ಅದಾನಿಗೆ ‘ಶಾರ್ಟ್’ ಮಾಡಿದ್ದ ಹಿಂಡನ್ಬರ್ಗ್ ಜೊತೆ ಕೋಟಕ್ ಕೂಡ ತಳುಕು; ಸೆಬಿ ನೋಟೀಸ್​ನಲ್ಲಿ ಕೋಟಕ್ ಹೆಸರಿಲ್ಲ ಯಾಕೆ ಎಂದ ಹಿಂಡನ್ಬರ್ಗ್

Hindenburg vs Kotak vs Adani vs SEBI: ಅದಾನಿ ಗ್ರೂಪ್ ವಿರುದ್ಧ ತನ್ನ ವರದಿ ಸಂಬಂಧ ಸೆಬಿಯಿಂದ ತನಗೆ ಶೋಕಾಸ್ ನೋಟೀಸ್ ಬಂದಿದೆ ಎಂದು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಹೇಳಿ, ಸೆಬಿ ನಡೆಯನ್ನು ಲೇವಡಿ ಮಾಡಿದೆ. ಶಕ್ತಿಶಾಲಿ ವ್ಯಕ್ತಿಗಳ ಭ್ರಷ್ಟಾಚಾರ ಮತ್ತು ವಂಚನೆಯನ್ನು ಮುಚ್ಚಿಹಾಕಲು ಸೆಬಿ ಈ ಕೆಲಸ ಮಾಡಿದೆ ಎಂದು ಅಮೆರಿಕದ ಈ ಶಾರ್ಟ್ ಸೆಲ್ಲರ್ ಸಂಸ್ಥೆ ಹೇಳಿದೆ. ಹಾಗೆಯೇ, ಈ ಪ್ರಕರಣದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ಪಾತ್ರ ಇದ್ದರೂ ಅದರ ಹೆಸರನ್ನು ಸೆಬಿ ಯಾಕೆ ಮುಚ್ಚಿಡುತ್ತಿದೆ ಎಂದೂ ಅದು ಕೇಳಿದೆ.

ಅದಾನಿಗೆ ‘ಶಾರ್ಟ್’ ಮಾಡಿದ್ದ ಹಿಂಡನ್ಬರ್ಗ್ ಜೊತೆ ಕೋಟಕ್ ಕೂಡ ತಳುಕು; ಸೆಬಿ ನೋಟೀಸ್​ನಲ್ಲಿ ಕೋಟಕ್ ಹೆಸರಿಲ್ಲ ಯಾಕೆ ಎಂದ ಹಿಂಡನ್ಬರ್ಗ್
ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 02, 2024 | 11:26 AM

ನವದೆಹಲಿ, ಜುಲೈ 2: ಅದಾನಿ ಗ್ರೂಪ್ ಮೇಲೆ ಎರಡು ವರ್ಷದ ಹಿಂದೆ ಗಂಭೀರ ಆರೋಪಗಳನ್ನು ಮಾಡಿ ಉದ್ಯಮ ಸಾಮ್ರಾಜ್ಯದ ಪತನಕ್ಕೆ ಕಾರಣವಾಗಿದ್ದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಮತ್ತೊಂದು ಶಾಕಿಂಗ್ ಸಂಗತಿಯನ್ನು ಬಹಿರಂಗಪಡಿಸಿದೆ. ಅದಾನಿ ಗ್ರೂಪ್ ಸಂಸ್ಥೆಗಳ ಷೇರುಗಳನ್ನು ‘ಶಾರ್ಟ್’ ಮಾಡುವ ಕಾರ್ಯದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್​ನ ಪಾತ್ರವನ್ನು ಅದು ಜಾಹೀರುಗೊಳಿಸಿದೆ. ಹಿಂಡನ್ಬರ್ಗ್ ತನ್ನ ಇನ್ವೆಸ್ಟರ್ ಪಾರ್ಟ್ನರ್ ಸಂಸ್ಥೆ ಮೂಲಕ ಅದಾನಿ ಷೇರುಗಳನ್ನು ಶಾರ್ಟ್ ಮಾಡಿದೆ. ಆಫ್​ಶೋರ್ ಫಂಡ್ ಸ್ಟ್ರಕ್ಚರ್ ಅನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಈ ಆಫ್​ಶೋರ್ ಫಂಡ್ ಅನ್ನು ಹುಟ್ಟುಹಾಕಿ ನಿರ್ವಹಿಸುತ್ತಿರುವುದೇ ಕೋಟಕ್ ಮಹೀಂದ್ರ ಬ್ಯಾಂಕ್ ಎಂದು ಹಿಂಡನ್ಬರ್ಗ್ ಸಂಸ್ಥೆ ಹೇಳಿದೆ.

ಸೆಬಿಯಿಂದ ಶೋಕಾಸ್ ನೋಟೀಸ್ ಬಂದಿದ್ದಕ್ಕೆ ಕೋಟಕ್ ಹೆಸರು ಪ್ರಸ್ತಾಪಿಸಿದ ಹಿಂಡನ್ಬರ್ಗ್

ಲಾಭದ ಆಸೆಯಿಂದ ಅದಾನಿ ಗ್ರೂಪ್​ನ ಷೇರುಗಳ ಮೇಲೆ ಅಕ್ರಮವಾಗಿ ಬೆಟ್ ಇರಿಸಿದ್ದೇವೆ ಎಂದು ತಮಗೆ ಅದಾನಿ ಗ್ರೂಪ್ ಶೋಕಾಸ್ ನೀಡಿದೆ ಎಂದು ಹೇಳಿರುವ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ, ಸೆಬಿಯ ಈ ಕ್ರಮವನ್ನು ನಾನ್​ಸೆನ್ಸ್ ಎಂದು ಬಣ್ಣಿಸಿದೆ.

‘ಭಾರತದಲ್ಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳು ನಡೆಸುವ ಭ್ರಷ್ಟಾಚಾರ ಮತ್ತು ವಂಚನೆಯನ್ನು ಬಹಿರಂಗಪಡಿಸುವವರ ಬಾಯಿ ಮುಚ್ಚಿಸುವ ಪ್ರಯತ್ನ ಇದಾಗಿದೆ. ಸೆಬಿ ಕಳುಹಿಸಿದ ನೋಟೀಸ್​ನಲ್ಲಿ ಕೆ-ಇಂಡಿಯಾ ಆಪೋರ್ಚೂನಿಟೀಸ್ ಫಂಡ್ ಹೆಸರನ್ನು ಪ್ರಸ್ತಾಪಿಸಿದೆ. ಆದರೆ, ಅದು ಕೋಟಕ್ ಮಹೀಂದ್ರ ಬ್ಯಾಂಕ್ ಎಂದು ಸ್ಪಷ್ಟವಾಗಿ ಹೇಳಿಲ್ಲ ಯಾಕೆ? ಮತ್ತೊಬ್ಬ ಪ್ರಭಾವಶಾಲಿ ವ್ಯಕ್ತಿಯನ್ನು ರಕ್ಷಿಸುವ ಕೆಲಸವೂ ಇದಾಗಿದೆ,’ ಎಂದು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಭಾರತದಲ್ಲಿ ನಡೆಯುವ ಮದುವೆ ಸಂಖ್ಯೆ ಚೀನಾಗಿಂತಲೂ ಹೆಚ್ಚು; ವಿವಾಹ ಉದ್ಯಮ ಅಮೆರಿಕದಕ್ಕಿಂತಲೂ ಎರಡು ಪಟ್ಟು ದೊಡ್ಡದು: ಜೆಫರೀಸ್ ವರದಿ

ಇಲ್ಲಿ ಕೆ ಇಂಡಿಯಾ ಆಪೋರ್ಚುನಿಟೀಸ್ ಫಂಡ್ ಅನ್ನು ಕೋಟಕ್ ಮಹೀಂದ್ರ ಇನ್ವೆಸ್ಟ್​ಮೆಂಟ್ ಲಿ ಸಂಸ್ಥೆ ನಿರ್ವಹಿಸುತ್ತದೆ. ಇದು ಉದಯ್ ಕೋಟಕ್ ಅವರ ಕೋಟಕ್ ಮಹೀಂದ್ರ ಬ್ಯಾಂಕ್ ಅಧೀನದಲ್ಲಿರುವ ಸಂಸ್ಥೆಯಾಗಿದೆ. ಹಿಂಡನ್ಬರ್ಗ್ ಹೇಳಿರುವ ಪ್ರಭಾವಶಾಲಿ ವ್ಯಕ್ತಿ ಉದಯ್ ಕೋಟಕ್. ಕುತೂಹಲ ಎಂದರೆ ಉದಯ್ ಕೋಟಕ್ ಅವರು 2017ರಲ್ಲಿ ಸೆಬಿಯ ಕಾರ್ಪೊರೇಟ್ ಗವರ್ನೆನ್ಸ್ ಕಮಿಟಿಯ ಮುಖಂಡತ್ವ ವಹಿಸಿದ್ದರು.

ಯಾರದೋ ಪ್ರಭಾವಕ್ಕೊಳಗಾಗಿ ಸೆಬಿ ವರ್ತನೆ ತೋರುತ್ತಿದೆ. ನಿಜವಾದ ಅಪರಾಧಿಗಳನ್ನು ಮುಚ್ಚಿಟ್ಟು, ಅಪರಾಧದ ಬಗ್ಗೆ ಹೇಳಿದವರ ಬಾಯಿ ಮುಚ್ಚಿಸುವ ಕೆಲಸವನ್ನು ಸೆಬಿ ಮಾಡುತ್ತಿದೆ ಎಂದು ಹಿಂಡನ್ಬರ್ಗ್ ಸಂಸ್ಥೆ ಕಿಡಿಕಾರಿದೆ.

ಹಾಗೆಯೇ, ತನ್ನ ವಿವಿಧ ನೆಟ್ವರ್ಕ್​ಗಳನ್ನು ಬಳಸಿ ಅದಾನಿ ಸ್ಟಾಕ್​ಗಳನ್ನು ಶಾರ್ಟ್ ಮಾಡಿದ್ದೇವೆ ಎಂದು ಸೆಬಿ ಮಾಡಿರುವ ಆರೋಪವನ್ನು ಹಿಂಡನ್ಬರ್ಗ್ ಸಾರಾಸಗಟಾಗಿ ತಳ್ಳಿಹಾಕಿದೆ. ಭಾರತದಲ್ಲಿ ನಮ್ಮ ಒಂದೂ ಕಚೇರಿ ಇಲ್ಲ. ನಮ್ಮವರು ಒಬ್ಬರೂ ಇಲ್ಲಿ ಕೆಲಸ ಮಾಡುತ್ತಿಲ್ಲ. ಅದಾನಿ ಸ್ಟಾಕ್​ಗಳನ್ನು ಶಾರ್ಟ್ ಮಾಡಲು ಒಬ್ಬರೇ ಇನ್ವೆಸ್ಟರ್ ಪಾರ್ಟ್ನರ್ ಜೊತೆ ಡೀಲ್ ಮಾಡಿಕೊಂಡಿದ್ದು ಎಂದು ಅದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಹಣಕಾಸು ಅಕ್ರಮ ತಡೆಯಲು ಭಾರತ ಕೈಗೊಂಡ ಕ್ರಮಕ್ಕೆ ಎಫ್​ಎಟಿಎಫ್ ಮೆಚ್ಚುಗೆ; ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಭಾರತ

‘ಅದಾನಿ ಸಂಸ್ಥೆ ವಿಚಾರದಲ್ಲಿ ನಾವು ಮಾಡಿದ ಕೆಲಸವನ್ನು ಹಣಕಾಸು ದೃಷ್ಟಿಯಿಂದ ಮತ್ತು ವೈಯಕ್ತಿಕ ಸುರಕ್ಷತೆ ದೃಷ್ಟಿಯಿಂದ ನೋಡಿದರೆ ಏನೂ ಲಾಭದಾಯಕ ಅನಿಸುವುದಿಲ್ಲ. ಆದರೂ ಕೂಡ ಈವರೆಗೂ ನಾವು ಅತಿ ಹೆಮ್ಮೆ ಪಡುವ ಕೆಲಸ ಅದಾಗಿದೆ,’ ಎಂದು ಅಮೆರಿಕ ಮೂಲದ ಶಾರ್ಟ್​ಸೆಲ್ಲರ್ ಸಂಸ್ಥೆ ಹಿಂಡನ್ಬರ್ಗ್ ಹೇಳಿಕೊಂಡಿದೆ.

ಶಾರ್ಟ್ ಮಾಡುವುದೆಂದರೇನು?

ಅದಾನಿ ಸ್ಟಾಕ್ ಅನ್ನು ಶಾರ್ಟ್ ಮಾಡಲಾಯಿತು ಎಂದು ಮೇಲಿನ ಸುದ್ದಿಯಲ್ಲಿ ಹೇಳಲಾಗಿದೆ. ಶಾರ್ಟ್ ಎಂದರೆ ಒಂದು ಸ್ಟಾಕು ಕೆಳಗೆ ಕುಸಿಯುವಂತೆ ಮಾಡಿ, ಕಡಿಮೆ ಬೆಲೆಗೆ ಷೇರು ಖರೀದಿಸಿ ಬಳಿಕ ಲಾಭಕ್ಕೆ ಮಾರುವುದು. ಹಿಂಡನ್ಬರ್ಗ್ ವರದಿ ಬಂದ ಬಳಿಕ ಅದಾನಿ ಕಂಪನಿಗಳ ಷೇರುಬೆಲೆ ಪಾತಾಳಕ್ಕೆ ಕುಸಿದುಹೋಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ