ಈ ವರ್ಷಾಂತ್ಯದಲ್ಲಿ ಚಿನ್ನದ ಬೆಲೆ 4,900 ಡಾಲರ್ ಮುಟ್ಟಬಹುದು: ಗೋಲ್ಡ್‌ಮನ್ ಸ್ಯಾಕ್ಸ್ ಅಂದಾಜು

Gold price prediction: ಬಂಗಾರದ ದರ ಇನ್ನು ನಾಲ್ಕು ತಿಂಗಳಲ್ಲಿ ಶೇ. 10ರಷ್ಟು ಏರುವ ಸಾಧ್ಯತೆ ಇದೆ. ಜಾಗತಿಕ ಹೂಡಿಕೆ ಏಜೆನ್ಸಿ ಗೋಲ್ಡ್​ಮನ್ ಸ್ಯಾಕ್ಸ್ ಮಾಡಿರುವ ಅಂದಾಜು ಪ್ರಕಾರ, ಚಿನ್ನದ ಬೆಲೆ 2026ರ ಕೊನೆಯೊಳಗೆ ಒಂದು ಔನ್ಸ್​ಗೆ 4,900 ಡಾಲರ್ ಮುಟ್ಟಬಹುದು. ಜಗತ್ತಿನ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನವನ್ನು ಖರೀದಿಸುತ್ತಿರುವುದು ಮೊದಲಾದ ಸಂಗತಿಗಳು ಬಂಗಾರದ ಬೆಲೆ ಏರಿಕೆಗೆ ಕಾರಣವಾಗಿದೆ.

ಈ ವರ್ಷಾಂತ್ಯದಲ್ಲಿ ಚಿನ್ನದ ಬೆಲೆ 4,900 ಡಾಲರ್ ಮುಟ್ಟಬಹುದು: ಗೋಲ್ಡ್‌ಮನ್ ಸ್ಯಾಕ್ಸ್ ಅಂದಾಜು
ಚಿನ್ನ
Image Credit source: PTI

Updated on: Aug 30, 2026 | 1:40 PM

ವಾಷಿಂಗ್ಟನ್, ಆಗಸ್ಟ್ 30: ಸತತ ಇಳಿಕೆಯಾಗಿರುವ ಚಿನ್ನದ ಬೆಲೆ (Gold Price) ಈ ವರ್ಷ ಯಾವ ಗತಿಯಲ್ಲಿ ಸಾಗಬಹುದು? ಜಾಗತಿಕ ಹೂಡಿಕೆ ಸಂಸ್ಥೆಯಾದ ಗೋಲ್ಡ್‌ಮನ್ ಸ್ಯಾಕ್ಸ್ (Goldman Sachs) ಪ್ರಕಾರ, 2026ರ ಅಂತ್ಯದ ವೇಳೆಗೆ ಬಂಗಾರದ ದರವು ಹೊಸ ಎತ್ತರಕ್ಕೆ ತಲುಪಲಿದೆಯಂತೆ. 2026 ರ ಕೊನೆಯ ವೇಳೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ (Ounce) ಚಿನ್ನದ ಬೆಲೆಯು $4,900 ಡಾಲರ್ ತಲುಪುವ ಸಾಧ್ಯತೆಯಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್ ಅಂದಾಜಿಸಿದೆ.

ಈಗ ಸ್ಪಾಟ್ ಗೋಲ್ಡ್ ಬೆಲೆ ಒಂದು ಔನ್ಸ್​ಗೆ 4,453 ಡಾಲರ್ ಇದೆ. ಒಂದು ಔನ್ಸ್ ಎಂದರೆ 28.35 ಗ್ರಾಮ್ ಆಗುತ್ತದೆ. ಒಂದು ಗ್ರಾಮ್​ಗೆ 143.25 ಡಾಲರ್ ಬೆಲೆ ಹೊಂದಿದೆ ಚಿನ್ನ. ಗೋಲ್ಡ್‌ಮನ್ ಸ್ಯಾಕ್ಸ್ ಭವಿಷ್ಯ ಹೇಳಿರುವ ಪ್ರಕಾರ, 2026ರ ಕೊನೆಯಲ್ಲಿ ಚಿನ್ನದ ಬೆಲೆ ಒಂದು ಔನ್ಸ್​ಗೆ 4,900 ಡಾಲರ್ ಆಗುತ್ತದೆ. ಮುಂದಿನ ನಾಲ್ಕು ತಿಂಗಳಲ್ಲಿ ಇದರ ಬೆಲೆ ಶೇ. 10ರಷ್ಟು ಹೆಚ್ಚಬಹುದು. ಆ ಲೆಕ್ಕದಲ್ಲಿ ನೋಡಿದರೆ ಭಾರತದಲ್ಲಿ ಅದರ ಬೆಲೆ ಗ್ರಾಮ್​ಗೆ 17,000-18,000 ರುಪಾಯಿಯಷ್ಟಾಗಬಹುದು.

ಇದನ್ನೂ ಓದಿ: Gold Rates 30 Aug: ಈ ವಾರ ಹತ್ತು ಗ್ರಾಮ್ ಬಂಗಾರದ ಬೆಲೆ 5,050 ಇಳಿಕೆ

ಕೇಂದ್ರ ಬ್ಯಾಂಕ್‌ಗಳಿಂದ ಭಾರಿ ಖರೀದಿ

ಜಾಗತಿಕ ಮಟ್ಟದಲ್ಲಿ ಜಿಯೋಪಾಲಿಟಿಕಲ್ ಉದ್ವಿಗ್ನತೆ (ಭೌಗೋಳಿಕ ರಾಜಕೀಯ ಉದ್ವಿಗ್ನತೆ) ಹೆಚ್ಚುತ್ತಿರುವುದರಿಂದ, ಪ್ರಪಂಚದ ಪ್ರಮುಖ ದೇಶಗಳ ಕೇಂದ್ರ ಬ್ಯಾಂಕ್‌ಗಳು (Central Banks) ಚಿನ್ನವನ್ನು ಭಾರಿ ಪ್ರಮಾಣದಲ್ಲಿ ಖರೀದಿಸಿ ಮೀಸಲಿಡುತ್ತಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಲಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್ ಅಭಿಪ್ರಾಯಪಟ್ಟಿದೆ.

ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಇಳಿಕೆ

ಅಮೆರಿಕದ ಫೆಡರಲ್ ರಿಸರ್ವ್ ವಡ್ಡಿದರಗಳನ್ನು ಕಡಿತಗೊಳಿಸುವ ನಿರೀಕ್ಷೆಯಿರುವುದರಿಂದ, ಡಾಲರ್ ಮೌಲ್ಯದ ಮೇಲೆ ಒತ್ತಡ ಉಂಟಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ (Safe-haven) ಚಿನ್ನದತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಷ್ಟಿರಲೇಬೇಕು

ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಮತ್ತು ಹಣದುಬ್ಬರದ ವಿರುದ್ಧ ತಡೆಗೋಡೆಯಾಗಿ ಚಿನ್ನಕ್ಕೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಲೇ ಇದೆ.

ಈ ಮುನ್ಸೂಚನೆಯು ಭಾರತೀಯ ಮಾರುಕಟ್ಟೆಯಲ್ಲೂ ಪ್ರಭಾವ ಬೀರಲಿದ್ದು, ಮುಂದಿನ ದಿನಗಳಲ್ಲಿ ದೇಶೀಯವಾಗಿಯೂ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರುವ ನಿರೀಕ್ಷೆ ಇದೆ ಎಂಬುದು ತಜ್ಞರ ವಿಶ್ಲೇಷಣೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us