ಭಾರತದಲ್ಲಿ ತಯಾರಿಸಿದ ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳನ್ನು ಅಮೆರಿಕ, ಯೂರೋಪ್​ಗೆ ರಫ್ತು ಮಾಡಲು ಗೂಗಲ್ ಯೋಜನೆ

Google pixel smartphones made-in-India: ಐಫೋನ್​ನಂತೆ ಗೂಗಲ್ ಪಿಕ್ಸೆಲ್ ಸ್ಮಾರ್ಟ್​ಫೋನ್ ಅನ್ನು ಭಾರತದಲ್ಲಿ ತಯಾರಿಸುವ ಕೆಲಸ ಸದ್ಯದಲ್ಲೇ ಆರಂಭವಾಗಲಿದೆ. ತಮಿಳುನಾಡಿನ ಫಾಕ್ಸ್​ಕಾನ್ ಘಟಕದಲ್ಲಿ ಪ್ರಾಯೋಗಿಕ ಉತ್ಪಾದನೆ ನಡೆಯುತ್ತಿದೆ. ತೈವಾನ್ ಮೂಲದ ಮತ್ತೊಂದು ಕಂಪನಿಯಾದ ಕಾಂಪಾಲ್ ಎಲೆಕ್ಟ್ರಾನಿಕ್ಸ್ ಜೊತೆಗೂಡಿ ಡಿಕ್ಸಾನ್ ಸಂಸ್ಥೆಯಿಂದ ಪಿಕ್ಸೆಲ್ ತಯಾರಿಕೆ ನಡೆಯಲಿದೆ. ಈ ಮೇಡ್ ಇನ್ ಇಂಡಿಯಾ ಫೋನ್​ಗಳನ್ನು ಅಮೆರಿಕ, ಯೂರೋಪ್​ಗೆ ರಫ್ತು ಮಾಡುವುದು ಗೂಗಲ್ ಯೋಜನೆ.

ಭಾರತದಲ್ಲಿ ತಯಾರಿಸಿದ ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳನ್ನು ಅಮೆರಿಕ, ಯೂರೋಪ್​ಗೆ ರಫ್ತು ಮಾಡಲು ಗೂಗಲ್ ಯೋಜನೆ
ಗೂಗಲ್
Follow us
|

Updated on: Jul 04, 2024 | 2:15 PM

ನವದೆಹಲಿ, ಜುಲೈ 4: ಭಾರತದಲ್ಲಿ ತಯಾರಿಸಲಾಗುವ ಪಿಕ್ಸೆಲ್ ಶ್ರೇಣಿಯ ಗೂಗಲ್ ಸ್ಮಾರ್ಟ್​ಫೋನ್​ಗಳನ್ನು ಮುಂದುವರಿದ ದೇಶಗಳಿಗೆ ರಫ್ತು ಮಾಡಲು ಗೂಗಲ್ ಸಂಸ್ಥೆ ಯೋಜಿಸಿದೆ. ಆ್ಯಪಲ್​ನ ಐಫೋನ್​ನಂತೆ ಗೂಗಲ್ ಪಿಕ್ಸಲ್ ಸ್ಮಾಟ್​ಫೋನ್​ಗಳೂ ಸದ್ಯದಲ್ಲೇ ಭಾರತದಲ್ಲಿ ತಯಾರಾಗಲಿವೆ. ಐಫೋನ್ ತಯಾರಿಸುವ ಫಾಕ್ಸ್​ಕಾನ್ ಸಂಸ್ಥೆಯೇ ಗೂಗಲ್ ಪಿಕ್ಸೆಲ್ ಅನ್ನೂ ತಯಾರಿಸಿಕೊಡಲಿದೆ. ಡಿಕ್ಸಾನ್ ಟೆಕ್ನಾಲಜೀಸ್​ನ ಉಪಸಂಸ್ಥೆಯಾದ ಪ್ಯಾಡ್ಜೆಟ್ ಎಲೆಕ್ಟ್ರಾನಿಕ್ಸ್ ಕೂಡ ಪಿಕ್ಸೆಲ್ ಉತ್ಪಾದನೆ ಮಾಡಲಿದೆ.

ವಿಶ್ವದ ಅತಿದೊಡ್ಡ ಗುತ್ತಿಗೆ ಆಧಾರಿತ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಾದ ತೈವಾನ್ ಮೂಲದ ಫಾಕ್ಸ್​ಕಾನ್ ತಮಿಳುನಾಡಿನಲ್ಲಿರುವ ತನ್ನ ಘಟಕದಲ್ಲಿ ಪಿಕ್ಸೆಲ್ ಫೋನ್​ಗಳ ಪ್ರಾಯೋಗಿಕ ಉತ್ಪಾದನೆ ಆರಂಭಿಸಿದೆ. ತೈವಾನ್​ನ ಮತ್ತೊಂದು ಎಲೆಕ್ಟ್ರಾನಿಕ್ಸ್ ದೈತ್ಯ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಲ್ಯಾಪ್​ಟಾಪ್ ತಯಾರಕರಾದ ಕಾಮ್​ಪಾಲ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯೊಂದಿಗೆ ಡಿಕ್ಸಾನ್ ಒಪ್ಪಂದ ಮಾಡಿಕೊಂಡಿದ್ದು ಎರಡೂ ಜಂಟಿಯಾಗಿ ಸೇರಿ ಭಾರತದಲ್ಲಿ ಗೂಗಲ್ ಪಿಕ್ಸಲ್ ಸ್ಮಾರ್ಟ್​ಫೋನ್ ತಯಾರಿಸಲಿವೆ. ಈ ವರ್ಷಾಂತ್ಯದೊಳಗೆ ಉತ್ಪಾದನೆ ಶುರುವಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ನಿಮ್ಮ ಆದಾಯದಲ್ಲಿ ಗರಿಷ್ಠ ಎಷ್ಟು ಮೊತ್ತದಷ್ಟು ಟ್ಯಾಕ್ಸ್ ಡಿಡಕ್ಷನ್ಸ್ ಪಡೆಯಬಹುದು? ಇಲ್ಲಿದೆ ಪಟ್ಟಿ

ಮನಿಕಂಟ್ರೋಲ್ ವರದಿ ಪ್ರಕಾರ ಡಿಕ್ಸಾನ್ ಟೆಕ್ನಾಲಜೀಸ್ ಮತ್ತು ಕಾಂಪಾಲ್ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಪಿಕ್ಸಲ್​ನ ಕಡಿಮೆ ಶ್ರೇಣಿಯ ಫೋನ್​​ಗಳ ಉತ್ಪಾದನೆಯಾಗಬಹುದು. ಪಿಕ್ಸೆಲ್​ನ ಪ್ರೋ ಶ್ರೇಣಿಯ ಫೋನ್​ಗಳನ್ನು ಫಾಕ್ಸ್​ಕಾನ್ ಘಟಕದಲ್ಲಿ ತಯಾರಿಸಬಹುದು ಎನ್ನಲಾಗಿದೆ.

ಪಿಎಲ್​ಐ ಸ್ಕೀಮ್​ನ ಅನುಕೂಲ

ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಪಿಕ್ಸೆಲ್ ಫೋನ್ ಉಪಸ್ಥಿತಿ ನಗಣ್ಯವಾಗಿದೆ. ಒಂದು ಪ್ರತಿಶದಷ್ಟು ಮಾರುಕಟ್ಟೆಯೂ ಇಲ್ಲ. ಆದರೂ ಭಾರತದಲ್ಲಿ ಪಿಕ್ಸಲ್ ಫೋನ್ ತಯಾರಿಸಲು ಗೂಗಲ್ ಹೊರಟಿದೆ. ಇದಕ್ಕೆ ಕಾರಣ ಪಿಎಲ್​ಐ ಸ್ಕೀಮ್. ಸರ್ಕಾರದಿಂದ ಸಬ್ಸಿಡಿ ಪಡೆದು ಕಡಿಮೆ ವೆಚ್ಚದಲ್ಲಿ ಫೋನ್ ತಯಾರಿಸಬಹುದು. ಭಾರತದಲ್ಲಿ ಇದಕ್ಕೆ ಮಾರುಕಟ್ಟೆ ಇಲ್ಲದಿದ್ದರೂ ಯೂರೋಪ್, ಅಮೆರಿಕ ದೇಶಗಳಿಗೆ ಇವುಗಳನ್ನು ರಫ್ತು ಮಾಡಬಹುದು.

ಇದನ್ನೂ ಓದಿ: ವಿಯೆಟ್ನಾಂ, ಚೀನಾ ರೀತಿ ಆಮದು ಸುಂಕ ಇಳಿಯಲಿ: ಬಜೆಟ್​ನಿಂದ ಎಲೆಕ್ಟ್ರಾನಿಕ್ ಉದ್ಯಮದ ನಿರೀಕ್ಷೆಗಳಿವು…

ತಯಾರಿಕೆ ವೆಚ್ಚ ಕಡಿಮೆ ಆಗುವುದರಿಂದ ತುಸು ಡಿಸ್ಕೌಂಟ್ ಇತ್ಯಾದಿ ಆಫರ್ ಮಾಡಿ ಭಾರತದಲ್ಲೂ ಒಂದಷ್ಟು ಪಿಕ್ಸೆಲ್ ಫೋನ್​ಗಳ ಮಾರಾಟ ಹೆಚ್ಚಿಸಬಹುದು ಎನ್ನುವುದು ಗೂಗಲ್ ಆಲೋಚನೆಯಾಗಿದೆ. ಸದ್ಯ ಗೂಗಲ್ ಪಿಕ್ಸೆಲ್ ಫೋನ್​ಗಳೆಲ್ಲವೂ ಚೀನಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ತಯಾರಿಸಲ್ಪಡುತ್ತಿವೆ. ಚೀನಾ ಮೇಲೆ ಅವಲಂಬನೆ ಆಗುವುದನ್ನು ತಪ್ಪಿಸಲು ಗೂಗಲ್ ಸಂಸ್ಥೆ ತನ್ನ ಫೋನ್ ತಯಾರಿಕೆಯ ಕೆಲ ಭಾಗವನ್ನು ಭಾರತಕ್ಕೆ ವರ್ಗಾಯಿಸಲು ನಿರ್ಧರಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ