Gold Investments: ಚಿನ್ನದ ಮೇಲಿನ ಹೂಡಿಕೆಗೆ ವಿವಿಧ ಆಯ್ಕೆಗಳು ಯಾವುವು ಎಂಬ ವಿವರ ಇಲ್ಲಿದೆ

| Updated By: Srinivas Mata

Updated on: Jun 18, 2022 | 10:49 AM

ನೀವು ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕೆ ಬಯಸುತ್ತೀರಾ? ಹಾಗಿದ್ದರೆ ವಿವಿಧ ರೂಪದ ಚಿನ್ನದ ಬಗ್ಗೆ ಮೊದಲಿಗೆ ತಿಳಿದುಕೊಳ್ಳುವುದು ಉತ್ತಮ.

Gold Investments: ಚಿನ್ನದ ಮೇಲಿನ ಹೂಡಿಕೆಗೆ ವಿವಿಧ ಆಯ್ಕೆಗಳು ಯಾವುವು ಎಂಬ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಈ ಹಿಂದೆಲ್ಲ ಚಿನ್ನವನ್ನು (Gold) ಆಭರಣಗಳು, ಚಿನ್ನದ ಗಟ್ಟಿ ಅಥವಾ ನಾಣ್ಯಗಳಂತಹ ಭೌತಿಕ ರೂಪದಲ್ಲಿ ಮಾತ್ರ ಖರೀದಿಸಲಾಗುತ್ತಿತ್ತು. ಆದರೆ ಕಾಲ ಕಳೆದಂತೆ ಈಗ ಚಿನ್ನದ ಮೇಲೆ ಹೂಡಿಕೆ ಮಾಡಲು ವಿಭಿನ್ನ ಮಾರ್ಗಗಳಿರುವುದರಿಂದ ಆಭರಣಗಳ ಮೂಲಕ ಚಿನ್ನದಲ್ಲಿ ಹೂಡಿಕೆ ಮಾಡುವುದು ಒಂದೇ ಮಾರ್ಗವಲ್ಲ ಎಂದು ಅರಿತುಕೊಳ್ಳುವುದು ಉತ್ತಮ. ತಜ್ಞರು ಯಾವಾಗಲೂ ಹೂಡಿಕೆದಾರರಿಗೆ ತಮ್ಮ ಬಂಡವಾಳದ ಕೆಲವು ಪ್ರಮಾಣವನ್ನು ಚಿನ್ನದಲ್ಲಿ ಹೂಡಿಕೆ ಮಾಡಲು ಸಲಹೆ ನೀಡುತ್ತಾರೆ, ಏಕೆಂದರೆ ಇದು ಅಪಾಯವನ್ನು ವೈವಿಧ್ಯಗೊಳಿಸಲು ಸಹಾಯ ಮಾಡುತ್ತದೆ. ಇತರ ಸ್ವತ್ತು ವರ್ಗಗಳು ಹೊಡೆತ ಬಿದ್ದಾಗ ಪಡೆದಾಗ ಚಿನ್ನವು ಪೋರ್ಟ್​ಫೋಲಿಯೋಗೆ ಸ್ಥಿರತೆಯನ್ನು ತರುತ್ತದೆ. ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡಬಹುದಾದ ಕೆಲವು ವಿಧಾನಗಳನ್ನು ನೋಡೋಣ.

ಭೌತಿಕ ರೂಪ

ಚಿನ್ನವನ್ನು ಸಾಮಾನ್ಯವಾಗಿ ಭೌತಿಕ ರೂಪವಾಗಿ ಖರೀದಿಸಲಾಗುತ್ತದೆ. ಮುಖ್ಯವಾಗಿ ಆಭರಣಗಳನ್ನು ಬೆಲೆಬಾಳುವ ಆಯ್ಕೆ ಎಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅದರ ತಯಾರಿಕೆ ವೆಚ್ಚ ಮತ್ತು ಮೌಲ್ಯವನ್ನು ಹಾಕಲಾಗುತ್ತದೆ. ಚಿನ್ನವನ್ನು ಆಭರಣವಾಗಿ ಖರೀದಿಸುವುದು ಹೂಡಿಕೆ ಕಡಿಮೆ ಮತ್ತು ಭಾವನಾತ್ಮಕ ಮೌಲ್ಯವನ್ನು ತೋರುತ್ತದೆ. ಆಭರಣಗಳನ್ನು ಹೊರತುಪಡಿಸಿ, ಭೌತಿಕ ಚಿನ್ನವು ಬಾರ್‌ಗಳು ಮತ್ತು ನಾಣ್ಯಗಳನ್ನು ಒಳಗೊಂಡಿರುತ್ತದೆ. ಎನ್‌ಬಿಎಫ್‌ಸಿಗಳು, ಬ್ಯಾಂಕ್‌ಗಳು ಮತ್ತು ಆಭರಣ ವ್ಯಾಪಾರಿಗಳಿಂದ ವಿವಿಧ ಚಿನ್ನದ ನಾಣ್ಯ ಯೋಜನೆಗಳಿವೆ. ಚಿನ್ನದ ನಾಣ್ಯಗಳನ್ನು ಸಾಮಾನ್ಯವಾಗಿ 5 ಅಥವಾ 10 ಗ್ರಾಂ ತೂಕದಲ್ಲಿ ಖರೀದಿಸಲಾಗುತ್ತದೆ. ಆದರೆ ಬಾರ್‌ಗಳು 20 ಗ್ರಾಂ ತೂಕ ಹೊಂದಿರುತ್ತವೆ. ಎಲ್ಲ ರೀತಿಯ ಭೌತಿಕ ಚಿನ್ನವನ್ನು ಹಾಲ್‌ಮಾರ್ಕ್ ಮಾಡಲಾಗಿರುತ್ತದೆ ಮತ್ತು ಅವುಗಳು ಟ್ಯಾಂಪರ್ ಪ್ರೂಫ್ ಆಗಿರುತ್ತವೆ.

ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು (ಇಟಿಎಫ್‌ಗಳು)

ಚಿನ್ನದ ಇಟಿಎಫ್‌ಗಳು ಮೂಲತಃ ಒಂದು ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ಹೊಂದಿದ್ದು, ವಾಸ್ತವವಾಗಿ ಅದನ್ನು ಹೊಂದುವ ತೊಂದರೆ ಇರುವುದಿಲ್ಲ. ಚಿನ್ನದ ಇಟಿಎಫ್‌ಗಳನ್ನು ಕಾಗದದ ರೂಪದಲ್ಲಿ ಇರುವುದರಿಂದ ಭೌತಿಕವಾಗಿ ಚಿನ್ನವನ್ನು ಹೊಂದುವ ಅಪಾಯವಿಲ್ಲ. ಗೋಲ್ಡ್ ಇಟಿಎಫ್‌ಗಳ ಖರೀದಿ ಮತ್ತು ಮಾರಾಟವು ಡಿಮ್ಯಾಟ್ ಖಾತೆ ಮತ್ತು ಬ್ರೋಕರ್‌ನ ಸಹಾಯದಿಂದ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸಂಭವಿಸಬಹುದು. ನೀವು ಒಂದು ಗ್ರಾಂ ಯೂನಿಟ್‌ನಂತೆ ಕನಿಷ್ಠ ಮೊತ್ತದೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು. ಹೂಡಿಕೆದಾರರು ಅವುಗಳ ವಿರುದ್ಧ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ಚಿನ್ನದ ಇಟಿಎಫ್‌ಗಳನ್ನು ಅಡಮಾನವಾಗಿ ಬಳಸಬಹುದು.

ಸವರನ್ ಗೋಲ್ಡ್ ಬಾಂಡ್‌ಗಳು

ಸವರನ್ ಗೋಲ್ಡ್ ಬಾಂಡ್‌ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುತ್ತದೆ. ಅವುಗಳನ್ನು 1 ಗ್ರಾಂನ ಗುಣಕದಲ್ಲಿ ನೀಡಲಾಗುತ್ತದೆ ಮತ್ತು ನಿರ್ದಿಷ್ಟ ಹೂಡಿಕೆದಾರರು 4 ಕೇಜಿವರೆಗೆ ಖರೀದಿಸಬಹುದು. ಅವುಗಳನ್ನು ಭೌತಿಕ ಚಿನ್ನಕ್ಕೆ ಪರ್ಯಾಯವಾಗಿ ಸರ್ಕಾರಿ ಸೆಕ್ಯೂರಿಟಿಗಳೆಂದು ಪರಿಗಣಿಸಲಾಗುತ್ತದೆ. ಸವರನ್ ಗೋಲ್ಡ್ ಬಾಂಡ್‌ಗಳು ಎಂಟು ವರ್ಷಗಳ ಅವಧಿಯನ್ನು ಹೊಂದಿರುತ್ತವೆ ಮತ್ತು ಹೂಡಿಕೆದಾರರು ಕಳೆದ ಮೂರು ವರ್ಷಗಳಲ್ಲಿ ಮಾತ್ರ ಹಿಂಪಡೆಯಬಹುದು. ಬಾಂಡ್‌ಗಳು ಆರಂಭಿಕ ಹೂಡಿಕೆಯ ಮೇಲೆ ಶೇ 2.5ರ ಬಡ್ಡಿಯನ್ನು ಸಹ ನೀಡುತ್ತವೆ. ಚಂದಾದಾರಿಕೆ ಮುಗಿದ ನಂತರ ಹೂಡಿಕೆದಾರರು ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಬಾಂಡ್‌ಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.

ಡಿಜಿಟಲ್ ಚಿನ್ನ

ಡಿಜಿಟಲ್ ಗೋಲ್ಡ್ ಅನ್ನು ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (MMTC) ಸ್ವಿಟ್ಜರ್ಲೆಂಡ್‌ನ PAMP ಸಹಯೋಗದೊಂದಿಗೆ ನೀಡಲಾಗುತ್ತದೆ. ಡಿಜಿಟಲ್ ವ್ಯಾಲೆಟ್ ಪ್ಲಾಟ್‌ಫಾರ್ಮ್‌ಗಳ ಸಹಾಯದಿಂದ ನಿಮ್ಮ ಮೊಬೈಲ್ ಫೋನ್ ಮೂಲಕ ಡಿಜಿಟಲ್ ಚಿನ್ನವನ್ನು ಸುಲಭವಾಗಿ ಖರೀದಿಸಬಹುದು. ಖರೀದಿಸಿದ ಚಿನ್ನವು MMTC-PAMPಯ ಕಸ್ಟಡಿಯಲ್ಲಿ ಸುರಕ್ಷಿತವಾಗಿರುತ್ತದೆ ಮತ್ತು ಹೂಡಿಕೆದಾರರು ಯಾವಾಗ ಬೇಕಾದರೂ ಡೆಲಿವರಿಗಾಗಿ ಬೇಡಿಕೆ ಸಲ್ಲಿಸಬಹುದಾದ ಐದು ವರ್ಷಗಳ ಅವಧಿಯನ್ನು ಹೊಂದಿರಬಹುದು. ಚಿನ್ನವನ್ನು ನಾಣ್ಯ ಮತ್ತು ಬಾರ್ ಎರಡರಲ್ಲೂ ಖರೀದಿಸಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಯಿಂದ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತದೆ.

ಈ ಮೇಲೆ ಚರ್ಚಿಸಿದಂತೆ, ಚಿನ್ನದಲ್ಲಿ ಹೂಡಿಕೆ ಮಾಡಲು ಹಲವು ಮಾರ್ಗಗಳಿವೆ. ಆದರೆ ಭೌತಿಕ ಚಿನ್ನವು ಅದರ ಸುರಕ್ಷತೆ ಮತ್ತು ತಯಾರಿಕೆಯಲ್ಲಿ ಕೆಲವು ಅಪಾಯಗಳನ್ನು ಹೊಂದಿದೆ ಎಂಬುದು ನಿಜ. ಸವರನ್ ಗೋಲ್ಡ್ ಬಾಂಡ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನೀಡುವುದರಿಂದ ಅವು ಸುರಕ್ಷಿತವಾಗಿರುತ್ತವೆ ಮತ್ತು ಹೂಡಿಕೆಯ ಮೇಲಿನ ಬಡ್ಡಿಯನ್ನು ಸಹ ಒದಗಿಸುತ್ತವೆ. ಅದೇ ರೀತಿ, ಗೋಲ್ಡ್ ಇಟಿಎಫ್‌ಗಳು ತಮ್ಮ ಪಾಲನ್ನು ಹೊಂದಿದ್ದು, ರಿಡೆಂಪ್ಷನ್ ಸಮಯದಲ್ಲಿ ಹೂಡಿಕೆದಾರರು ಪಡೆಯುವ ಬೆಲೆಯು ಮಾರುಕಟ್ಟೆಯ ಬೆಲೆಗೆ ಸಾಕಷ್ಟು ಹತ್ತಿರದಲ್ಲಿದೆ ಮತ್ತು ಹೂಡಿಕೆದಾರರು ಸಹ ಕಲಬೆರಕೆ ಬಗ್ಗೆ ಚಿಂತಿಸಬೇಕಾಗಿಲ್ಲ.

ಆದ್ದರಿಂದ ನೀವು ಹೂಡಿಕೆ ಮಾಡಲು ಬಯಸುವ ಚಿನ್ನದ ಪ್ರಕಾರವನ್ನು ಆಯ್ಕೆ ಮಾಡುವ ಮೊದಲು, ಆರ್ಥಿಕ ಸ್ಥಿರತೆಯನ್ನು ಸಾಧಿಸುವ ನಿಮ್ಮ ಉದ್ದೇಶವನ್ನು ಪೂರೈಸುವ ಸಂಶೋಧನೆಯನ್ನು ಸಂಪೂರ್ಣವಾಗಿ ಮಾಡಿರುವುದಾಗಿ ಖಚಿತಪಡಿಸಿಕೊಳ್ಳಿ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Gold Buying Tips: ಚಿನ್ನವನ್ನು ಖರೀದಿಸುತ್ತಿದ್ದೀರಾ? ಹಾಗಿದ್ದರೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

Published On - 10:49 am, Sat, 18 June 22