ಬೆಂಗಳೂರು, ಮಾರ್ಚ್ 13: ಜಾಗತಿಕವಾಗಿ ಆರ್ಥಿಕ ಹಿನ್ನಡೆ ಮತ್ತು ರಾಜಕೀಯ ಸೂಕ್ಷ್ಮ ಪರಿಸ್ಥಿತಿ ಹೆಚ್ಚಿದಂತೆ ಚಿನ್ನ, ಬೆಳ್ಳಿಯಂತಹ ವಸ್ತುಗಳಿಗೆ ಬೇಡಿಕೆ ಸಹಜವಾಗಿ ಹೆಚ್ಚುತ್ತದೆ. ಈಗಲೂ ಕೂಡ ಅದೇ ಆಗುತ್ತಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and Silver Prices) ಏರಿಕೆ ಮುಂದುವರಿದಿದೆ. ನಿನ್ನೆ 45 ರೂನಷ್ಟು ಏರಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು 55 ರೂ ಹೆಚ್ಚಳವಾಗಿದೆ. ಎರಡು ದಿನದಲ್ಲಿ ಒಂದು ಗ್ರಾಮ್ಗೆ 100 ರೂ ಏರಿಕೆ ಆದಂತಾಗಿದೆ. ಭಾರತದಲ್ಲಿ ಮಾತ್ರವಲ್ಲ, ಹಲವು ವಿದೇಶಗಳಲ್ಲೂ ಬೆಲೆ ಏರಿಕೆ ಆಗಿದೆ. ಅಮೆರಿಕ, ಮಲೇಷ್ಯಾ ಇತ್ಯಾದಿ ಹೆಚ್ಚಿನ ಕಡೆ ಚಿನ್ನದ ಬೆಲೆ ತುಸು ದುಬಾರಿಗೊಂಡಿದೆ. ಅಮೆರಿಕದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 88.50 ಡಾಲರ್ ಇದೆ. ಭಾರತೀಯ ಕರೆನ್ಸಿಯಲ್ಲಿ 7,705 ರೂ ಆಗುತ್ತದೆ. ದುಬೈನಲ್ಲಿ 327 ದಿನಾರ್ ಇದೆ. ಅಂದರೆ 7,751 ರೂ ಇದೆ. ಭಾರತದಲ್ಲಿ ಇದರ ಬೆಲೆ 8,120 ರೂಗೆ ಏರಿದೆ. ಇದೇ ವೇಳೆ, ಬೆಳ್ಳಿ ಬೆಲೆ ಕೂಡ ಭರ್ಜರಿ ಏರಿಕೆ ಕಂಡಿದೆ. ನಿನ್ನೆ ಎರಡು ರೂ ಏರಿಕೆಯಾಗಿದ್ದ ಅದರ ಬೆಲೆ ಇವತ್ತು 1 ರೂ ಹೆಚ್ಚಳ ಪಡೆದಿದೆ. ಭಾರತದಲ್ಲಿ ಮೊದಲ ಬಾರಿಗೆ ಬೆಳ್ಳಿ ಬೆಲೆ 110 ರು ಗಡಿ ಮುಟ್ಟಿದೆ. ಚೆನ್ನೈ ಮೊದಲಾದ ಕೆಲವೆಡೆ ಈ ಬೆಲೆ ಇದೆ. ಬೆಂಗಳೂರಿನಲ್ಲಿ 101 ರೂ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 81,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 88,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 81,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,100 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: ಫೆಬ್ರುವರಿಯಲ್ಲಿ ಹಣದುಬ್ಬರ ಶೇ 3.61ಕ್ಕೆ ಇಳಿಕೆ; ನಿರೀಕ್ಷೆಗಿಂತ ಕೆಳಗಿಳಿದ ಬೆಲೆ ಏರಿಕೆ ದರ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:15 am, Thu, 13 March 25