Gold Silver Price on 25th July: ಭರ್ಜರಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರುಗತಿಗೆ ಬರುವ ಸಾಧ್ಯತೆ

Bullion Market 2024 July 25th: ಬಜೆಟ್ ಬಳಿಕ ಚಿನ್ನ, ಬೆಳ್ಳಿ ಬೆಲೆ ಇಳಿಕೆಯ ವೇಗ ಹೆಚ್ಚಿದೆ. ಇತರ ದೇಶಗಳಲ್ಲಿನ ಬೆಲೆಯ ಸಮೀಪಕ್ಕೆ ಹೋಗಿದೆ. ಆಮದು ಸುಂಕ ಇಳಿಸಿದ ಪರಿಣಾಮ ಇದು. ಈಗ ಚಿನ್ನದ ಬೆಲೆ ಮತ್ತೆ ಏರುವ ಸಾಧ್ಯತೆ ಇದೆ.

Gold Silver Price on 25th July: ಭರ್ಜರಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರುಗತಿಗೆ ಬರುವ ಸಾಧ್ಯತೆ
ಚಿನ್ನ

Updated on: Jul 25, 2024 | 5:00 AM

ಬೆಂಗಳೂರು, ಜುಲೈ 25: ಬಜೆಟ್​ನಲ್ಲಿ ಚಿನ್ನ, ಬೆಳ್ಳಿ, ಪ್ಲಾಟಿನಂ ಮೇಲೆ ಆಮದು ಸುಂಕ ಇಳಿಸಿದ ಬಳಿಕ ಬೆಲೆ ಬಹಳಷ್ಟು ಕಡಿಮೆಗೊಂಡಿದೆ. ಭಾರತ ಮತ್ತು ಕೆಲ ಇತರ ದೇಶಗಳ ನಡುವಿನ ಚಿನ್ನದ ಬೆಲೆಯಲ್ಲಿನ ಅಂತರ ಹೆಚ್ಚೇನಿಲ್ಲ. ಇವತ್ತು ಚಿನ್ನದ ಬೆಲೆ ಮತ್ತೆ ಏರುವ ಸಾಧ್ಯತೆ ದಟ್ಟವಾಗಿದೆ. ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್​ಗೆ 8 ರೂಗೂ ಹೆಚ್ಚು ಮೊತ್ತದಷ್ಟು ಇಳಿಕೆ ಕಂಡಿದೆ. ಚಿನ್ನದ ಬೆಲೆಯಲ್ಲೂ ಕೂಡ 255 ರೂನಷ್ಟು ಕಡಿಮೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಈ ಅಮೂಲ್ಯ ಲೋಹಗಳು ಕಂಡ ಗರಿಷ್ಠ ಇಳಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 64,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 70,860 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,750 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 64,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,875 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 25ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 64,950 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,860 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 887.50 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 64,950 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,860 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 875 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 64,950 ರೂ
  • ಚೆನ್ನೈ: 64,900 ರೂ
  • ಮುಂಬೈ: 64,950 ರೂ
  • ದೆಹಲಿ: 65,100 ರೂ
  • ಕೋಲ್ಕತಾ: 64,950 ರೂ
  • ಕೇರಳ: 64,950 ರೂ
  • ಅಹ್ಮದಾಬಾದ್: 65,000 ರೂ
  • ಜೈಪುರ್: 65,100 ರೂ
  • ಲಕ್ನೋ: 65,100 ರೂ
  • ಭುವನೇಶ್ವರ್: 64,950 ರೂ

ಇದನ್ನೂ ಓದಿ: ಹೊಸ ವಾತ್ಸಲ್ಯ ಎನ್​ಪಿಎಸ್ ಯೋಜನೆ; ಸಣ್ಣ ಮಕ್ಕಳಿಗೆ ಭವಿಷ್ಯ ರೂಪಿಸಲು ಪೋಷಕರಿಗಿದೋ ಅವಕಾಶ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,560 ರಿಂಗಿಟ್ (63,790 ರುಪಾಯಿ)
  • ದುಬೈ: 2,700 ಡಿರಾಮ್ (61,650 ರುಪಾಯಿ)
  • ಅಮೆರಿಕ: 740 ಡಾಲರ್ (61,530 ರುಪಾಯಿ)
  • ಸಿಂಗಾಪುರ: 1,010 ಸಿಂಗಾಪುರ್ ಡಾಲರ್ (62,890 ರುಪಾಯಿ)
  • ಕತಾರ್: 2,760 ಕತಾರಿ ರಿಯಾಲ್ (63,240 ರೂ)
  • ಸೌದಿ ಅರೇಬಿಯಾ: 2,770 ಸೌದಿ ರಿಯಾಲ್ (61,820 ರುಪಾಯಿ)
  • ಓಮನ್: 290 ಒಮಾನಿ ರಿಯಾಲ್ (63,490 ರುಪಾಯಿ)
  • ಕುವೇತ್: 220 ಕುವೇತಿ ದಿನಾರ್ (60,220 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,875 ರೂ
  • ಚೆನ್ನೈ: 9,200 ರೂ
  • ಮುಂಬೈ: 8,750 ರೂ
  • ದೆಹಲಿ: 8,750 ರೂ
  • ಕೋಲ್ಕತಾ: 8,750 ರೂ
  • ಕೇರಳ: 9,200 ರೂ
  • ಅಹ್ಮದಾಬಾದ್: 8,750 ರೂ
  • ಜೈಪುರ್: 8,750 ರೂ
  • ಲಕ್ನೋ: 8,750 ರೂ
  • ಭುವನೇಶ್ವರ್: 9,200 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us