ಭಾರತದಲ್ಲಿ ಪಿಎನ್​ಜಿ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ನಾಂದಿ ಹಾಡುತ್ತಿದೆ ಎಲ್​ಪಿಜಿ ಬಿಕ್ಕಟ್ಟು

Govt makes reform to help rapid expansion of PNG, CNG network across the country: ಯಾವುದೇ ಬಿಕ್ಕಟ್ಟು ಹೊಸ ಮಾರ್ಗೋಪಾಯಗಳಿಗೆ ಅವಕಾಶ ಒದಗಿಸುತ್ತದೆ. ಈಗ ಎಲ್​ಪಿಜಿ ಪೂರೈಕೆಯಲ್ಲಿ ಆಗಿರುವ ಬಿಕ್ಕಟ್ಟು ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ನಿಧಾನಗತಿಯಲ್ಲಿ ಸಾಗುತ್ತಿದ್ದ ಗ್ಯಾಸ್ ಪೈಪ್​ಲೈನ್ ಅಳವಡಿಕೆ ಕಾರ್ಯಕ್ಕೆ ಚುರುಕು ಮುಟ್ಟಿಸಲು ಸರ್ಕಾರ ಹೊಸ ಸುಧಾರಣಾ ಕ್ರಮ ತೆಗೆದುಕೊಂಡಿದೆ.

ಭಾರತದಲ್ಲಿ ಪಿಎನ್​ಜಿ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ನಾಂದಿ ಹಾಡುತ್ತಿದೆ ಎಲ್​ಪಿಜಿ ಬಿಕ್ಕಟ್ಟು
ಪಿಎನ್​ಜಿ

Updated on: Mar 25, 2026 | 2:13 PM

ನವದೆಹಲಿ, ಮಾರ್ಚ್ 25: ಎಲ್​ಪಿಜಿ ಪೂರೈಕೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಈಗ ಭಾರತದಲ್ಲಿ ಪರ್ಯಾಯ ವ್ಯವಸ್ಥೆ ಹೆಚ್ಚಿಸಲು ಅನಿವಾರ್ಯವಾಗಿಸಿದೆ. ಸರ್ಕಾರವು ನೈಸರ್ಗಿಕ ಅನಿಲ (Natural Gas) ಸೌಕರ್ಯಗಳಾದ ಪಿಎನ್​ಜಿ ಮತ್ತು ಸಿಎನ್​ಜಿ ಲಭ್ಯತೆ ಹೆಚ್ಚಿಸಲು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಬೇಕಾದ ಸುಧಾರಣೆಗಳನ್ನು ತರುತ್ತಿದೆ. ಪಿಎನ್​ಜಿ ಸೌಕರ್ಯವನ್ನು ವೇಗವಾಗಿ ಹೆಚ್ಚಿಸಲು ಈ ಸುಧಾರಣೆ ತರಲಾಗಿದೆ. ಈ ಸಂಬಂಧ ಸರ್ಕಾರವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಆದೇಶ 2026 ಅನ್ನು ಹೊರಡಿಸಿದೆ.

ವಿವಿಧ ಪ್ರದೇಶಗಳಿಗೆ ನ್ಯಾಚುರಲ್ ಗ್ಯಾಸ್ ಪೈಪ್​ಲೈನ್ ಹಾಕಲು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟರ್​ಗಳಿಗೆ ಅನೇಕ ತಡೆಗಳು, ಸಮಸ್ಯೆಗಳಿವೆ. ಭೂಮಿ ಸಿಗದೇ ಇರುವುದು, ಅನುಮೋದನೆ ದೊರಕದೇ ಇರುವುದು, ಅಧಿಕ ಶುಲ್ಕ ಇರುವುದು ಇತ್ಯಾದಿ ತಡೆಗಳನ್ನು ನಿವಾರಿಸಿ, ನ್ಯಾಚುರಲ್ ಗ್ಯಾಸ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಗೆ ಪೈಪ್​ಲೈನ್ ಅಳವಡಿಸುವ ಕಾರ್ಯಗಳನ್ನು ಸುಗಮಗೊಳಿಸಲು ಸರ್ಕಾರವು ಏಕರೀತಿಯ ಒಂದು ಫ್ರೇಮ್​ವರ್ಕ್ ರೂಪಿಸುವುದು ಅಗತ್ಯ ಇದೆ ಎಂದು ಪೆಟ್ರೋಲಿಯಂ ಸಚಿವಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ರಷ್ಯಾದಿಂದ 60 ಮಿಲಿಯನ್ ಬ್ಯಾರಲ್ ಕಚ್ಛಾ ತೈಲ ಖರೀದಿಸಿದ ಭಾರತ

ಎಲ್​ಪಿಜಿ ಪೂರೈಕೆಯಲ್ಲಿ ಆಗಿರುವ ವ್ಯತ್ಯಯವನ್ನು ಸರಿದೂಗಿಸಲು ಸರ್ಕಾರವು ನೈಸರ್ಗಿಕ ಅನಿಲದತ್ತ ಗಮನ ಹರಿಸಿದೆ. ನ್ಯಾಚುರಲ್ ಗ್ಯಾಸ್​ಗೆ ಭಾರತವು ಗಲ್ಫ್ ರಾಷ್ಟ್ರಗಳ ಮೇಲೆ ಅವಲಂಬನೆ ಕಡಿಮೆ ಇದೆ. ಹೀಗಾಗಿ, ಎಲ್​ಪಿಜಿಗೆ ಹೋಲಿಸಿದರೆ ಎಲ್​ಎನ್​ಜಿ ಮತ್ತು ಪಿಎನ್​ಜಿ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಆದರೆ, ಪಿಎನ್​ಜಿ ಅಥವಾ ಪೈಪ್ಡ್ ಗ್ಯಾಸ್ ನೆಟ್ವರ್ಕ್ ಎಲ್ಲೆಡೆ ಸಾಕಷ್ಟು ಮಟ್ಟದಲ್ಲಿ ಲಭ್ಯ ಇಲ್ಲದಿರುವುದು ಪ್ರಮುಖ ಹಿನ್ನಡೆಯಾಗಿದೆ.

ಭಾರತದಲ್ಲಿ ಒಂದೂವರೆ ಕೋಟಿಗೂ ಸ್ವಲ್ಪ ಹೆಚ್ಚು ಮನೆಗಳಿಗೆ ಪಿಎನ್​ಜಿ ಕನೆಕ್ಷನ್ ಇದೆ. ಹೆಚ್ಚಿನ ನಗರಗಳಲ್ಲಿ ಪಿಎನ್​ಜಿ ಪೂರೈಕೆ ಇದೆಯಾದರೂ ವ್ಯಾಪಕವಾಗಿ ಪೈಪ್​ಲೈನ್ ಅಳವಡಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಕೆಲ ಪ್ರದೇಶಗಳಲ್ಲಿ ಪೈಪ್​ಲೈನ್ ಇದ್ದರೆ, ಮತ್ತಷ್ಟು ಪ್ರದೇಶಗಳಲ್ಲಿ ಅಳವಡಿಕೆಯೇ ಆಗಿಲ್ಲ. ಹೀಗಾಗಿ, ಹೆಚ್ಚಿನ ಮನೆಗಳಿಗೆ ಪಿಎನ್​ಜಿ ಸಂಪರ್ಕವೇ ಲಭ್ಯ ಇಲ್ಲದಂತಾಗಿದೆ. ಈ ಸಮಸ್ಯೆ ನೀಗಿಸಲು ಸರ್ಕಾರ ಈ ಹೊಸ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ಈ ಆದೇಶವು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟಿಂಗ್ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ಸಿಗಲಿದೆ. ತ್ವರಿತವಾಗಿ ಪೈಪ್​ಲೈನ್​ಗಳನ್ನು ಅಳವಡಿಸಲು ಸಾಧ್ಯವಾಗಬಹುದು. ಇದರಿಂದ ಜನರನ್ನು ಎಲ್​ಪಿಜಿಯಿಂದ ಪಿನ್​ಜಿ ಸಂಪರ್ಕಕ್ಕೆ ವರ್ಗಾಯಿಸುವುದು ಸುಲಭವಾಗುತ್ತದೆ. ಎಲ್​ಪಿಜಿ ತಂದಿರುವ ಬಿಕ್ಕಟ್ಟು ಈಗ ಪಿಎನ್​ಜಿ ಸೌಕರ್ಯ ಹೆಚ್ಚಿಸಲು ಅನುಕೂಲ ಮಾಡಿಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us