Gold Silver Price on 22nd October: ಚಿನ್ನ, ಬೆಳ್ಳಿ ಬೆಲೆಗಳ ದಾಖಲೆ ಓಟ ಮುಂದುವರಿಕೆ

Bullion Market 2024 October 22nd: ಚಿನ್ನದ ಬೆಲೆ ಇಂದು ಮಂಗಳವಾರ 7,310 ರೂಗೆ ಏರಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 7,965 ರೂ ತಲುಪಿದೆ. ಬೆಳ್ಳಿ ಬೆಲೆ ಚೆನ್ನೈ ಮೊದಲಾದೆಡೆ 110 ರೂ ಗಡಿ ಸಮೀಪ ದೌಡಾಯಿಸಿದೆ. 18 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್​ಗೆ 5,974 ರೂಗೆ ಏರಿದೆ.

Gold Silver Price on 22nd October: ಚಿನ್ನ, ಬೆಳ್ಳಿ ಬೆಲೆಗಳ ದಾಖಲೆ ಓಟ ಮುಂದುವರಿಕೆ
ಚಿನ್ನ
Edited By:

Updated on: Oct 22, 2024 | 12:15 PM

ಬೆಂಗಳೂರು, ಅಕ್ಟೋಬರ್ 22: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಸಾರ್ವಕಾಲಿಕ ಹೆಚ್ಚಳದ ಹಾದಿ ಮುಂದುವರಿಯುತ್ತಿದೆ. ನಿನ್ನೆ ಗ್ರಾಮ್​ಗೆ 20 ರೂನಷ್ಟು ಹೆಚ್ಚಾಗಿದ್ದ ಚಿನ್ನದ ಬೆಲೆ ಇಂದು ಮಂಗಳವಾರ ಅಲ್ಪ ಹೆಚ್ಚಳ ಕಂಡಿದೆ. ಗ್ರಾಮ್​ಗೆ ಒಂದು ರೂ ಮಾತ್ರ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಅಲ್ಪ ಹೆಚ್ಚಳವಾಗಿದೆ. ದುಬೈ, ಶಾರ್ಜಾ ಇತ್ಯಾದಿ ಯುಎಇ ನಗರಗಳಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ 3,000 ಡಿರಾಮ್ ಮೌಲ್ಯದ ಗಡಿದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 73,010 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 79,650 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,110 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 73,010 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,690 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 22ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,010 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,650 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,740 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 101.10 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,010 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,650 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 969 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 73,010 ರೂ
  • ಚೆನ್ನೈ: 73,010 ರೂ
  • ಮುಂಬೈ: 73,010 ರೂ
  • ದೆಹಲಿ: 73,160 ರೂ
  • ಕೋಲ್ಕತಾ: 73,010 ರೂ
  • ಕೇರಳ: 73,010 ರೂ
  • ಅಹ್ಮದಾಬಾದ್: 73,060 ರೂ
  • ಜೈಪುರ್: 73,160 ರೂ
  • ಲಕ್ನೋ: 73,160 ರೂ
  • ಭುವನೇಶ್ವರ್: 73,010 ರೂ

ಇದನ್ನೂ ಓದಿ: Petrol Diesel Price on October 22: ಅಸ್ಸಾಂ, ಮಧ್ಯಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,680 ರಿಂಗಿಟ್ (71,580 ರುಪಾಯಿ)
  • ದುಬೈ: 3,070 ಡಿರಾಮ್ (70,270 ರುಪಾಯಿ)
  • ಅಮೆರಿಕ: 820 ಡಾಲರ್ (68,940 ರುಪಾಯಿ)
  • ಸಿಂಗಾಪುರ: 1,109 ಸಿಂಗಾಪುರ್ ಡಾಲರ್ (70,870 ರುಪಾಯಿ)
  • ಕತಾರ್: 3,080 ಕತಾರಿ ರಿಯಾಲ್ (71,030 ರೂ)
  • ಸೌದಿ ಅರೇಬಿಯಾ: 3,040 ಸೌದಿ ರಿಯಾಲ್ (68,050 ರುಪಾಯಿ)
  • ಓಮನ್: 324.50 ಒಮಾನಿ ರಿಯಾಲ್ (70,870 ರುಪಾಯಿ)
  • ಕುವೇತ್: 248.30 ಕುವೇತಿ ದಿನಾರ್ (68,110 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,690 ರೂ
  • ಚೆನ್ನೈ: 10,910 ರೂ
  • ಮುಂಬೈ: 10,110 ರೂ
  • ದೆಹಲಿ: 10,110 ರೂ
  • ಕೋಲ್ಕತಾ: 10,110 ರೂ
  • ಕೇರಳ: 10,910 ರೂ
  • ಅಹ್ಮದಾಬಾದ್: 10,110 ರೂ
  • ಜೈಪುರ್: 10,110 ರೂ
  • ಲಕ್ನೋ: 10,110 ರೂ
  • ಭುವನೇಶ್ವರ್: 10,910 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:25 am, Tue, 22 October 24

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us