ಚಿನ್ನ
Image Credit source: Shutterstock
ನವದೆಹಲಿ, ಜೂನ್ 8: ಚಿನ್ನದ ಬೆಲೆಯ ಸತತ ಇಳಿಕೆ ಈ ವಾರವೂ ಶುರುವಾಗಿದೆ. ಈ ಹಳದಿ ಲೋಹದ ಬೆಲೆ (Gold Price) ಸೋಮವಾರ ಗ್ರಾಮ್ಗೆ 95 ರೂಗಳಷ್ಟು ಕಡಿಮೆ ಆಗಿದೆ. ಹಲವು ದಿನಗಳ ನಂತರ 14,000 ರೂ ಮಟ್ಟಕ್ಕಿಂತ ಕೆಳಗೆ ಬಂದಿದೆ. ಆದರೆ ಇವತ್ತು ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಇನ್ನು, ಚಿನ್ನದಂತೆ ಬೆಳ್ಳಿ ಬೆಲೆಯ ಇಳಿಕೆ ಮುಂದುವರಿದೆ. ಇವತ್ತು ಇದರ ಬೆಲೆ ಗ್ರಾಮ್ಗೆ 5 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,39,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,51,690 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,39,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 8ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,169 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,905 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,377 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,169 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,905 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,905 ರೂ
- ಚೆನ್ನೈ: 14,070 ರೂ
- ಮುಂಬೈ: 13,905 ರೂ
- ದೆಹಲಿ: 13,920 ರೂ
- ಕೋಲ್ಕತಾ: 13,905 ರೂ
- ಕೇರಳ: 13,905 ರೂ
- ಅಹ್ಮದಾಬಾದ್: 13,910 ರೂ
- ಜೈಪುರ್: 13,920 ರೂ
- ಲಕ್ನೋ: 13,920 ರೂ
- ಭುವನೇಶ್ವರ್: 13,905 ರೂ
ಇದನ್ನೂ ಓದಿ: ಇಂಟರ್ನೆಟ್ ಬಳಕೆಯಲ್ಲಿ ಮನುಷ್ಯರನ್ನು ಮೀರಿಸಿವೆಯಂತೆ ಎಐ ಏಜೆಂಟ್ಗಳು
ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 576 ರಿಂಗಿಟ್ (13,485 ರುಪಾಯಿ)
- ದುಬೈ: 521.75 ಡಿರಾಮ್ (13,535 ರುಪಾಯಿ)
- ಅಮೆರಿಕ: 142.50 ಡಾಲರ್ (13,579 ರುಪಾಯಿ)
- ಸಿಂಗಾಪುರ: 190.70 ಸಿಂಗಾಪುರ್ ಡಾಲರ್ (14,083 ರುಪಾಯಿ)
- ಕತಾರ್: 522 ಕತಾರಿ ರಿಯಾಲ್ (13,643 ರೂ)
- ಸೌದಿ ಅರೇಬಿಯಾ: 537 ಸೌದಿ ರಿಯಾಲ್ (13,628 ರುಪಾಯಿ)
- ಓಮನ್: 54.85 ಒಮಾನಿ ರಿಯಾಲ್ (13,574 ರುಪಾಯಿ)
- ಕುವೇತ್: 43.81 ಕುವೇತಿ ದಿನಾರ್ (13,600 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 260 ರೂ
- ಚೆನ್ನೈ: 270 ರೂ
- ಮುಂಬೈ: 260 ರೂ
- ದೆಹಲಿ: 260 ರೂ
- ಕೋಲ್ಕತಾ: 260 ರೂ
- ಕೇರಳ: 270 ರೂ
- ಅಹ್ಮದಾಬಾದ್: 260 ರೂ
- ಜೈಪುರ್: 260 ರೂ
- ಲಕ್ನೋ: 260 ರೂ
- ಭುವನೇಶ್ವರ್: 270 ರೂ
- ಪುಣೆ: 260
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ