ಭಾರತೀಯ ನ್ಯಾಯ ಸಂಹಿತೆಯಲ್ಲಿ (BNS- Bharatiya Nyay Samhita) ಪ್ರಸ್ತಾಪಿತವಾಗಿರುವ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ (hit and run case) ಅಪರಾಧಿಗಳಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ನೀಡಲಾಗುತ್ತದೆ. ಈ ವಿಚಾರವಾಗಿ ಟ್ರಕ್ ಡ್ರೈವರ್ಗಳ ಪ್ರತಿಭಟನೆ ನಡೆದಿತ್ತು. ನ್ಯಾಯ ಸಂಹಿತೆಯ ಈ ಕಾನೂನು ಇನ್ನೂ ಜಾರಿಗೆ ಬಂದಿಲ್ಲ. ಹಾಲಿ ಇರುವ ಐಪಿಸಿ ಕಾನೂನಿನಲ್ಲೂ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಅಪರಾಧಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ.
ಹಿಟ್ ಅಂಡ್ ರನ್ ಕೇಸ್ ಎನ್ನುವುದು ಅಪಘಾತದ ಒಂದು ವರ್ಗೀಕರಣ. ವಾಹನದ ಚಾಲಕ ಡ್ರೈವಿಂಗ್ ಮಾಡುವಾಗ ಯಾವುದೇ ವ್ಯಕ್ತಿಗೆ ಡಿಕ್ಕಿ ಹೊಡೆದು, ಬಳಿಕ ಅಲ್ಲಿಂದ ಪರಾರಿಯಾಗುವುದಕ್ಕೆ ಹಿಟ್ ಅಂಡ್ ರನ್ ಎನ್ನುವುದು. ಅಪಘಾತ ಮಾಡುವುದು ಒಂದು ಅಪರಾಧವಾದರೆ, ಘಟನೆ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ಇನ್ನೊಂದು ಅಪರಾಧ.
ಯಾವುದಾದರೂ ಹಿಟ್ ಅಂಡ್ ರನ್ ಪ್ರಕರಣವಾಗಿ ಯಾರಾದರೂ ಸತ್ತರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಎರಡು ಸೆಕ್ಷನ್ಗಳ ಆಯ್ಕೆ ಹೊಂದಿರುತ್ತಾರೆ. ಸೆಕ್ಷನ್ 304 ಮತ್ತು 304ಎ ಇರುತ್ತದೆ. ಈ ಎರಡನೇ ಸೆಕ್ಷನ್ನಲ್ಲಿ ಪ್ರಕರಣ ದಾಖಲಾದರೆ ಗರಿಷ್ಠ ಎರಡು ವರ್ಷದವರೆಗೆ ಶಿಕ್ಷೆ ಇರುತ್ತದೆ. ಸೆಕ್ಷನ್ 304ರಲ್ಲಿ ದಾಖಲಾಗುವ ಪ್ರಕರಣದಲ್ಲಿ 10 ವರ್ಷದವರೆಗೆ ಜೈಲು ಶಿಕ್ಷೆ ಇರುತ್ತದೆ.
ಇದನ್ನೂ ಓದಿ: LPG Users: ಎಲ್ಪಿಜಿ ಗ್ರಾಹಕರಿಗೆ ಉಚಿತ 50 ಲಕ್ಷ ವಿಮೆ; ಕ್ಲೈಮ್ ಮಾಡುವುದು ಹೇಗೆ?
ಡ್ರೈವರ್ ಸಿಗ್ನಲ್ ಜಂಪ್ ಮಾಡಿದ ಪರಿಣಾಮವಾಗಿ ಅಪಘಾತವಾದರೆ ಅದನ್ನು ನಿರ್ಲಕ್ಷ್ಯ ಚಾಲನೆ ಎಂದು ಪರಿಗಣಿಸಲಾಗುತ್ತದೆ. ಅಂಥ ಪ್ರಕರಣವನ್ನು ಸೆಕ್ಷನ್ 304ಎ ಅಡಿಯಲ್ಲಿ ದಾಖಲಿಸಲಾಗುತ್ತದೆ. ಇದಕ್ಕೆ ಎರಡು ವರ್ಷದವರೆಗೆ ಮಾತ್ರವೇ ಶಿಕ್ಷೆ ಇರುತ್ತದೆ. ಬಂಧಿತರಿಗೆ ಜಾಮೀನು ಕೂಡ ಸಿಗುತ್ತದೆ.
ವಾಹನದ ಚಾಲಕ ಕುಡಿದು ಡ್ರೈವ್ ಮಾಡುತ್ತಿದ್ದರೆ ಅಥವಾ ಬೇಕಾಬಿಟ್ಟಿ ವಾಹನ ಚಾಲನೆ ಮಾಡಿ ಅಪಘಾತವಾದರೆ ಆಗ ಪೊಲೀಸರು ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು. ಇದಕ್ಕೆ ಜಾಮೀನು ಸಿಗುವುದಿಲ್ಲ. 10 ವರ್ಷದವರೆಗೆ ಜೈಲುಶಿಕ್ಷೆ ಇರುತ್ತದೆ.
ಇದನ್ನೂ ಓದಿ: Infosys Story: ಎಲ್ಲಾ ಅರ್ಹತೆ ಇದ್ದ ಪತ್ನಿಯನ್ನು ಇನ್ಫೋಸಿಸ್ನಿಂದ ದೂರ ಇಟ್ಟು ತಪ್ಪು ಮಾಡಿದೆ: ಪರಿತಪಿಸಿದ ನಾರಾಯಣಮೂರ್ತಿ
ಪ್ರಸ್ತಾವಿತ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106(2) ಪ್ರಕಾರ ಹಿಟ್ ಅಂಡ್ ರನ್ ಪ್ರಕರಣದಲ್ಲಿ 10 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ