ಶೇ. 97.87ರಷ್ಟು ಮರಳಿದ 2,000 ರೂ ನೋಟು; ಇನ್ನೂ ಬರದೇ ಉಳಿದ ಹಣ ಎಷ್ಟಿದೆ ನೋಡಿ

Rs 2,000 note updates: 2023ರ ಮೇ 19ರಂದು ಆರ್​ಬಿಐ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು. 3.56 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳು ಆಗ ಚಲಾವಣೆಯಲ್ಲಿದ್ದವು. ಈಗ ಜೂನ್ 28ರವರೆಗೂ ಆರ್​ಬಿಐಗೆ ಮರಳಿರುವ ನೋಟುಗಳ ಪ್ರಮಾಣ ಶೇ. 97.87 ಎನ್ನಲಾಗಿದೆ. ಆರ್​ಬಿಐ ನೀಡಿರುವ ಮಾಹಿತಿ ಪ್ರಕಾರ 7,581 ಕೋಟಿ ರೂ ಮೌಲ್ಯದ ನೋಟುಗಳು ಇನ್ನೂ ಮರಳಿಲ್ಲ.

ಶೇ. 97.87ರಷ್ಟು ಮರಳಿದ 2,000 ರೂ ನೋಟು; ಇನ್ನೂ ಬರದೇ ಉಳಿದ ಹಣ ಎಷ್ಟಿದೆ ನೋಡಿ
2,000 ರೂ ನೋಟು
Follow us
|

Updated on: Jul 01, 2024 | 6:55 PM

ನವದೆಹಲಿ, ಜುಲೈ 1: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು (Rs 2,000 notes) ಆರ್​ಬಿಐ ಹಿಂಪಡೆದು 13 ತಿಂಗಳ ಮೇಲಾಯಿತು. ಇಲ್ಲಿಯವರೆಗೆ (ಜೂನ್ 28) ಶೇ. 97.87ರಷ್ಟು ನೋಟುಗಳು ಆರ್​ಬಿಐಗೆ ಮರಳಿವೆ. ಇದು ರಿಸರ್ವ್ ಬ್ಯಾಂಕ್ ಪ್ರಕಟಪಡಿಸಿದ ಮಾಹಿತಿಯಾಗಿದೆ. ಆರ್​ಬಿಐ 2023ರ ಮೇ 19ರಂದು 2,000 ರೂ ನೋಟನ್ನು ಚಲಾವಣೆಯಿಂದ ಹಿಂಪಡೆಯಿತು. ಆಗ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದ್ದ ಎರಡು ಸಾವಿರ ರೂ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂ. ಈ ಪೈಕಿ ಬಹುಭಾಗದ ನೋಟು ಮರಳಿವೆ. ಇನ್ನೂ ಬರದೇ ಉಳಿದುಕೊಂಡಿರುವ ನೋಟುಗಳ ಮೌಲ್ಯ 7,581 ಕೋಟಿ ರೂ ಎನ್ನಲಾಗಿದೆ.

ಆರ್​ಬಿಐ ಪ್ರತೀ ತಿಂಗಳು ವರದಿ ಪ್ರಕಟಿಸುತ್ತದೆ. ಕಳೆದ ತಿಂಗಳ ವರದಿಯಲ್ಲಿ ಅದು ನೀಡಿದ ಮಾಹಿತಿಗೆ ಹೋಲಿಸಿದರೆ ಇನ್ನೂ ವಾಪಸ್ ಆಗದ 2,000 ರೂ ನೋಟುಗಳ ಪ್ರಮಾಣ ಶೇ. 2.29ರಷ್ಟು ಕಡಿಮೆ ಆಗಿದೆ. ಮೇ ತಿಂಗಳಲ್ಲಿ 7,755 ಕೋಟಿ ರೂ ಮೌಲ್ಯದ ಎರಡು ಸಾವಿರ ರೂ ನೋಟುಗಳು ಚಲಾವಣೆಯಲ್ಲಿ ಇದ್ದವು. ಈಗ ಅದರ ಪ್ರಮಾಣ 7,581 ಕೋಟಿ ರೂಗೆ ಇಳಿದಿದೆ.

ಇದನ್ನೂ ಓದಿ: ಭಾರತದಲ್ಲಿ ನಡೆಯುವ ಮದುವೆ ಸಂಖ್ಯೆ ಚೀನಾಗಿಂತಲೂ ಹೆಚ್ಚು; ವಿವಾಹ ಉದ್ಯಮ ಅಮೆರಿಕದಕ್ಕಿಂತಲೂ ಎರಡು ಪಟ್ಟು ದೊಡ್ಡದು: ಜೆಫರೀಸ್ ವರದಿ

ಈಗ ಉಳಿದಿರುವ ಎರಡು ಸಾವಿರ ರೂ ನೋಟುಗಳಿಗೆ ಮಾನ್ಯತೆ ಇದೆಯೇ?

ಎರಡು ಸಾವಿರ ರೂ ನೋಟುಗಳನ್ನು ಆರ್​ಬಿಐ ಚಲಾವಣೆಯಿಂದ ಮಾತ್ರವೇ ಹಿಂತೆಗೆದುಕೊಂಡಿರುವುದು. ಈ ನೋಟುಗಳು ಈಗಲೂ ಸಿಂಧುವೇ. ಆದರೆ, ಚಲಾವಣೆ ಆಗುವುದಿಲ್ಲ. ಅಂದರೆ, ಅದನ್ನು ಬಳಸಿ ಖರೀದಿ, ಪಾವತಿ ಇತ್ಯಾದಿ ಹಣದ ವಹಿವಾಟು ಆಗುವುದಿಲ್ಲ. ಅದನ್ನು ಆರ್​ಬಿಐಗೆ ಮರಳಿಸಿದರೆ ಆ ಮೊತ್ತದ ಬೇರೆ ನೋಟುಗಳನ್ನು ಪಡೆಯಬಹುದು.

2,000 ರೂ ನೋಟು ಈಗ ಮರಳಿಸುವುದು ಹೇಗೆ?

ಇತ್ತೀಚಿನವರೆಗೂ ಎರಡು ಸಾವಿರ ರೂ ನೋಟುಗಳನ್ನು ಎಲ್ಲಾ ಬ್ಯಾಂಕುಗಳಲ್ಲಿ ಮರಳಿಸುವ ಅವಕಾಶ ಇತ್ತು. ಈಗ ಆರ್​ಬಿಐನ 19 ಇಷ್ಯೂ ಆಫೀಸ್​ಗಳಲ್ಲಿ ಮಾತ್ರವೇ ನೋಟುಗಳನ್ನು ಹಿಂದಿರುಗಿಸಬಹುದು. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್​ಬಿಐ ಕಚೇರಿಯೂ ಇದರಲ್ಲಿ ಒಂದು.

ಇದನ್ನೂ ಓದಿ: ಕಾರ್ಡ್ ಇಲ್ಲದೇ ಎಟಿಎಂನಲ್ಲಿ ಹಣ ವಿತ್​ಡ್ರಾ ಹೇಗೆ ಮಾಡುವುದು? ಇಲ್ಲಿದೆ ಮಾರ್ಗೋಪಾಯ

ಅಂಚೆ ಕಚೇರಿ ಮೂಲಕ ನೋಟು ಮರಳಿಸಿ…

ಕರ್ನಾಟಕದ ಬೇರೆ ಭಾಗದಲ್ಲಿರುವ ಜನರು ನೋಟು ಮರಳಿಸಲು ಬೆಂಗಳೂರಿಗೆ ಬರುವುದು ಕಷ್ಟವಾಗಬಹುದು. ಅಂಥವರು ಅಂಚೆ ಕಚೇರಿ ಸಹಾಯ ಪಡೆಯಬಹುದು. ಆರ್​ಬಿಐನ ಯಾವುದಾದರೂ ಇಷ್ಯೂ ಆಫೀಸ್​ನ ವಿಳಾಸವನ್ನು ನಮೂದಿಸಿ, ಲಕೋಟೆಯಲ್ಲಿ ನೋಟುಗಳನ್ನಿಟ್ಟು ಪೋಸ್ಟ್ ಮಾಡಬಹುದು. ಅದರಲ್ಲಿ ಬ್ಯಾಂಕ್ ಅಕೌಂಟ್ ಅನ್ನು ನಮೂದಿಸುವುದನ್ನು ಮರೆಯಬೇಡಿ. ಆ ಪತ್ರ ಆರ್​ಬಿಐ ಕಚೇರಿ ತಲುಪಿದ ಬಳಿಕ ನೋಟುಗಳ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು