Stock Recommendation To Buy: ಅಲ್ಪಾವಧಿಗೆ ಷೇರು ಖರೀದಿಸಲು ಇಲ್ಲಿವೆ 6 ಶಿಫಾರಸುಗಳು

| Updated By: Srinivas Mata

Updated on: Mar 16, 2022 | 2:09 PM

ಇಲ್ಲಿ 6 ಸ್ಟಾಕ್ ಶಿಫಾರಸುಗಳನ್ನು ನೀಡಲಾಗಿದೆ. ಅಲ್ಪಾವಧಿಗೆ ಇವುಗಳನ್ನು ಖರೀದಿ ಮಾಡಬಹುದು ಎಂದು ಬ್ರೋಕರೇಜ್ ಸಂಸ್ಥೆಯ ವಿಶ್ಲೇಷಕರು ಸಲಹೆ ಮಾಡಿದ್ದಾರೆ.

Stock Recommendation To Buy: ಅಲ್ಪಾವಧಿಗೆ ಷೇರು ಖರೀದಿಸಲು ಇಲ್ಲಿವೆ 6 ಶಿಫಾರಸುಗಳು
ಸಾಂದರ್ಭಿಕ ಚಿತ್ರ
Follow us on

ರಷ್ಯಾದಿಂದ ಉಕ್ರೇನ್ ಮೇಲೆ ದಾಳಿ (Russia-Ukraine Crisis) ನಡೆಸುತ್ತಿರುವುದರಿಂದ ನಿಫ್ಟಿಯಲ್ಲಿ ಮಾರಾಟದ ಒತ್ತಡ ಕಂಡುಬಂದಿದೆ. ಮತ್ತು ಸದ್ಯಕ್ಕಂತೂ ಈ ಬಿಕ್ಕಟ್ಟು ಮುಗಿಯುವಂತೆ ಕಾಣುತ್ತಿಲ್ಲ. ಹೆಚ್ಚಿನ ಕಚ್ಚಾ ತೈಲ ಬೆಲೆ, ಪೂರೈಕೆ ಕಡೆಯ ವ್ಯತ್ಯಯ, ಹಣದುಬ್ಬರ ಹಾಗೇ ಮುಂದುವರಿಯುವಂತೆ ಕಾಣುತ್ತಿದೆ. ಇಂಥ ಸನ್ನಿವೇಶದಲ್ಲಿ ಅಲ್ಪಾವಧಿಗೆ ತಜ್ಞರು ಆರು ಸ್ಟಾಕ್​ಗಳನ್ನು ಶಿಫಾರಸು ಮಾಡಲಾಗಿದೆ. ಇಲ್ಲಿರುವ ಅಭಿಪ್ರಾಯ ವೈಯಕ್ತಿಕವಾದದ್ದು. ಇದಕ್ಕೂ ಟಿವಿ9 ನೆಟ್​ವರ್ಕ್​ಗೆ ಯಾವುದೇ ಸಂಬಂಧ ಇಲ್ಲ. ಹೂಡಿಕೆಗೆ ಮುನ್ನ ವೈಯಕ್ತಿಕವಾಗಿ ನಿರ್ಧಾರ ಕೈಗೊಳ್ಳಬೇಕು. ಇಲ್ಲಿರುವ ಷೇರು ಶಿಫಾರಸುಗಳನ್ನು ರಿಲಯನ್ಸ್ ಸೆಕ್ಯೂರಿಟೀಸ್​ನ ಹಿರಿಯ ವಿಶ್ಲೇಷಕ ವಿಕಾಸ್ ಜೈನ್ ನೀಡಿದ್ದಾರೆ.

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್- ಖರೀದಿ
ಶಿಫಾರಸಿನ ವ್ಯಾಪ್ತಿ: 460ರಿಂದ 450 ರೂಪಾಯಿ
ಗುರಿ: 530 ರೂಪಾಯಿ
ಸ್ಟಾಪ್ ಲಾಸ್: 410

ಕೋಲ್ಗೇಟ್ ಪಾಮೊಲಿವ್: ಖರೀದಿ
ಶಿಫಾರಸಿನ ವ್ಯಾಪ್ತಿ: 1510ರಿಂದ 1470 ರೂಪಾಯಿ
ಗುರಿ: 1750 ರೂಪಾಯಿ
ಸ್ಟಾಪ್ ಲಾಸ್: 1364

ಅಂಬುಜಾ ಸಿಮೆಂಟ್: ಖರೀದಿ
ಶಿಫಾರಸಿನ ವ್ಯಾಪ್ತಿ: 288ರಿಂದ 282 ರೂಪಾಯಿ
ಗುರಿ: 345 ರೂಪಾಯಿ
ಸ್ಟಾಪ್ ಲಾಸ್: 265

ಏಂಜೆಲ್ ಒನ್ ಲಿಮಿಟೆಡ್ ಟೆಕ್ನಿಕಲ್ ಅಂಡ್ ಡೆರಿವೆಟಿವ್ ರೀಸರ್ಚ್ ಹಿರಿಯ ವಿಶ್ಲೇಷಕರು ಓಶೋ ಕೃಷ್ಣನ್ ಶಿಫಾರಸುಗಳು
ಹಿಂದೂಸ್ತಾನ್ ಯುನಿಲಿವರ್: ಖರೀದಿ
ಶಿಫಾರಸಿನ ವ್ಯಾಪ್ತಿ: 2000ರಿಂದ 2020 ರೂಪಾಯಿ
ಗುರಿ: 1890 ರೂಪಾಯಿ
ಸ್ಟಾಪ್ ಲಾಸ್: 2200

ಟಾಟಾ ಪವರ್: ಖರೀದಿ
ಶಿಫಾರಸಿನ ವ್ಯಾಪ್ತಿ: 220ರಿಂದ 228 ರೂಪಾಯಿ
ಗುರಿ: 210 ರೂಪಾಯಿ
ಸ್ಟಾಪ್ ಲಾಸ್: 248

ವಿಪ್ರೋ: ಖರೀದಿ
ಶಿಫಾರಸಿನ ವ್ಯಾಪ್ತಿ: 575ರಿಂದ 585 ರೂಪಾಯಿ
ಗುರಿ: 550 ರೂಪಾಯಿ
ಸ್ಟಾಪ್ ಲಾಸ್: 628

ಇದನ್ನೂ ಓದಿ: Paytm: ಪೇಟಿಎಂ ಸ್ಟಾಕ್ ಮತ್ತೆ ಮತ್ತೆ ಕುಸಿತ; ಮತ್ತೊಮ್ಮೆ ದಾಖಲೆಯ ಕನಿಷ್ಠ ಮಟ್ಟವಾದ 608 ರೂಪಾಯಿ ತಲುಪಿದ ಷೇರು