AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oil Prices: ಟ್ರಂಪ್ ವರಸೆ ಬದಲು; ಕಚ್ಛಾ ತೈಲ ಬೆಲೆ ದಿಢೀರ್ ಇಳಿಕೆ

Crude oil prices come down: ಜಾಗತಿಕ ತೈಲ ಬೆಲೆಗಳು ಬ್ಯಾರಲ್​ಗೆ 100 ಡಾಲರ್ ಗಡಿಯೊಳಗೆ ಬಂದಿವೆ. ಇರಾನ್​ನ ವಿದ್ಯುತ್ ಘಟಕಗಳು ಮತ್ತು ಇಂಧನ ಘಟಕಗಳ ಮೇಲೆ ಮಿಲಿಟರಿ ದಾಳಿಗಳನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆನ್ನುವುದು ಈ ತೈಲ ಬೆಲೆ ಇಳಿಕೆಗೆ ಎಡೆ ಮಾಡಿದೆ. ಎರಡು ದಿನಗಳಿಂದ ಇರಾನ್ ಜೊತೆ ಮಾತುಕತೆ ನಡೆಯುತ್ತಿದೆ. ಈ ವಾರಾದ್ಯಂತ ಮಾತುಕತೆ ಮುಂದುವರಿಯುತ್ತದೆ ಎಂದು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ಹೇಳಿದ್ದಾರೆ.

Oil Prices: ಟ್ರಂಪ್ ವರಸೆ ಬದಲು; ಕಚ್ಛಾ ತೈಲ ಬೆಲೆ ದಿಢೀರ್ ಇಳಿಕೆ
ತೈಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 23, 2026 | 6:06 PM

Share

ನವದೆಹಲಿ, ಮಾರ್ಚ್ 23: ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ ಪರಿಣಾಮ ಗಗನಕ್ಕೇರಿದ್ದ ತೈಲ ಬೆಲೆಗಳು (crude oil prices) ಇದೀಗ ತಗ್ಗಿವೆ. ಸೋಮವಾರ ಬ್ರೆಂಟ್ ಕ್ರೂಡ್ ಶೇ 11ರಷ್ಟು ಕಡಿಮೆ ಆಗಿದೆ. ಒಂದು ಬ್ಯಾರಲ್ ತೈಲದ ಬೆಲೆ 100 ಡಾಲರ್​ಗಿಂತ ಕಡಿಮೆಗೆ ಇಳಿದಿದೆ. ತೈಲ ಬೆಲೆ ಏರಲು ಕಾರಣವಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಟ್ರೂತ್ ಸೋಷಿಯಲ್​ನಲ್ಲಿ ಪೋಸ್ಟ್ ಹಾಕಿದ ಬಳಿಕ ತೈಲ ಬೆಲೆ ಕೆಳ ಜಾರಿದೆ.

ಬ್ರೆಂಟ್ ಮತ್ತು ಡಬ್ಲ್ಯುಟಿಐ ಕ್ರೂಡ್ ಫ್ಯೂಚರ್ ಬೆಲೆಗಳಲ್ಲಿ ಇಳಿಕೆ

ಇರಾನ್​ನ ವಿದ್ಯುತ್ ಘಟಕಗಳು ಮತ್ತು ಇಂಧನ ಘಟಕಗಳ (Energy infrastructure) ಮೇಲೆ ದಾಳಿಯನ್ನು ಐದು ದಿನ ಮುಂದೂಡಿದ್ದೇವೆ. ಎರಡು ದಿನಗಳಿಂದ ಇರಾನ್ ಜೊತೆ ಉತ್ತಮ ಮಾತುಕತೆ ನಡೆಸಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ತಿಳಿಯಾಗುವ ಆಶಾಭಾವನೆ ಮೂಡಿರುವುದರಿಂದ ತೈಲ ಬೆಲೆ ಕಡಿಮೆಗೊಂಡಿರಬಹುದು. ಬ್ರೆಂಟ್ ಪ್ಯೂಚರ್ಸ್ ಮತ್ತು ಡಬ್ಲ್ಯುಟಿಐ ಫ್ಯೂಚರ್ಸ್ ಎರಡೂ ಕೂಡ ಶೇ. 10ಕ್ಕಿಂತಲೂ ಹೆಚ್ಚಿನ ಪ್ರಮಾಣದಷ್ಟು ಕುಸಿತ ಕಂಡಿವೆ.

ಇದನ್ನೂ ಓದಿ: PM Modi speech: ಸಾಧ್ಯವಿರುವೆಡೆಯೆಲ್ಲಾ ತೈಲ ಮತ್ತು ಅನಿಲ ಪಡೆಯುತ್ತಿದ್ದೇವೆ- ಪ್ರಧಾನಿ ಮೋದಿ

ಸೋಮವಾರ ಒಂದು ಹಂತದಲ್ಲಿ ಬ್ರೆಂಟ್ ಫ್ಯೂಚರ್ಸ್ ಬ್ಯಾರಲ್​ಗೆ 98 ಡಾಲರ್ ಬೆಲೆ ಹೊಂದಿತ್ತು. ಡಬ್ಲ್ಯುಟಿಐ ಕ್ರೂಡ್ ಫ್ಯೂಚರ್ಸ್ 91 ಡಾಲರ್ ಬೆಲೆ ಹೊಂದಿತ್ತು. ಟ್ರಂಪ್ ಹೇಳಿಕೆಯ ಪರಿಣಾಮ ಇದು. ಮತ್ತೊಂದು ಸಕಾರಾತ್ಮಕ ವಿಚಾರ ಎಂದರೆ, ಇರಾನ್ ಜೊತೆ ಅಮೆರಿಕ ನಡೆಸಿದ ಮಾತುಕತೆ ಎರಡು ದಿನಕ್ಕೆ ಸೀಮಿತವಾಗಿಲ್ಲ. ಈ ವಾರಾದ್ಯಂತ ಮಾತುಕತೆಗಳು ಮುಂದುವರಿಯಲಿವೆ. ಅಲ್ಲಿಯವರೆಗೆ ಇರಾನ್​ನ ವಿದ್ಯುತ್ ಮತ್ತು ಇಂಧನ ಘಟಕಗಳ ಮೇಲೆ ಮಿಲಿಟರಿ ದಾಳಿಗಳನ್ನು ನಿಲ್ಲಿಸುವಂತೆ ಟ್ರಂಪ್ ಸೂಚಿಸಿದ್ದಾರೆ.

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ ಕಷ್ಟಸಾಧ್ಯ. ಗೋಲ್ಡ್​ಮ್ಯಾನ್ ಸ್ಯಾಕ್ಸ್ ಮಾಡಿರುವ ಅಂದಾಜು ಪ್ರಕಾರ 2026ರಲ್ಲಿ ಬ್ರೆಂಟ್ ಕ್ರೂಡ್​ನಲ್ಲಿ ತೈಲ ಬೆಲೆ ಸರಾಸರಿಯಾಗಿ 85 ಡಾಲರ್ ಇರಬಹುದು ಎನ್ನಲಾಗಿದೆ. ಇನ್ನು ಡಬ್ಲ್ಯುಟಿಐನಲ್ಲಿ ಸರಾಸರಿ ಬೆಲೆ 79 ಡಾಲರ್ ಇರಲಿದೆ ಎಂದು ಗೋಲ್ಡ್​ಮ್ಯಾನ್ ಸ್ಯಾಕ್ಸ್ನ ವರದಿ ಹೇಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ