ನಿಮ್ಮ ಸಂಬಳದ ಎಷ್ಟು ಮೊತ್ತವನ್ನು ಗೃಹ ಸಾಲಕ್ಕೆ ಮೀಸಲಿಡುವುದು ಸೂಕ್ತ

ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಗೃಹಸಾಲವನ್ನು ಪಡೆಯುತ್ತಾರೆ. ಲಕ್ಷಾನುಗಟ್ಟಲೇ ರೂಪಾಯಿ ಸಾಲ ಪಡೆಯುವುದರಿಂದ ಇದು ಆರ್ಥಿಕ ಹೊರೆಯಾಗುತ್ತದೆ. ಹೀಗಾಗಿ ಗೃಹ ಸಾಲದ ಇಎಂಐ ಮೊತ್ತವು ನಿಮ್ಮ ಸಂಬಳದ ಶೇಕಡಾ 30 ರಷ್ಟು ಇದ್ದರೆ ಉತ್ತಮ. ಇದು ನಿಮ್ಮ ಆರ್ಥಿಕ ಹೊರೆ ಕಡಿಮೆ ಮಾಡುತ್ತದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ನಿಮ್ಮ ಸಂಬಳದ ಎಷ್ಟು ಮೊತ್ತವನ್ನು ಗೃಹ ಸಾಲಕ್ಕೆ ಮೀಸಲಿಡುವುದು ಸೂಕ್ತ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 18, 2026 | 8:39 PM

ಮುಖ್ಯಾಂಶಗಳು

  • ಮನೆ ಕಟ್ಟುವವರಿಗೆ ಗೃಹ ಸಾಲವು ಅತ್ಯಂತ ಉತ್ತಮ ಆಯ್ಕೆಯಾಗಿದೆ
  • ಇತರೆ ಸಾಲಗಳಿಗೆ ಹೋಲಿಸಿದರೆ ಈ ಸಾಲದ ಬಡ್ಡಿ ದರವು ಕಡಿಮೆ ಇರುತ್ತದೆ
  • ಗೃಹ ಸಾಲದ ಇಎಂಐ ಗರಿಷ್ಟ ಮೊತ್ತವು ನಿಮ್ಮ ಸಂಬಳದ ಶೇಕಡಾ 40ರ ಒಳಗಿರಲಿ

ನೀವೇನಾದ್ರೂ ಮನೆ ಕಟ್ಟುತ್ತಿದ್ರೆ ನೀವು ಗೃಹ ಸಾಲಕ್ಕೆ (Home loan) ಅರ್ಜಿ ಸಲ್ಲಿಸಿರುತ್ತೀರಿ. ಹೌದು, ನೀವು ಗೃಹ ಸಾಲವನ್ನು ಪ್ರತಿ ತಿಂಗಳು ಕಟ್ಟುವ ಮುನ್ನ ಈ ಕೆಲವು ವಿಚಾರಗಳು ತಿಳಿದುಕೊಳ್ಳುವುದು ಅಗತ್ಯ. ಸಾಲ ತೀರಿಸಲು ನೀವು 20 ಅಥವಾ 30 ವರ್ಷಗಳ ಅವಧಿಯನ್ನು ಆರಿಸಿಕೊಂಡರೆ, ಮಾಸಿಕ ಇಎಂಐ ಕಡಿಮೆ ಇರಬಹುದು. ಆದರೆ ದೀರ್ಘಾವಧಿಯಲ್ಲಿ ಪಾವತಿಸುವ ಒಟ್ಟು ಬಡ್ಡಿ ಹೆಚ್ಚಿರುತ್ತದೆ. ನಿಮ್ಮ ಆದಾಯದ ಆಧಾರದ ಮೇಲೆ ಇಎಂಐ ಪಾವತಿಸಿ. ನಿಮ್ಮ ಗೃಹ ಸಾಲದ ಇಎಂಐನ್ನು ನಿಮ್ಮ ಸಂಬಳದೊಂದಿಗೆ ಹೋಲಿಸಿ ಆರ್ಥಿಕ ಹೊರೆಯಿಂದ ಮುಕ್ತರಾಗಲು ಸಾಧ್ಯ.

ಗೃಹ ಸಾಲ ತೀರಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್

  • ಗೃಹ ಸಾಲದ ಇಎಂಐ ಗರಿಷ್ಟ ಮೊತ್ತವು ನಿಮ್ಮ ಸಂಬಳದ ಶೇಕಡಾ 40ರ ಒಳಗಿದ್ದರೆ ಅದು ಅತ್ಯಂತ ಸುರಕ್ಷಿತ ಮೊತ್ತವಾಗಿದೆ.
  • ನಿಮಗೆ ಬೇರೆ ಯಾವುದೇ ಸಾಲಗಳು ಇಲ್ಲದಿದ್ದರೆ ನೀವು ಸಂಬಳದ ಶೇಕಡಾ 40 ರಷ್ಟು ಹಣವನ್ನು ಗರಿಷ್ಠ ಇಎಂಐಯಾಗಿ ಆಯ್ಕೆ ಮಾಡಿಕೊಳ್ಳಿ.
  • ಸಂಬಳದ ಶೇಕಡಾ 30 ರಷ್ಟು ಹಣವನ್ನು ಇಎಂಐ ಪಾವತಿಸಿದರೆ ಇದು ನಿಮ್ಮ ಉಳಿತಾಯ ಹಾಗೂ ಅಗತ್ಯ ಖರ್ಚುಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.
  • ತಿಂಗಳ ಹಾಗೂ ದಿನನಿತ್ಯದ ಖರ್ಚುಗಳು ಮತ್ತು ಇತ್ಯಾದಿಗಳಿಗೆ ಹಣ ಉಳಿಸಿಕೊಳ್ಳಿ.
  • ವೈದ್ಯಕೀಯ ಅಥವಾ ತುರ್ತು ಅಗತ್ಯಗಳಿಗಾಗಿ ಪ್ರತಿ ತಿಂಗಳು ಹಣವನ್ನು ಇಂತಿಷ್ಟು ಹಣವನ್ನು ತೆಗೆದಿಡಿ.
  • ನಿಮ್ಮ ಎಲ್ಲಾ ಸಾಲಗಳ ಇಎಂಐ ಮೊತ್ತವು ನಿಮ್ಮ ಒಟ್ಟು ಸಂಬಳದ ಶೇಕಡಾ 50 ಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಿ.
  • ಬೋನಸ್ ಅಥವಾ ಹೆಚ್ಚುವರಿ ಆದಾಯ ಬಂದಾಗ ಇಎಂಐ ಮೊತ್ತ ಹೆಚ್ಚು ಮೊತ್ತ ಪಾವತಿಸಿ.
  • ವರ್ಷಕ್ಕೊಮ್ಮೆಯಾದರೂ ನಿಮ್ಮ ಉಳಿತಾಯ ಅಥವಾ ಬೋನಸ್‌ನಿಂದ ಸ್ವಲ್ಪ ಹಣವನ್ನು ನೇರವಾಗಿ ಸಾಲದ ಅಸಲಿಗೆ ಸೇರಿಸಿಕೊಳ್ಳಿ.
  • ಸಂಬಳ ಹೆಚ್ಚಾದಂತೆಲ್ಲಾ ನಿಮ್ಮ ಇಎಂಐ ಮೊತ್ತವನ್ನು ಪ್ರತಿ ವರ್ಷ ಶೇಕಡಾ 5 ರಿಂದ 10ರಷ್ಟು ಹೆಚ್ಚಿಸಿಕೊಳ್ಳಿ.
  • ಸಾಲ ತೀರಿಸಲು ನೀವು 20 ಅಥವಾ 30 ವರ್ಷ ಹೀಗೆ ದೀರ್ಘ ಅವಧಿಯನ್ನು ಆರಿಸಿಕೊಳ್ಳಬೇಡಿ.

ಇದನ್ನೂ ಓದಿ: ಸಣ್ಣ ಸಾಲಗಳಿಗೆ ಮನಬಂದಂತೆ ಬಡ್ಡಿವಿಧಿಸುವ ಬ್ಯಾಂಕುಗಳ ಆಟಕ್ಕೆ ಬ್ರೇಕ್ ಹಾಕಹೊರಟ ಆರ್​ಬಿಐ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಗೃಹ ಸಾಲವು ಉತ್ತಮ ಆಯ್ಕೆಯೇ?

ಉತ್ತರ: ಮನೆ ಕಟ್ಟುವವರಿಗೆ ಗೃಹ ಸಾಲವು ಅತ್ಯಂತ ಉತ್ತಮ ಆಯ್ಕೆಯಾಗಿದೆ. ಇತರೆ ಸಾಲಗಳಿಗೆ ಹೋಲಿಸಿದರೆ ಈ ಸಾಲದ ಬಡ್ಡಿ ದರವು ಕಡಿಮೆ ಇರುತ್ತದೆ.

ಪ್ರಶ್ನೆ: ಗೃಹ ಸಾಲದ ಇಎಂಐ ಗರಿಷ್ಟ ಮೊತ್ತವು ಸಂಬಳದ ಎಷ್ಟು ಭಾಗವಿದ್ದರೆ ಉತ್ತಮ?

ಉತ್ತರ: ಗೃಹ ಸಾಲದ ಇಎಂಐ ಗರಿಷ್ಟ ಮೊತ್ತವು ನಿಮ್ಮ ಸಂಬಳದ ಶೇಕಡಾ 40ರ ಒಳಗಿದ್ದರೆ ಅದು ಅತ್ಯಂತ ಸುರಕ್ಷಿತ ಹಾಗೂ ಉತ್ತಮ ಮೊತ್ತವಾಗಿದೆ.

ಪ್ರಶ್ನೆ: ಗೃಹ ಸಾಲ ತೀರಿಸಲು ಹೆಚ್ಚು ದೀರ್ಘ ಸಮಯ ತೆಗೆದುಕೊಳ್ಳಬಾರದು ಏಕೆ?

ಉತ್ತರ: ಗೃಹ ಸಾಲ ತೀರಿಸಲು ಹೆಚ್ಚು ದೀರ್ಘ ಸಮಯ ತೆಗೆದುಕೊಂಡರೆ ಇದು ಬಡ್ಡಿಯನ್ನು ಹೆಚ್ಚಿಸಿ ಆರ್ಥಿಕ ಹೊರೆ ಉಂಟು ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us