ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಕುರಿತು ಮಾಹಿತಿ ಇಲ್ಲಿದೆ

ಇದು ಒಂದು ಅಪಘಾತ ವಿಮೆ ಆಗಿದ್ದು, ಭಾರತ ಸರ್ಕಾರದಿಂದ ಪ್ರಾರಂಭಿಸಲಾದ ಯೋಜನೆ. ಅಪಘಾತದಿಂದ ಮರಣ ಹಾಗೂ ಅಪಘಾತದಿಂದ ಅಂಗವೈಕಲ್ಯಗಳಿಗೂ ವಿಮಾ ಸುರಕ್ಷೆ ನೀಡುತ್ತಿದೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಕುರಿತು ಮಾಹಿತಿ ಇಲ್ಲಿದೆ
Follow us
ಅಕ್ಷತಾ ವರ್ಕಾಡಿ
|

Updated on: May 25, 2023 | 6:22 PM

ಇದು ಒಂದು ಅಪಘಾತ ವಿಮೆ ಆಗಿದ್ದು, ಭಾರತ ಸರ್ಕಾರದಿಂದ ಪ್ರಾರಂಭಿಸಲಾದ  ಯೋಜನೆ. ಅಪಘಾತದಿಂದ ಮರಣ ಹಾಗೂ ಅಪಘಾತದಿಂದ ಅಂಗವೈಕಲ್ಯ ಗಳಿಗೂ ವಿಮಾ ಸುರಕ್ಷೆ ನೀಡುತ್ತಿದೆ. ಜಗತ್ತಿನ ಅತಿ ಕಡಿಮೆ ವೆಚ್ಚದ ಅಪಘಾತ ವಿಮೆ ಇದಾಗಿರುತ್ತದೆ. 18ನೇ ವರ್ಷ ತಲುಪಿದ ಪ್ರತಿಯೊಬ್ಬನು ವಿಮೆಯನ್ನು ಹೊಂದುವುದು ಅತಿ ಅವಶ್ಯ, ಕಾರಣ ಅಂಚೆ ಕಚೇರಿ ಅಥವಾ ಬ್ಯಾಂಕ್ ನ್ನು ಸಂಪರ್ಕಿಸಿ. ದಯಮಾಡಿ ತಮಗೆ ಭೇಟಿಯಾದ ಪ್ರತಿಯೊಬ್ಬ ನಿಗೂ PMSBY ಪಡೆದುಕೂಂಡಿದ್ದೀಯಾ ವಿಚಾರಿಸಿ.ಈ  ಕಷ್ಟಕಾಲದಲ್ಲಿ ಆ ಕುಟುಂಬಕ್ಕೆ  ಆಧಾರವಾರಗಿಬಹುದು, ಈ ರೀತಿಯ ಅಪಘಾತ  ವಿಮೆ ಕ್ರಾಂತಿ ಅವಶ್ಯಕ. ಇದು 2015 -16 ನೇ ಇಸ್ವಿಯ ಭಾರತ ಸರಕಾರದ ಆಯವ್ಯಯದಲ್ಲಿ ಘೋಷಿಸಿದಂತಹ ಒಂದು ಮಹತ್ವದ ಯೋಜನೆ.

ಇದು  ಭಾರತದ ಎಲ್ಲಾ ನಾಗರಿಕರಿಗೂ ಅಪಘಾತ ವಿಮೆ ಒದಗಿಸುವ ಯೋಜನೆಯಾಗಿದ್ದು ಅದರಲ್ಲೂ ಮುಖ್ಯವಾಗಿ ಅಸಂಘಟಿತ ಕಾರ್ಮಿಕರ ವರ್ಗಕ್ಕೆ  ವಿಮಾ ಸುರಕ್ಷೆಗಾಗಿ ಮಾಡಿದ ಯೋಜನೆಯಾಗಿದೆ. ಇದನ್ನು ಅಂಚೆ ಕಚೇರಿ ಅಥವಾ ಬ್ಯಾಂಕುಗಳ ಉಳಿತಾಯ ಖಾತೆಯ ಮೂಲಕ ಪಡೆಯಬಹುದಾಗಿದೆ. ಇದು ಎರಡು ಲಕ್ಷ ರೂಪಾಯಿ ಮೊತ್ತದ ಅಪಘಾತ ವಿಮಾ ಯೋಜನೆಯಾಗಿದ್ದು ಇದಕ್ಕೆ ಪ್ರೀಮಿಯಂ ರೂಪದಲ್ಲಿ ರೂಪಾಯಿ 20 ವರ್ಷಕ್ಕೊಮ್ಮೆ ನೀಡಬೇಕಾಗುತ್ತದೆ. ಇದು ಒಂದು ವರ್ಷದ ಯೋಜನೆಯಾಗಿತ್ತು ಪ್ರತಿವರ್ಷ ಪುನರ್ನವೀಕರಣ ಕೊಳ್ಳುತ್ತದೆ. ಯೋಜನೆಗೆ 18 ರಿಂದ 70 ವರ್ಷದ ವರೆಗಿನ ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿದ  ಭಾರತೀಯ ನಾಗರಿಕರು ಸೇರಬಹುದಾಗಿದೆ. ಆಧಾರ್ ಸಂಖ್ಯೆ ಅವಶ್ಯವಾಗಿ ನೀಡಬೇಕಾಗುತ್ತದೆ.

ಇದನ್ನೂ ಓದಿ: ಬಡ್ಡಿ ಮೇಲೆ ಟಿಡಿಎಸ್; ನಿಮ್ಮ ಎಫ್​ಡಿ ಹಣಕ್ಕೆ ನೀವಂದುಕೊಂಡಷ್ಟು ಸಿಗಲ್ಲ ರಿಟರ್ನ್ಸ್; ಇಲ್ಲಿದೆ ಡೀಟೇಲ್ಸ್

ಒಬ್ಬ ನಾಗರಿಕನು ಎರಡು ಲಕ್ಷ ರೂಪಾಯಿಯ ಕೇವಲ ಒಂದು ಅಪಘಾತ ವಿಮೆಯನ್ನು ಹೊಂದಬಹುದು. ಒಂದಕ್ಕಿಂತಲೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ ಈ ವಿಮಾ ಪಡೆದಿದ್ದರೆ  ವಿಮಾ ಮೊತ್ತ ಒಂದು ಆಧಾರ್ ಸಂಖ್ಯೆಗೆ ಮಾತ್ರ ಸೀಮಿತವಾಗಿರುತ್ತದೆ. ಇತರ ಅಪಘಾತ ವಿಮೆಯನ್ನ  ಹೊಂದಿದ್ದರೂ ಕೂಡ ಈ ವಿಮೆಯನ್ನು ಖರೀದಿಸಬಹುದಾಗಿದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ  ಯೋಜನೆಯು ಜೂನ್ 1ರಿಂದ ಮೇ 31ರವರೆಗೆ ಜಾರಿಯಲ್ಲಿರುತ್ತದೆ. ಈ ವಿಮಾ ಯೋಜನೆಯಲ್ಲಿ ಕಾಯುವ ವೇಳೆ ಇಲ್ಲ,ವಿಮಾ ಯೋಜನೆಗೆ ಒಳಪಟ್ಟ ನಂತರ ಎರಡನೇ ದಿನ ಅಪಘಾತದಿಂದ ಸಾವು ಸಂಭವಿಸಿದರೂ ನಾಮನಿರ್ದೇಶಿತರಿಗೆ ವಿಮಾ ಮೊತ್ತ ನೀಡಲಾಗುತ್ತದೆ. ಯೋಜನೆಯಲ್ಲಿ ಅವಧಿಯ ನಂತರ ಯಾವುದೇ ಹಣವನ್ನು ಹಿಂದಿರುಗಿಸಲಾಗುವುದಿಲ್ಲ.

ಯೋಜನೆ ಯಾವಾಗ ಸಮಾಪ್ತಿಗೊಳ್ಳುತ್ತದೆ ?

  • ನಾಗರೀಕನು 70ನೇ ವರ್ಷಕ್ಕೆ ತಲುಪಿದಾಗ ಅಥವಾ  ಉಳಿತಾಯ ಖಾತೆಯನ್ನು ಮುಚ್ಚಿದಾಗ, ಅಥವಾ ಖಾತೆಯಲ್ಲಿ ಅವಶ್ಯವಿರುವಷ್ಟು ಹಣ ಇಲ್ಲದೇ ಇದ್ದಾಗ.
  •  ಈ ಕೆಳಗಿನ ಕಾರಣಗಳಲ್ಲಿ ಮರಣ ಹೊಂದಿದಲ್ಲಿ ಅಥವಾ ಅಂಗವೈಕಲ್ಯ ಹೊಂದಿದ್ದಲ್ಲಿ ಯೋಜನೆ  ವಿಮಾ ಹಣವನ್ನು ನೀಡುತ್ತದೆ.
  • ವಾಹನ ಅಪಘಾತ, ಕೊಲೆ, ಭೂಕಂಪ ಪ್ರವಾಹದಿಂದ ಮರಣ, ವಿಷ ಪ್ರಾಣಿಯ ಕಾರಣದಿಂದ ಸಾವು, ಮರದಿಂದ ಬೀಳುವುದರಿಂದ ಸಾವು. ಆತ್ಮಹತ್ಯೆಯ ಕಾರಣದಿಂದ ಸಾವುಸಂಭವಿದರೆ ಯೋಜನೆ ಯಾವುದೇ ಪರಿಹಾರವನ್ನು ಒದಗಿಸುವುದಿಲ್ಲ.

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್