Gold Silver Price on 21st July: ಚಿನ್ನ, ಬೆಳ್ಳಿ ಬೆಲೆ ಮತ್ತೆ ಇಳಿಕೆ; ಈ ವಾರ ಸಾಕಷ್ಟು ಏರಿಳಿಕೆಯ ಆಟ

Bullion Market 2024 July 21st: ಚಿನ್ನ ಮತ್ತು ಬೆಳ್ಳಿ ಬೆಲೆ ಕೆಲ ದಿನಗಳಿಂದ ಸತತವಾಗಿ ಇಳಿಕೆ ಆಗಿದೆ. ಚಿನ್ನದ ಬೆಲೆ ಈಗ ಗ್ರಾಮ್​ಗೆ 6,815 ರೂ ಆಗಿದೆ. ಬೆಳ್ಳಿ ಬೆಲೆ 100 ಗ್ರಾಮ್​ಗೆ 9,325 ರೂ ಆಗಿದೆ. ಮುಂಬರುವ ವಾರದಲ್ಲೂ ಈ ಏರಿಳಿಕೆ ಆಟ ಮುಂದುವರಿಯುತ್ತಾ ನೋಡಬೇಕು.

Gold Silver Price on 21st July: ಚಿನ್ನ, ಬೆಳ್ಳಿ ಬೆಲೆ ಮತ್ತೆ ಇಳಿಕೆ; ಈ ವಾರ ಸಾಕಷ್ಟು ಏರಿಳಿಕೆಯ ಆಟ
ಚಿನ್ನ

Updated on: Jul 21, 2024 | 5:00 AM

ಬೆಂಗಳೂರು, ಜುಲೈ 21: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈ ವಾರ ಸಾಕಷ್ಟು ಏರಿಕೆ ಮತ್ತು ಇಳಿಕೆಯ ಆಟ ಆಡಿವೆ. ಅಮೆರಿಕದಲ್ಲಿ ಬಡ್ಡಿದರ ಕಡಿಮೆ ಮಾಡುವ ಸುಳಿವು ಸಿಗುತ್ತಿದ್ದಂತೆಯೆ ಚಿನ್ನಕ್ಕೆ ಒಂದಷ್ಟು ಬೇಡಿಕೆ ಹೆಚ್ಚಿತು. ಬಳಿಕ ಮತ್ತೆ ಪ್ರೈಸ್ ಕರೆಕ್ಷನ್ ಆಗಿದೆ. ಚಿನ್ನ, ಬೆಳ್ಳಿ ಬೆಲೆ ಇಳಿಕೆಗೆ ನಿರ್ದಿಷ್ಟ ಕಾರಣವಿಲ್ಲ. ಜುಲೈ ಅಂತ್ಯದಲ್ಲಿ ಯುಎಸ್​ನ ಫೆಡರ್ ರಿಸರ್ವ್ ಪರಿಷ್ಕೃತ ದರ ಪ್ರಕಟವಾದ ಬಳಿಕ ಚಿನಿವಾರ ಪೇಟೆಯಲ್ಲಿ ಸಂಚಲನ ಆಗಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 68,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 74,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,325 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 68,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,175 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 21ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 68,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,350 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 932.50 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 68,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,350 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 917.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 68,150 ರೂ
  • ಚೆನ್ನೈ: 68,750 ರೂ
  • ಮುಂಬೈ: 68,150 ರೂ
  • ದೆಹಲಿ: 68,300 ರೂ
  • ಕೋಲ್ಕತಾ: 68,150 ರೂ
  • ಕೇರಳ: 68,150 ರೂ
  • ಅಹ್ಮದಾಬಾದ್: 68,200 ರೂ
  • ಜೈಪುರ್: 68,300 ರೂ
  • ಲಕ್ನೋ: 68,300 ರೂ
  • ಭುವನೇಶ್ವರ್: 68,150 ರೂ

ಇದನ್ನೂ ಓದಿ: ಅರ್ಧದಷ್ಟು ಭಾರತೀಯ ಕುಟುಂಬಗಳ ಆದಾಯ ಮತ್ತು ಉಳಿತಾಯ ಇಳಿಕೆ; ಬಜೆಟ್​ನಲ್ಲಿ ರಿಲೀಫ್ ಸಿಗುವ ಅಪೇಕ್ಷೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,590 ರಿಂಗಿಟ್ (64,140 ರುಪಾಯಿ)
  • ದುಬೈ: 2,710 ಡಿರಾಮ್ (61,670 ರುಪಾಯಿ)
  • ಅಮೆರಿಕ: 750 ಡಾಲರ್ (62,750 ರುಪಾಯಿ)
  • ಸಿಂಗಾಪುರ: 1,020 ಸಿಂಗಾಪುರ್ ಡಾಲರ್ (63,150 ರುಪಾಯಿ)
  • ಕತಾರ್: 2,740 ಕತಾರಿ ರಿಯಾಲ್ (62,980 ರೂ)
  • ಸೌದಿ ಅರೇಬಿಯಾ: 2,830 ಸೌದಿ ರಿಯಾಲ್ (63,120 ರುಪಾಯಿ)
  • ಓಮನ್: 290 ಒಮಾನಿ ರಿಯಾಲ್ (63,170 ರುಪಾಯಿ)
  • ಕುವೇತ್: 220 ಕುವೇತಿ ದಿನಾರ್ (60,170 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,175 ರೂ
  • ಚೆನ್ನೈ: 9,775 ರೂ
  • ಮುಂಬೈ: 9,325 ರೂ
  • ದೆಹಲಿ: 9,325 ರೂ
  • ಕೋಲ್ಕತಾ: 9,325 ರೂ
  • ಕೇರಳ: 9,775 ರೂ
  • ಅಹ್ಮದಾಬಾದ್: 9,325 ರೂ
  • ಜೈಪುರ್: 9,325 ರೂ
  • ಲಕ್ನೋ: 9,325 ರೂ
  • ಭುವನೇಶ್ವರ್: 9,775 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us