AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ಸಾಲಗಳಿಗೆ ಮನಬಂದಂತೆ ಬಡ್ಡಿವಿಧಿಸುವ ಬ್ಯಾಂಕುಗಳ ಆಟಕ್ಕೆ ಬ್ರೇಕ್ ಹಾಕಹೊರಟ ಆರ್​ಬಿಐ

RBI proposed changes to how banks and non-banks calculate interest rates: ಪರ್ಸನಲ್ ಲೋನ್​ನಂತಹ ಸಣ್ಣ ಸಾಲಗಳಿಗೆ ಹಣಕಾಸು ಸಂಸ್ಥೆಗಳು ಮಿತಿ ಮೀತಿ ಬಡ್ಡಿ ವಸೂಲಿ ಮಾಡುವಂತಿಲ್ಲ ಎನ್ನುವ ನಿಯಮ ಜಾರಿಗೆ ತರಲು ಆರ್​ಬಿಐ ಹೊರಟಿದೆ. ಹಣಕಾಸು ಸಂಸ್ಥೆಗಳು ಆನುಯಲ್ ಪರ್ಸೆಂಟೇಜ್ ರೇಟ್​ಗೆ ಮಿತಿ ಇಟ್ಟು ಅದನ್ನು ಮೀರಿ ಬಡ್ಡಿ ನಿಗದಿಯಾಗದಂತೆ ನೋಡಿಕೊಳ್ಳಬೇಕು. ಇಂಥ ಪ್ರಸ್ತಾಪವನ್ನು ರಿಸರ್ವ್ ಬ್ಯಾಂಕ್ ಮಾಡಿದೆ.

ಸಣ್ಣ ಸಾಲಗಳಿಗೆ ಮನಬಂದಂತೆ ಬಡ್ಡಿವಿಧಿಸುವ ಬ್ಯಾಂಕುಗಳ ಆಟಕ್ಕೆ ಬ್ರೇಕ್ ಹಾಕಹೊರಟ ಆರ್​ಬಿಐ
ರುಪಾಯಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 14, 2026 | 3:14 PM

Share

ನವದೆಹಲಿ, ಆಗಸ್ಟ್ 14: ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು (NBFCs) ಸಣ್ಣ ಸಾಲಗಾರರಿಗೆ ವಿಧಿಸುವ ಬಡ್ಡಿ ದರ ಮತ್ತು ಹೆಚ್ಚುವರಿ ಶುಲ್ಕಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ನಿಯಮಗಳನ್ನು ಪ್ರಸ್ತಾವಿಸಿದೆ. ಸಾಲದ ಮೇಲಿನ ಅತಿಯಾದ ದರ ಅಥವಾ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಹಲವು ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ ಕಡಿಮೆ ಇರುವ ಗ್ರಾಹಕರಿಗೆ ವರ್ಷಕ್ಕೆ ಶೇ. 36ರವರೆಗಿನ ಬಡ್ಡಿದರಲ್ಲಿ ವೈಯಕ್ತಿಕ ಸಾಲ ನೀಡುವುದುಂಟು. ಕೆಲ ಎನ್​ಬಿಎಫ್​ಸಿಗಳು ಇನ್ನೂ ಹೆಚ್ಚಿನ ಬಡ್ಡಿದರ ನಿಗದಿ ಮಾಡುವುದುಂಟು. ಫೈನಾನ್ಷಿಯರ್​ಗಳ ರೀತಿಯಲ್ಲಿ ಈ ಹಣಕಾಸು ಸಂಸ್ಥೆಗಳು ಗ್ರಾಹಕರಿಂದ ಬಹುತೇಕ ಸುಲಿಗೆ ಮಾಡುತ್ತವೆ. ಆರ್​ಬಿಐ ಪ್ರಸ್ತಾಪಿಸಿದ ಈ ನಿಯಮಗಳು ಜಾರಿಗೆ ಬಂದಲ್ಲಿ ಈ ಸುಲಿಗೆಗಳಿಗೆ ಕಡಿವಾಣ ಬಿದ್ದೀತು. ಬ್ಯಾಂಕುಗಳು ಮಿತಿ ಮೀರಿದ ಬಡ್ಡಿದರದಲ್ಲಿ ಸಾಲ ನೀಡಲಾಗುವುದಿಲ್ಲ.

ಇದನ್ನೂ ಓದಿ: ಏರ್​ಟೆಲ್​ನ ಜನಪ್ರಿಯ 299 ರೂ ಪ್ಲಾನ್ ರದ್ದು; ಕನಿಷ್ಠ ಅನ್​ಲಿಮಿಟೆಡ್ ಡೇಟಾ ಪ್ಲಾನ್ ಈಗ 349 ರೂ

ಆರ್​ಬಿಐನ ಪ್ರಸ್ತಾಪಿತ ನಿಯಮಗಳ ಹೈಲೈಟ್ಸ್

  • ವಾರ್ಷಿಕ ದರ ನಿಯಂತ್ರಣ: ಆರ್‌ಬಿಐ ಪ್ರಸ್ತಾವನೆಯಂತೆ, ಸಾಲದಾತರು ವಾರ್ಷಿಕ ಶೇಕಡಾವಾರು ದರಕ್ಕೆ (Annual Percentage Rate – APR) ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು. ಈ APR ದರದಲ್ಲಿ ಸಾಲದ ಬಡ್ಡಿ ದರದೊಂದಿಗೆ ಎಲ್ಲಾ ಇತರ ಗುಪ್ತ ಶುಲ್ಕಗಳು ಕೂಡ ಸೇರಿರುತ್ತವೆ.
  • ಸಣ್ಣ ಸಾಲದ ವ್ಯಾಖ್ಯಾನ: ಒಬ್ಬ ವ್ಯಕ್ತಿ ಪಡೆಯುವ ₹50,000 ವರೆಗಿನ ವೈಯಕ್ತಿಕ ಸಾಲವನ್ನು ‘ಸಣ್ಣ ಮೌಲ್ಯದ ಸಾಲ’ (Small value loan) ಎಂದು ವರ್ಗೀಕರಿಸಲಾಗಿದೆ. ಇಂತಹ ಸಾಲಗಳಿಗೆ ವಿಧಿಸುವ ಬಡ್ಡಿ ಮತ್ತು ಶುಲ್ಕಗಳು ಸುಲಿಗೆಯಂತಿರಬಾರದು ಎಂದು ಆರ್‌ಬಿಐ ಎಚ್ಚರಿಸಿದೆ.
  • ಯಾರಿಗೆ ಅನ್ವಯ?: ಈ ನಿಯಮಗಳು ಅಂತಿಮಗೊಂಡ ನಂತರ ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಎನ್‌ಬಿಎಫ್‌ಸಿಗಳು (NBFCs), ಅಡಮಾನ ಸಾಲದಾತರು (Mortgage lenders), ಸಹಕಾರಿ ಬ್ಯಾಂಕುಗಳು ಮತ್ತು ಅಖಿಲ ಭಾರತ ಹಣಕಾಸು ಸಂಸ್ಥೆಗಳಿಗೆ ಅನ್ವಯವಾಗುತ್ತದೆ.
  • ಪಾರದರ್ಶಕತೆ: ಸಾಲದ ದರ ನಿಗದಿಪಡಿಸುವ ವಿಧಾನವು ಪಾರದರ್ಶಕವಾಗಿರಬೇಕು ಮತ್ತು ಸಾಲದಾತರು ತಮ್ಮ ಬೋರ್ಡ್ ಆಫ್ ಡೈರೆಕ್ಟರ್‌ಗಳಿಂದ ಅನುಮೋದಿತವಾದ ಸಮಗ್ರ ನೀತಿಯನ್ನು ಹೊಂದಿರಬೇಕು.
  • ಬಡ್ಡಿದರ ನಿರ್ಧಾರ: ಸಾಲದ ಬಡ್ಡಿದರಗಳನ್ನು ಆಂತರಿಕ ಮಾನದಂಡ (Internal benchmark) ಅಥವಾ ಬಾಹ್ಯ ಮಾನದಂಡ (External benchmark) ಮತ್ತು ರಿಸ್ಕ್ (Risk-based spread) ಆಧರಿಸಿ ನಿರ್ಧರಿಸಬೇಕು. ಯಾವುದೇ ಸಾಲವನ್ನು ನಿಗದಿಪಡಿಸಿದ ಮಾನದಂಡಕ್ಕಿಂತ ಕಡಿಮೆ ದರದಲ್ಲಿ ನೀಡುವಂತಿಲ್ಲ.

ಇದನ್ನೂ ಓದಿ: ಪ್ರಿ-ರೈಡ್ ಟಿಪ್ಸ್ ಬಂದ್‌: ಓಲಾ, ಉಬರ್, ರ‍್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್

ಈ ಕ್ರಮವು ಸಾಲಗಾರರಿಗೆ, ವಿಶೇಷವಾಗಿ ಸಣ್ಣ ಪ್ರಮಾಣದ ಸಾಲ ಪಡೆಯುವವರಿಗೆ ಹೆಚ್ಚಿನ ರಕ್ಷಣೆ ನೀಡಲಿದೆ. ಇದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅತಿಯಾದ ಬಡ್ಡಿ ಅಥವಾ ಗುಪ್ತ ಶುಲ್ಕಗಳನ್ನು ವಿಧಿಸುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us