ್ಥೆಯು ಈ ಪನಾಮ ಕಾಲುವೆಯ ನಿಯಂತ್ರಣ ಹೊಂದಿಲ್ಲ. ಹಡಗುಗಳಿಂದ ಸರಕುಗಳ ಕಂಟೇನರ್​ಗಳನ್ನು ಲೋಡ್ ಮಾಡುವುದು, ಅನ್​​ಲೋಡ್ ಮಾಡುವುದು, ಇಂಧನ ಸರಬರಾಜು ಮಾಡುವುದು ಈ ಕೆಲಸಗಳನ್ನು ಮಾಡುತ್ತಿದೆ ಎನ್ನಲಾಗಿದೆ.

ಪನಾಮ ಕಾಲುವೆ ಮತ್ತು ಅಪ್ರತಿಮ ಎಂಜಿನಿಯರಿಂಗ್

ಪನಾಮ ಕಾಲುವೆ ರಚನೆ ಹಿಂದೆ ರೋಚಕ ಮತ್ತು ದೊಡ್ಡ ಇತಿಹಾಸವೇ ಇದೆ. ಕೆರಿಬಿಯನ್ ಸಮುದ್ರ ಮತ್ತು ಪೆಸಿಫಿಕ್ ಸಾಗರಕ್ಕೆ ಈ ಕಾಲುವೆ ಶಾರ್ಟ್ ಕಟ್ ಆಗಿದೆ. ಇದಿಲ್ಲದೇ ಹೋಗಿದ್ದರೆ ಹಡಗುಗಳು ಅಮೆರಿಕದ ನ್ಯೂಯಾರ್ಕ್​ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗಲು ದಕ್ಷಿಣ ಅಮೆರಿಕದ ಕೆಳಗಿನಿಂದ ಬಳಸಿ ಸುತ್ತಿಕೊಂಡು ಹೋಗಬೇಕಿತ್ತು. ಸುಮಾರು 21,000 ಕಿಮೀ ದೂರ ಸಾಗಬೇಕಿತ್ತು. ಅದೂ ಆ ಹಾದಿ ಬಹಳ ದುರ್ಗಮ ಮತ್ತು ಭಯಾನಕವಾದುದಾಗಿದೆ. ಹೀಗಾಗಿ, ಪನಾಮ ಕಾಲುವೆಯನ್ನು ನಿರ್ಮಿಸಲಾಯಿತು. ಇದರಿಂದ 10,000ಕ್ಕೂ ಹೆಚ್ಚು ಕಿಮೀ ದೂರ ಉಳಿಸಲು ಸಾಧ್ಯವಾಗಿದೆ.

ಇದನ್ನೂ ಓದಿ: Tariff war: ಅಮೆರಿಕ ವರ್ಸಸ್ ಕೆನಡಾ, ಮೆಕ್ಸಿಕೋ ಚೀನಾ ತೆರಿಗೆ ಯುದ್ಧ; ಭಾರತಕ್ಕಿದೆ ಲಾಭ

ಆದರೆ, ಈ ಕಾಲುವೆ ನಿರ್ಮಾಣ ಅಷ್ಟು ಸುಲಭವಿರಲಿಲ್ಲ. ಸಾಕಷ್ಟು ಸವಾಲುಗಳಿದ್ದವು. ಫ್ರೆಂಚರು ಮೊದಲಿಗೆ ಈ ಸಾಹಸಕ್ಕೆ ಕೈಹಾಕಿ ಸುಟ್ಟುಕೊಂಡರು. ಆ ಬಳಿಕ ಅಮೆರಿಕ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡು ಹತ್ತು ವರ್ಷದಲ್ಲಿ ಕಾಲುವೆ ನಿರ್ಮಾಣ ಮಾಡಿದರು. ಸಾವಿರಾರು ಕಾರ್ಮಿಕರು ಈ ಕಾರ್ಯದಲ್ಲಿ ಬಲಿಯಾಗಿದ್ದಾರೆ. ಈ ಕೃತಕ ಕಾಲುವೆಯು ಹಡಗುಗಳನ್ನು ಏರಿಸಲು ಮತ್ತು ಇಳಿಸಲು ಲಾಕಿಂಗ್ ಸಿಸ್ಟಂ ಹೊಂದಿದೆ. ಇದು ಎಂಜನಿಯರಿಂಗ್ ಅದ್ಭುತಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ