Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 2,750 ರೂ ಇಳಿಕೆ; ಬೆಳ್ಳಿಯೂ ಅಗ್ಗ

Gold Price 7 June 2026: ಚಿನ್ನ, ಬೆಳ್ಳಿ ಬೆಲೆಗಳ ಸತತ ಇಳಿಕೆ ಈ ವಾರಾಂತ್ಯದಲ್ಲೂ ಮುಂದುವರಿದಿದೆ. ಬಂಗಾರದ ದರ ಗ್ರಾಮ್​ಗೆ 275 ರೂ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ 14,275 ರೂನಿಂದ 14,000 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 15,273 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 265 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 270 ರೂ ಇದೆ.

Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 2,750 ರೂ ಇಳಿಕೆ; ಬೆಳ್ಳಿಯೂ ಅಗ್ಗ
ಚಿನ್ನ
Image Credit source: AI/Mediaforge/TV9

Updated on: Jun 07, 2026 | 11:34 AM

ನವದೆಹಲಿ, ಜೂನ್ 7: ಈ ವಾರಾಂತ್ಯದಲ್ಲಿ ಭಾರತವೂ ಒಳಗೊಂಡಂತೆ ಬಹುತೇಕ ಕಡೆ ಚಿನ್ನದ ಬೆಲೆಯಲ್ಲಿ (Gold Price) ಭರ್ಜರಿ ಇಳಿಕೆ ಆಗಿದೆ. ಭಾರತದಲ್ಲಿ ಹತ್ತು ಗ್ರಾಮ್ ಆಭರಣ ಚಿನ್ನದ ಬೆಲೆ 2,750 ರೂನಷ್ಟು ಕಡಿಮೆಗೊಂಡಿದೆ. ಇದರ ಬೆಲೆ ಗ್ರಾಮ್​ಗೆ 14,000 ರೂ ಮಟ್ಟಕ್ಕೆ ತಗ್ಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಕಡಿಮೆಗೊಂಡಿದೆ. ಬೆಳ್ಳಿ ಬೆಲೆಯೂ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,40,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,273 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,000 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,455 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,273 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,000 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,000 ರೂ
  • ಚೆನ್ನೈ: 14,200 ರೂ
  • ಮುಂಬೈ: 14,000 ರೂ
  • ದೆಹಲಿ: 14,015 ರೂ
  • ಕೋಲ್ಕತಾ: 14,000 ರೂ
  • ಕೇರಳ: 14,000 ರೂ
  • ಅಹ್ಮದಾಬಾದ್: 14,005 ರೂ
  • ಜೈಪುರ್: 14,015 ರೂ
  • ಲಕ್ನೋ: 14,015 ರೂ
  • ಭುವನೇಶ್ವರ್: 14,000 ರೂ

ಇದನ್ನೂ ಓದಿ: Domestic LPG Cylinder Price Hike: ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಶಾಕ್! ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 29 ರೂ. ಹೆಚ್ಚಳ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 576 ರಿಂಗಿಟ್ (13,633 ರುಪಾಯಿ)
  • ದುಬೈ: 521.75 ಡಿರಾಮ್ (13,546 ರುಪಾಯಿ)
  • ಅಮೆರಿಕ: 142.50 ಡಾಲರ್ (13,588 ರುಪಾಯಿ)
  • ಸಿಂಗಾಪುರ: 190.50 ಸಿಂಗಾಪುರ್ ಡಾಲರ್ (14,074 ರುಪಾಯಿ)
  • ಕತಾರ್: 522 ಕತಾರಿ ರಿಯಾಲ್ (13,653 ರೂ)
  • ಸೌದಿ ಅರೇಬಿಯಾ: 537 ಸೌದಿ ರಿಯಾಲ್ (13,638 ರುಪಾಯಿ)
  • ಓಮನ್: 54.85 ಒಮಾನಿ ರಿಯಾಲ್ (13,586 ರುಪಾಯಿ)
  • ಕುವೇತ್: 43.81 ಕುವೇತಿ ದಿನಾರ್ (13,610 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 270 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 270 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us