Gold Silver Price on 30th June: ಚಿನ್ನದ ಬೆಲೆ ತುಸು ಏರಿಕೆ; 10 ದಿನದಲ್ಲಿ ತುಸು ಅಗ್ಗ; ಇವತ್ತಿನ ದರಪಟ್ಟಿ

Bullion Market 2024 June 30th: ಸತತ ಇಳಿಕೆ ಬಳಿಕ ಚಿನ್ನದ ಬೆಲೆಯಲ್ಲಿ ಇಂದು ತುಸು ಹೆಚ್ಚಳವಾಗಿದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,160 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 90 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 66,150 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,950 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 30th June: ಚಿನ್ನದ ಬೆಲೆ ತುಸು ಏರಿಕೆ; 10 ದಿನದಲ್ಲಿ ತುಸು ಅಗ್ಗ; ಇವತ್ತಿನ ದರಪಟ್ಟಿ
ಚಿನ್ನ

Updated on: Jun 30, 2024 | 5:00 AM

ಬೆಂಗಳೂರು, ಜೂನ್ 30: ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಕಳೆದ 10 ದಿನದಲ್ಲಿ ಹೆಚ್ಚೇನೂ ವ್ಯತ್ಯಾಸ ಕಂಡಿಲ್ಲ. ಎರಡೂ ಕೂಡ ಹತ್ತು ದಿನದಲ್ಲಿ ಅಲ್ಪ ಇಳಿಕೆ ಕಂಡಿವೆ. ಚಿನ್ನದ ಬೆಲೆ ಗ್ರಾಮ್​ಗೆ ಕೇವಲ ಐದು ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆ ಹತ್ತು ದಿನದಲ್ಲಿ ಇಳಿದಿರುವುದು ಹತ್ತು ಪೈಸೆ ಮಾತ್ರ. ವಾರಾಂತ್ಯದಲ್ಲಿ ಭಾರತ ಸೇರಿದಂತೆ ಹಲವೆಡೆ ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಚಿನ್ನದ ಬೆಲೆ ಭಾರತದಲ್ಲಿ ಗ್ರಾಮ್​ಗೆ 25 ರೂನಷ್ಟು ಕಡಿಮೆ ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ದೇಶಗಳಲ್ಲೂ ಚಿನ್ನದ ಬೆಲೆ ಇಳಿಕೆ ಕಂಡಿದೆ. ಸತತ ಮೂರ್ನಾಲ್ಕು ಬಾರಿ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,160 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,950 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 30ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,160 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 900 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,160 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 895 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 66,150 ರೂ
  • ಚೆನ್ನೈ: 66,660 ರೂ
  • ಮುಂಬೈ: 66,150 ರೂ
  • ದೆಹಲಿ: 66,300 ರೂ
  • ಕೋಲ್ಕತಾ: 66,150 ರೂ
  • ಕೇರಳ: 66,150 ರೂ
  • ಅಹ್ಮದಾಬಾದ್: 66,200 ರೂ
  • ಜೈಪುರ್: 66,300 ರೂ
  • ಲಕ್ನೋ: 66,300 ರೂ
  • ಭುವನೇಶ್ವರ್: 66,150 ರೂ

ಇದನ್ನೂ ಓದಿ: ಜಿಯೋ ದರ ಹೆಚ್ಚಳ ಬೆನ್ನಲ್ಲೇ ಷೇರುಪೇಟೆಯಲ್ಲಿ ಆರ್​ಐಎಲ್ ಮಿಂಚು; ಮಾರುಕಟ್ಟೆ ಬಂಡವಾಳ ದಾಖಲೆಯ 21 ಲಕ್ಷ ಕೋಟಿ ರೂಗೆ ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,460 ರಿಂಗಿಟ್ (61,170 ರುಪಾಯಿ)
  • ದುಬೈ: 2,610 ಡಿರಾಮ್ (59,250 ರುಪಾಯಿ)
  • ಅಮೆರಿಕ: 710 ಡಾಲರ್ (59,200 ರುಪಾಯಿ)
  • ಸಿಂಗಾಪುರ: 985 ಸಿಂಗಾಪುರ್ ಡಾಲರ್ (60,590 ರುಪಾಯಿ)
  • ಕತಾರ್: 2,660 ಕತಾರಿ ರಿಯಾಲ್ (60,840 ರೂ)
  • ಸೌದಿ ಅರೇಬಿಯಾ: 2,670 ಸೌದಿ ರಿಯಾಲ್ (59,350 ರುಪಾಯಿ)
  • ಓಮನ್: 277.50 ಒಮಾನಿ ರಿಯಾಲ್ (60,100 ರುಪಾಯಿ)
  • ಕುವೇತ್: 221 ಕುವೇತಿ ದಿನಾರ್ (60,080 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,950 ರೂ
  • ಚೆನ್ನೈ: 9,450 ರೂ
  • ಮುಂಬೈ: 9,000 ರೂ
  • ದೆಹಲಿ: 9,000 ರೂ
  • ಕೋಲ್ಕತಾ: 9,000 ರೂ
  • ಕೇರಳ: 9,450 ರೂ
  • ಅಹ್ಮದಾಬಾದ್: 9,000 ರೂ
  • ಜೈಪುರ್: 9,000 ರೂ
  • ಲಕ್ನೋ: 9,000 ರೂ
  • ಭುವನೇಶ್ವರ್: 9,450 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us