Gold Rate: ಚಿನ್ನದ ಬೆಲೆ 145 ರೂ, ಬೆಳ್ಳಿ ಬೆಲೆ 5 ರೂ ಏರಿಕೆ; ಇಲ್ಲಿದೆ ದರಪಟ್ಟಿ

Gold Price 21 May 2026: ಇಂದು ಗುರುವಾರ ಚಿನ್ನದ ಬೆಲೆಯಲ್ಲಿ 145 ರೂ ಹೆಚ್ಚಿದೆ. ಬೆಳ್ಳಿ ಬೆಲೆ 5 ರೂ ಏರಿದೆ. 22 ಕ್ಯಾರಟ್ ಚಿನ್ನದ ಬೆಲೆ 14,515 ರೂನಿಂದ 14,660 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 15,993 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 285 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 290 ರೂ ಇದೆ.

Gold Rate: ಚಿನ್ನದ ಬೆಲೆ 145 ರೂ, ಬೆಳ್ಳಿ ಬೆಲೆ 5 ರೂ ಏರಿಕೆ; ಇಲ್ಲಿದೆ ದರಪಟ್ಟಿ
ಚಿನ್ನ
Image Credit source: Shutterstock

Updated on: May 21, 2026 | 11:04 AM

ನವದೆಹಲಿ, ಮೇ 21: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಗುರುವಾರ ಹೆಚ್ಚಿವೆ. ಅಪರಂಜಿ ಚಿನ್ನದ ಬೆಲೆ (gold rates) 16,000 ರೂ ಸಮೀಪಕ್ಕೆ ಹೋಗಿದೆ. 18 ಕ್ಯಾರಟ್ ಚಿನ್ನದ ಬೆಲೆ 12,000 ರೂ ಸಮೀಪ ದೌಡಾಯಿಸಿದೆ. 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು ಗ್ರಾಮ್​ಗೆ 145 ರೂ ಹೆಚ್ಚಿದೆ. ಕಳೆದ ಮೂರು ದಿನಗಳಿಂದ ಇದರ ಬೆಲೆಯಲ್ಲಿ 340 ರೂನಷ್ಟು ಏರಿದೆ. ವಿದೇಶಗಳಲ್ಲಿ ಇದರ ಬೆಲೆ ಏರುಪೇರಾಗಿದೆ. ಬೆಳ್ಳಿ ಬೆಲೆ ಸತತ ಇಳಿಕೆಯ ನಂತರ ಇಂದು ಗ್ರಾಮ್​ಗೆ 5 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,46,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,59,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,46,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 21ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,993 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,660 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,995 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,993 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,660 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,660 ರೂ
  • ಚೆನ್ನೈ: 14,810 ರೂ
  • ಮುಂಬೈ: 14,660 ರೂ
  • ದೆಹಲಿ: 14,675 ರೂ
  • ಕೋಲ್ಕತಾ: 14,660 ರೂ
  • ಕೇರಳ: 14,660 ರೂ
  • ಅಹ್ಮದಾಬಾದ್: 14,665 ರೂ
  • ಜೈಪುರ್: 14,675 ರೂ
  • ಲಕ್ನೋ: 14,675 ರೂ
  • ಭುವನೇಶ್ವರ್: 14,660 ರೂ

ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 556 ರಿಂಗಿಟ್ (13,505 ರುಪಾಯಿ)
  • ದುಬೈ: 507 ಡಿರಾಮ್ (13,309 ರುಪಾಯಿ)
  • ಅಮೆರಿಕ: 141.50 ಡಾಲರ್ (13,640 ರುಪಾಯಿ)
  • ಸಿಂಗಾಪುರ: 180.90 ಸಿಂಗಾಪುರ್ ಡಾಲರ್ (13,628 ರುಪಾಯಿ)
  • ಕತಾರ್: 502.50 ಕತಾರಿ ರಿಯಾಲ್ (13,290 ರೂ)
  • ಸೌದಿ ಅರೇಬಿಯಾ: 514 ಸೌದಿ ರಿಯಾಲ್ (13,206 ರುಪಾಯಿ)
  • ಓಮನ್: 53.60 ಒಮಾನಿ ರಿಯಾಲ್ (13,423 ರುಪಾಯಿ)
  • ಕುವೇತ್: 41.70 ಕುವೇತಿ ದಿನಾರ್ (13,103 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 290 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 290 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us