ಮಾರ್ಚ್​ನಲ್ಲಿ ನಿವ್ವಳ ಜಿಎಸ್​ಟಿ 1.78 ಲಕ್ಷ ಕೋಟಿ ರೂ; ಇಡೀ ವರ್ಷ 19.34 ಲಕ್ಷ ಕೋಟಿ ರೂ ಸಂಗ್ರಹ

Gross GST collections cross 22 lakh crore in 2025-26 fy: ಮಾರ್ಚ್ ತಿಂಗಳಲ್ಲಿ ಒಟ್ಟು ಜಿಎಸ್​ಟಿ ಸಂಗ್ರಹ 2 ಲಕ್ಷ ಕೋಟಿ ರೂ ದಾಟಿದೆ. ಇಡೀ ಹಣಕಾಸು ವರ್ಷದಲ್ಲಿ 22 ಲಕ್ಷ ಕೋಟಿ ರೂಗೂ ಅಧಿಕ ಜಿಎಸ್​ಟಿಯನ್ನು ಸರ್ಕಾರ ಪಡೆದಿದೆ. ರೀಫಂಡ್​ಗಳನ್ನು ಕಳೆದು ಸರ್ಕಾರಕ್ಕೆ ಉಳಿದಿರುವ ನಿವ್ವಳ ಜಿಎಸ್​ಟಿ 19.34 ಲಕ್ಷ ಕೋಟಿ ರೂ. ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳು ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಮಾಡಿವೆ.

ಮಾರ್ಚ್​ನಲ್ಲಿ ನಿವ್ವಳ ಜಿಎಸ್​ಟಿ 1.78 ಲಕ್ಷ ಕೋಟಿ ರೂ; ಇಡೀ ವರ್ಷ 19.34 ಲಕ್ಷ ಕೋಟಿ ರೂ ಸಂಗ್ರಹ
ಜಿಎಸ್​ಟಿ
Image Credit source: Shutterstock

Updated on: Apr 01, 2026 | 8:00 PM

ನವದೆಹಲಿ, ಏಪ್ರಿಲ್ 1: ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ನಿವ್ವಳ ಜಿಎಸ್​ಟಿ ಸಂಗ್ರಹ (GST collections) 1.78 ಲಕ್ಷ ಕೋಟಿ ರೂ ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಜಿಎಸ್​ಟಿ ಸಂಗ್ರಹ ಶೇ. 8.2ರಷ್ಟು ಹೆಚ್ಚಿದೆ. ರೀಫಂಡ್ ಮಾಡಿರುವುದನ್ನೂ ಒಳಗೊಂಡರೆ ಒಟ್ಟೂ ಜಿಎಸ್​ಟಿ ಸಂಗ್ರಹ ಮಾರ್ಚ್​ನಲ್ಲಿ 2 ಲಕ್ಷ ಕೋಟಿ ರೂ ದಾಟಿದೆ. ಇದರಲ್ಲೂ ಕೂಡ ಹಿಂದಿನ ವರ್ಷದಕ್ಕಿಂತ ಶೇ. 8.8ರಷ್ಟು ಹೆಚ್ಚಿದೆ.

ರೀಫಂಡ್ ಪ್ರಮಾಣ ಮಾರ್ಚ್​ನಲ್ಲಿ ಶೇ. 13.8ರಷ್ಟು ಹೆಚ್ಚಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮಾರ್ಚ್​ನಲ್ಲಿ ಜಿಎಸ್​ಟಿ ರೀಫಂಡ್ ಮಾಡಲಾಗಿರುವ ಪ್ರಮಾಣ 22,000 ಕೋಟಿ ರೂ ಎನ್ನಲಾಗಿದೆ.

ಇದನ್ನೂ ಓದಿ: ವಿವಿಧ ಹಣಕಾಸು ಕಾರ್ಯಗಳಿಗೆ ಪ್ಯಾನ್ ನಿಯಮಗಳಲ್ಲಿ ಬದಲಾವಣೆಗಳಿವೆ, ಗಮನಿಸಿ

ಇಡೀ ವರ್ಷಕ್ಕೆ 22 ಲಕ್ಷ ಕೋಟಿ ರೂ ಜಿಎಸ್​ಟಿ

2025-26ರ ಹಣಕಾಸು ವರ್ಷದಲ್ಲಿ 22.27 ಲಕ್ಷ ಕೋಟಿ ರೂನಷ್ಟು ಒಟ್ಟು ಜಿಎಸ್​ಟಿ ಸಂಗ್ರಹ ಆಗಿದೆ. ಹಿಂದಿನ ಹಣಕಾಸು ವರ್ಷದಕ್ಕಿಂತ ಶೇ. 8.3ರಷ್ಟು ಜಿಎಸ್​ಟಿ ಹೆಚ್ಚಿದೆ. ರೀಫಂಡ್ ಕಳೆದು ಬಂದಿರುವ ನಿವ್ವಳ ಜಿಎಸ್​ಟಿ ಸಂಗ್ರಹ 19.34 ಲಕ್ಷ ಕೋಟಿ ರೂ ಇದೆ. ಇದರಲ್ಲಿ ಹೆಚ್ಚಳ ಆಗಿರುವುದು ಶೇ. 7.1ರಷ್ಟು.

ರಾಜ್ಯವಾರು ಜಿಎಸ್​ಟಿ ಸಂಗ್ರಹದ ಲೆಕ್ಕ ತೆಗೆದರೆ ಮಹಾರಾಷ್ಟ್ರ ಯಥಾಪ್ರಕಾರ ಅಗ್ರಸ್ಥಾನಕ್ಕೆ ಬರುತ್ತದೆ. ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ಅತಿಹೆಚ್ಚು ಜಿಎಸ್​ಟಿ ಸಂಗ್ರಹದಲ್ಲಿ ಟಾಪ್-3ನಲ್ಲಿ ಬರುತ್ತವೆ.

ಇದನ್ನೂ ಓದಿ: April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ಎಸ್​ಜಿಎಸ್​ಟಿ ಹಂಚಿಕೆ ಬಳಿಕ ಕರ್ನಾಟಕ, ಹಿಮಾಚಲಪ್ರದೇಶ, ಪಂಜಾಬ್, ಉತ್ತರಾಖಂಡ್, ಹರ್ಯಾಣ, ರಾಜಸ್ಥಾನ್, ಉತ್ತರಪ್ರದೇಶ, ಬಿಹಾರ್, ಗುಜರಾತ್, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ಪಾಸಿಟಿವ್ ಬೆಳವಣಿಗೆ ತೋರಿವೆ.

ಜಮ್ಮು ಕಾಶ್ಮೀರ, ಚಂಡೀಗಡ, ದೆಹಲಿ, ಅರುಣಾಚಲ, ಮೇಘಾಲಯ ಮೊದಲಾದ ರಾಜ್ಯಗಳು ನೆಗಟಿವ್ ಗ್ರೋತ್ ತೋರಿವೆ. ಅಂದರೆ ಹಿಂದಿನ ವರ್ಷದಕ್ಕಿಂತ ಈ ವರ್ಷ ಈ ರಾಜ್ಯಗಳು ಜಿಎಸ್​ಟಿ ಸಂಗ್ರಹದಲ್ಲಿ ಹಿಂದುಳಿದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us