AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾದಿಂದ 60 ಮಿಲಿಯನ್ ಬ್ಯಾರಲ್ ಕಚ್ಛಾ ತೈಲ ಖರೀದಿಸಿದ ಭಾರತ

India buys 60 million barrels of Russian crude oil for April delivery: ಭಾರತದ ತೈಲ ಸಂಸ್ಕರಣಾ ಕಂಪನಿಗಳು 60 ಮಿಲಿಯನ್ ಬ್ಯಾರಲ್​ನಷ್ಟು ಕಚ್ಛಾ ತೈಲವನ್ನು ರಷ್ಯಾದಿಂದ ಖರೀದಿಸಿವೆ. ಇವು ಏಪ್ರಿಲ್ ತಿಂಗಳಲ್ಲಿ ಪೂರೈಕೆಯಾಗಲಿವೆ. ರಷ್ಯಾ ಮಾತ್ರವಲ್ಲ, ವೆನಿಜುವೆಲಾದಿಂದಲೂ ಭಾರತ ತೈಲ ಪೂರೈಕೆ ಪಡೆಯುತ್ತಿದೆ. ಸೌದಿ ಮತ್ತು ಇರಾಕ್​ನಿಂದ ಭಾರತ ತೈಲ ಖರೀದಿ ಮಾಡುತ್ತಿದ್ದರೂ, ಹಾರ್ಮುಜ್ ಜಲಸಂಧಿ ದಾಟಿ ಹಡಗುಗಳು ಬರಲಾಗುತ್ತಿಲ್ಲವಾದ್ದರಿಂದ ತೈಲಕ್ಕಾಗಿ ಮತ್ತೆ ರಷ್ಯಾದ ನೆರವು ಪಡೆಯಲಾಗುತ್ತಿದೆ.

ರಷ್ಯಾದಿಂದ 60 ಮಿಲಿಯನ್ ಬ್ಯಾರಲ್ ಕಚ್ಛಾ ತೈಲ ಖರೀದಿಸಿದ ಭಾರತ
ಕಚ್ಛಾ ತೈಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 25, 2026 | 1:31 PM

Share

ನವದೆಹಲಿ, ಮಾರ್ಚ್ 25: ಗಲ್ಫ್ ಭಾಗದಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲದ ಹಿನ್ನೆಲೆಯಲ್ಲಿ ಭಾರತವು ತನ್ನ ಕಚ್ಛಾ ತೈಲ ಅಗತ್ಯಗಳನ್ನು ರಷ್ಯಾದಿಂದ ಪಡೆಯುತ್ತಿದೆ. ಮುಂದಿನ ತಿಂಗಳಿಗಾಗಿ ಭಾರತವು ರಷ್ಯಾದಿಂದ 60 ಮಿಲಿಯನ್ ಬ್ಯಾರಲ್ ಕಚ್ಛಾ ತೈಲವನ್ನು (Russian crude oil) ಖರೀದಿ ಮಾಡಿದೆ ಎಂದು ಬ್ಲೂಮ್​ಬರ್ಗ್ ಸುದ್ದಿ ಏಜೆನ್ಸಿಯು ವರದಿ ಮಾಡಿದೆ.

ಇರಾನ್ ಯುದ್ಧಕ್ಕೆ ಮುನ್ನ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿ ಮಾಡುತ್ತಿದ್ದ ಭಾರತ ಈಗ ಹೆಚ್ಚಿನ ದರ ತೆರಬೇಕಾಗಿದೆ. ಬ್ರೆಂಟ್ ಕ್ರೂಡ್ ದರಗಳಿಗೆ ಹೋಲಿಸಿದರೆ ಒಂದು ಬ್ಯಾರಲ್​ಗೆ 5ರಿಂದ 15 ಡಾಲರ್​ನಷ್ಟು ಹೆಚ್ಚಿನ ಬೆಲೆಗೆ ತೈಲ ಪಡೆಯಲಾಗುತ್ತಿದೆ. ಜಾಗತಿಕವಾಗಿ ತೈಲ ಮತ್ತು ಅನಿಲಗಳಿಗೆ ಬಹಳ ಬೇಡಿಕೆ ಬಂದಿದೆ. ಇವುಗಳ ಪೂರೈಕೆಯೂ ಕೂಡ ಕಷ್ಟಕರ ಸ್ಥಿತಿಯಲ್ಲಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ಭಾರತವು ಏಪ್ರಿಲ್ ತಿಂಗಳ ಡೆಲಿವರಿಗಾಗಿ 60 ಮಿಲಿಯನ್ ಕಚ್ಛಾ ತೈಲ ಖರೀದಿಸಿದೆ. ಮಾರ್ಚ್ ತಿಂಗಳಿಗಾಗಿಯೂ ಇದೇ ಪ್ರಮಾಣದ ತೈಲ ಪಡೆಯಲಾಗಿತ್ತು. ಇರಾನ್ ಯುದ್ಧ ಶುರುವಾದ ಬಳಿಕ ತೈಲ ಪೂರೈಕೆಗೆ ವ್ಯತ್ಯಯ ಆಗುತ್ತಿದ್ದಂತೆಯೇ ಭಾರತವು ರಷ್ಯಾದಿಂದ ತೈಲ ಪಡೆಯಲು ಆರಂಭಿಸಿತು. ಚೀನಾ ಮತ್ತಿತರೆಡೆ ಹೋಗಲು ಅಣಿಯಾಗಿದ್ದ ರಷ್ಯನ್ ತೈಲ ಹಡಗುಗಳು ಭಾರತದ ಬಂದರುಗಳ ಕಡೆಗೆ ಬಂದಿದ್ದವು.

ಹಾರ್ಮುಜ್ ಜಲಸಂಧಿಯಲ್ಲಿ ತಡೆ ಇರುವುದರಿಂದ ರಷ್ಯಾದಿಂದ ತೈಲ ಪಡೆಯಲು ಭಾರತಕ್ಕೆ ಅನುಮತಿಸಿರುವುದಾಗಿ ಅಮೆರಿಕ ತಿಳಿಸಿತ್ತು. ಇದಾದ ಬಳಿಕ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತಕ್ಕೆ ಅಗತ್ಯವಿರುವ ಹೆಚ್ಚಿನ ತೈಲವನ್ನು ರಷ್ಯಾದಿಂದ ಪಡೆಯಲಾಗುತ್ತಿದೆ.

ಭಾರತದ ರಿಫೈನರಿ ಕಂಪನಿಗಳಾದ ಮಂಗಳೂರು ರಿಫೈನರಿ ಮತ್ತು ಪೆಟ್​ರೋಕೆಮಿಕಲ್ಸ್, ಹಿಂದೂಸ್ತಾನ್ ಮಿಟ್ಟಲ್ ಎನರ್ಜಿ ಮೊದಲಾದವು ಈಗ ರಷ್ಯನ್ ಕಚ್ಛಾ ತೈಲದ ಖರೀದಿ ಪುನಾರಂಭಿಸಿವೆ. ಅಮೆರಿಕದ ಒತ್ತಡದ ಕಾರಣಕ್ಕೆ ಈ ರಿಫೈನರಿಗಳು ರಷ್ಯಾದಿಂದ ತೈಲ ಖರೀದಿಯನ್ನು ಡಿಸೆಂಬರ್​ನಲ್ಲಿ ನಿಲ್ಲಿಸಿದ್ದವು. ಸೌದಿ ಅರೇಬಿಯಾ, ಇರಾಕ್​ನಿಂದ ತೈಲ ಪೂರೈಕೆ ಪಡೆಯುತ್ತಿದ್ದವು. ಈ ಗಲ್ಫ್ ದೇಶಗಳಿಂದ ಬುಕ್ ಮಾಡಲಾಗಿದ್ದ ತೈಲವು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿರುವುದರಿಂದ ರಷ್ಯಾದಿಂದ ತೈಲ ಪಡೆಯುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: ಟ್ರಂಪ್ ವರಸೆ ಬದಲು; ಕಚ್ಛಾ ತೈಲ ಬೆಲೆ ದಿಢೀರ್ ಇಳಿಕೆ

ಭಾರತ ಇದೀಗ ರಷ್ಯಾದಿಂದ ಮಾತ್ರವಲ್ಲ, ಒಂದಷ್ಟು ಪ್ರಮಾಣದ ತೈಲವನ್ನು ವೆನಿಜುವೆಲಾದಿಂದಲೂ ಪಡೆಯುತ್ತಿದೆ. ಏಪ್ರಿಲ್​ನಲ್ಲಿ ವೆನಿಜುವೆಲಾದಿಂದ 8 ಮಿಲಿಯನ್ ಬ್ಯಾರಲ್ ಕಚ್ಛಾ ತೈಲ ಭಾರತಕ್ಕೆ ಬರಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us